ನಾಪೋಕ್ಲು ಮೇ 29 NEWS DESK : ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸವನ್ನು ಒಳಗೊಂಡ ಸಂಸ್ಥೆಯನ್ನು ಶೀಘ್ರದಲ್ಲಿ ಸ್ಥಾಪಿಸಿ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಏಳಿಗೆಗಾಗಿ ಶ್ರಮಿಸಲಾಗುವುದು ಎಂದು ಕೊಡಗು ಜಿಲ್ಲಾ ಖಾಜಿ ಎಂ.ಎಂ.ಅಬ್ದುಲ್ ಫೈಜಿ ಉಸ್ತಾದ್ ಹೇಳಿದರು.
ನಾಪೋಕ್ಲುವಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಬುಖಾರ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನೂತನ ಕಚೇರಿ ಉದ್ಘಾಟನೆ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಸೈಯದ್ ಉಮರಲಿ ಶಿಯಾಬ್ ತಂಗಳ್, ಪೂಕಳಂ ಅಬ್ದುಲ್ ಉಸ್ತಾದ್ ,ಟ್ರಸ್ಟ್ ಅಧ್ಯಕ್ಷ ಹಮೀದ್ ಹಾಜಿ ಬೆಟ್ಟಗೇರಿ, ಬುಖಾರದ ಕೇರಳ ಘಟಕದ ಅಧ್ಯಕ್ಷ ಸುರೂರ್ ಮೊಯಿದು ಹಾಜಿ , ಕಾರ್ಯದರ್ಶಿ ಅಬ್ದುಲ್ ರಹಿಂ ರಿಜ್ವ, ಕೋಶಾಧಿಕಾರಿ ನಾಸಿರ್ ಹಾಜಿ, ಪ್ರಮುಖರಾದ ಬಶೀರ್ ಆರಂಗಡಿ ,ನಾಪೋಕ್ಲು ಜಮಾಯತ್ ಅಧ್ಯಕ್ಷ ಎಂ, ಹೆಚ್ ಅಬ್ದುಲ್ ರಹಿಮಾನ್, ಬುಕಾರ ಸಂಸ್ಥೆಯ ಕೊಡಗು ಘಟಕದ ಸಂಚಾಲಕ ಪಿ.ಎ0.ಅಬ್ದುಲ್ ರಶೀದ್, ಚೇರಿ ಕಾರ್ಯದರ್ಶಿ ಎಂ.ಎಸ್ ಮೊಹಮ್ಮದ್ ಅಲಿ ಹಳೆತಾಲೂಕು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ ಇಸ್ಮಾಯಿಲ್ , ಉದ್ಯಮಿ ಮನ್ಸೂರ್ ಅಲಿ, ಆಬೀದ್ ಪಿ.ಎಸ್, ಹಮೀದ್ ಕೆ.ವೈ , ಅಬೂಬಕರ್, ಆಸಿಫ್, ಗಪೂರ್, ಮಹಮ್ಮದ್ ಕಿಕ್ಕರೆ, ಎಮ್ಮೆಮಾಡು ಗ್ರಾಮ ಪಂಚಾಯಿತಿ ಸದಸ್ಯ ಮೋಹಿನ್ ಹಾಜಿ, ಸಾದಲಿ ಚೆರಿಯಪರಂಬು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.