ನಾಪೋಕ್ಲು ಮೇ 31 NEWS DESK : ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಿಗೆ ದಾಳಿ ಮಾಡಿ ಅಪಾರ ನಷ್ಟ ಸಂಭವಿಸಿದ್ದು, ಬೆಳೆಗಾರರು ಆತಂಕಕ್ಕೆ ಈಡಾಗಿದ್ದಾರೆ.
ಬಲ್ಲಮಾವಟ್ಟಿ ಗ್ರಾ.ಪಂ ವ್ಯಾಪ್ತಿಯ ನೆಲಜಿ ಗ್ರಾಮದ ಮೊಣ್ಣಂಡ ಸೀತಮ್ಮ ಮತ್ತು ಅಪ್ಪಯ್ಯ ಅವರ ತೋಟದಲ್ಲಿ ರಾತ್ರಿ ಅಡ್ಡಾಡಿರುವ ಕಾಡಾನೆಗಳು ಬಾಳೆ, ತೆಂಗು, ಅಡಿಕೆ ಸೇರಿದಂತೆ ವಿವಿಧ ಕೃಷಿ ಗಿಡಗಳನ್ನು ನಾಶಪಡಿಸಿವೆ.
ಸುತ್ತಮುತ್ತಲ ಕಾಫಿ ಬೆಳೆಗಾರರ ತೋಟಗಳಿಗೂ ಹಾನಿಯಾಗಿದೆ. 3-4 ಕಾಡಾನೆಗಳ ಹಿಂಡು ನಿರಂತರ ತೋಟಗಳಲ್ಲಿ ಹಾನಿ ಉಂಟುಮಾಡುತ್ತಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. –
ವರದಿ : ದುಗ್ಗಳ ಸದಾನಂದ.