ಮಡಿಕೇರಿ, ಜೂ.25 NEWS DESK : ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೂತನ ಉಪ ನಿರ್ದೇಶಕ (ಆಡಳಿತ )ರಾಗಿ ರಂಗಧಾಮಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ.
ನೂತನ ಡಿಡಿಪಿಐ ರಂಗಧಾಮಪ್ಪ ಅವರು ಡಿಡಿಪಿಐ ಹುದ್ದೆಯ ಪ್ರಭಾರದಲ್ಲಿದ್ದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯ ಪ್ರಾಂಶುಪಾಲ ಎಂ.ಚಂದ್ರಕಾಂತ್ ಅವರಿಂದ ಅಧಿಕಾರ ಸ್ವೀಕರಿಸಿದರು.
ತುಮಕೂರು ಜಿಲ್ಲಾ ಡಿಡಿಪಿಐ ಕಛೇರಿಯಲ್ಲಿ ಉಪ ಯೋಜನಾ ಸಮನ್ವಯಾಧಿಕಾರಿ( ಡಿ.ವೈ.ಪಿ.ಸಿ.) ಯಾಗಿ ಸೇವೆ ಸಲ್ಲಿಸುತ್ತಿದ್ದ ರಂಗಧಾಮಪ್ಪ ಅವರು ಮುಂಬಡ್ತಿ ಹೊಂದಿ ಕೊಡಗು ಜಿಲ್ಲೆಯ ಡಿಡಿಪಿಐ ಆಗಿ ಸರ್ಕಾರ ನೇಮಕ ಮಾಡಿದೆ.
ಸೇನಾ ಜಿಲ್ಲೆ ಎಂದು ಹೆಸರಾಗಿರುವ ಕೊಡಗಿನಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳಿಂದ ಕೂಡಿರುವ ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿಯೊಂದಿಗೆ ಶಾಲೆಗಳ ಬಲವರ್ಧನೆಗೆ ವಿಶೇಷ ಗಮನ ಹರಿಸಲಾಗುವುದು ಎಂದು ನೂತನ ಡಿಡಿಪಿಐ ರಂಗಧಾಮಪ್ಪ ತಿಳಿಸಿದ್ದಾರೆ.