ನಾಪೋಕ್ಲು ಜೂ.29 NEWS DESK : ವಿದ್ಯೆ, ಬುದ್ಧಿವಂತಿಕೆ ಯಾರ ಸ್ವತ್ತಲ್ಲ ವಿದ್ಯಾರ್ಥಿಗಳು ತಮ್ಮ ಸ್ವಂತ ಸಾಮರ್ಥ್ಯದಿಂದ ಮುಂದೆ ಬರಬೇಕು ಎಂದು ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೇದುರ ವಿಶಾಲ ಹೇಳಿದರು.
ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ 2024- 25ರ ಸಾಲಿನ ವಿದ್ಯಾರ್ಥಿ ಸಂಘದವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ಶಾಲಾ ಹಂತದಲ್ಲಿ ರಚಿಸಲಾಗುವ ಸಂಘವು ವಿದ್ಯಾರ್ಥಿಯ ಭವಿಷ್ಯಕ್ಕೆ ಪೂರಕವಾಗಿರುತ್ತದೆ ಎಂದ ಅವರು ಮೌಲ್ಯ ನಿರ್ಣಯವೂ ಸಹ ವಿದ್ಯಾರ್ಥಿಗಳಿಗೆ ಪರಿಪೂರ್ಣತೆಯನ್ನು ಒದಗಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲೇ ಮುಂದಿನ ಭವಿಷ್ಯದ ಬಗ್ಗೆ ಕನಸು ಕಂಡು ಅದನ್ನು ನನಸಾಗಿಸಲು ಶಿಸ್ತು, ಸೈಂಯಮ ಮತ್ತು ಶ್ರದ್ಧೆಯಿಂದ ಶ್ರಮಿಸುವಂತಾಗಬೇಕು ಎಂದು ಹಿತವಚನ ನುಡಿದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಸಂಸ್ಥೆಯ ನಿರ್ದೇಶಕರಾದ ಪ್ರೊ.ಕಲ್ಯಾಟಂಡ ಪೂಣಚ್ಚ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆಯ ಮಾಜಿ ಅಧ್ಯಕ್ಷರ ಕೊಡುಗೆ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಮಕ್ಕಳಿಗೆ ಹಿತವಚನವನ್ನು ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಕಲ್ಯಾಣಂಡ ಶಾರದ ಮಾತನಾಡಿ, ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಹೊಂದಿ ಓದುವುದರ ಜೊತೆಗೆ ಉತ್ತಮ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿ ನಾಯಕರು ತಮಗೆ ವಹಿಸಿದ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿ ಇತರರಿಗೆ ಮಾದರಿಯಾಗಬೇಕು ಎಂದು ಶುಭ ಹಾರೈಸಿದರು.
ಶ್ರೀರಾಮ ಟ್ರಸ್ಟ್ ಆಡಳಿತ ಮಂಡಳಿಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ನೆರವಂಡ ದೇವಯ್ಯ, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ನಿರ್ದೇಶಕರಾದ ಬಿದ್ದಾಟಂಡ ಪಾಪ ಮುದ್ದಯ್ಯ, ಬೊಪ್ಪಂಡ ಕುಶಾಲಪ್ಪ, ಕೊಂಬಂಡ ಗಣೇಶ, ಬೊಳ್ಳಚೆಟ್ಟೀರ ಸುರೇಶ್, ಅಪ್ಪಚೆಟ್ಟೋಳoಡ ನವೀನ್ ಅಪ್ಪಯ್ಯ, ಕಲಿಯಂಡ ಕೌಶಿಕ್ ಕುಶಾಲಪ್ಪ ಹಾಜರಿದ್ದರು.
ಪ್ರಾಂಶುಪಾಲರಾದ ಬಿ.ಎಂ.ಶಾರದ ಸ್ವಾಗತಿಸಿದರು. ಕೆ.ಎಸ್.ಶೋಭಾ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ಅತಿಥಿಗಳ ಪರಿಚಯ ಮಾಡಿ, ಶಿಕ್ಷಕಿ ಲೀಲಾವತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿ.ಎಸ್ ಅನಿತ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
:: ಶಾಲಾ ನೂತನ ಆಡಳಿತ ಮಂಡಳಿ ::
ಶಾಲಾ ನಾಯಕಿಯಾಗಿ ಬಿ.ಎಸ್.ವಿಶಾಲಾಕ್ಷಿ, ಉಪನಾಯಕನಾಗಿ ಕೆ.ಎಂ.ನಿರನ್ ನಂಜಪ್ಪ, ಕಾರ್ಯದರ್ಶಿಯಾಗಿ ಕೆ.ಎಸ್.ಸಾನ್ವಿಕ, ಸಾಂಸ್ಕೃತಿಕ ನಾಯಕಿಯಾಗಿ ಬಿ.ಬಿ.ರಿನ್ ಶಾನ, ಉಪನಾಯಕನಾಗಿ ಕೆ.ಹೆಚ್.ಶಾಲಿನಿ, ಕಾರ್ಯದರ್ಶಿಯಾಗಿ ಪಿ.ಎಸ್.ಸಹನಾ ಆಯ್ಕೆಯಾದರು.
ಶಾಲಾ ಕ್ರೀಡಾ ನಾಯಕಿಯಾಗಿ ಕೆ.ಎಸ್.ಆಕಾಶ್, ಉಪನಾಯಕನಾಗಿ ಕೆ.ವೈ.ಮಹಮ್ಮದ್, ಕಾರ್ಯದರ್ಶಿಯಾಗಿ ಬಿ.ಎಂ.ಗಾನವಿ, ಶಾಲಾ ಸ್ವಚ್ಛತಾ ನಾಯಕನಾಗಿ ಪಿ.ಎಂ.ದೇವಯ್ಯ, ನಾಯಕಿಯಾಗಿ ಡಿ.ಪಿ.ಕೃಪಾ ಹಾಗೂ ಕಾರ್ಯದರ್ಶಿಯಾಗಿ ಪಿ.ಎಸ್.ಸಮನ್ವಿತ ಆಯ್ಕೆಯಾದರು.
ವರದಿ : ದುಗ್ಗಳ ಸದಾನಂದ.