ವಿರಾಜಪೇಟೆ ಜು.4 NEWS DESK : ದೇವಣಗೇರಿ ಬಿ.ಸಿ.ಪ್ರೌಢಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು.
ವಿರಾಜಪೇಟೆಯ ಆರಕ್ಷಕ ಠಾಣೆಯ ಚಂದ್ರಶೇಖರ್ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ವಿಷಯ ವಿವರಣೆಯನ್ನು ನೀಡಿದರು.
ಸಮಾಜದಲ್ಲಿ ಜರುಗುತ್ತಿರುವ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮ ಹಾಗೂ ಸಂಚಾರಿ ನಿಯಮಗಳನ್ನು ವಿವರಿಸಿದರು. ಅಂತರ್ಜಾಲ ವಂಚನೆಗಳನ್ನು ವಿವರಿಸಿ ಎಚ್ಚರಿಕೆ ನೀಡಿದರು. ತಂಬಾಕು ಉತ್ಪನ್ನಗಳು ಮಾರಕ ಆದರೂ ಅದನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಅವುಗಳ ಮೊರೆ ಹೋಗಬಾರದು ಎಂದರಲ್ಲದೆ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಹಾಗೂ ಬಳಕೆ ಮಾಡುವುದು ಅಪರಾಧ ಹಾಗೂ ಆರೋಗ್ಯದ ದೃಷ್ಟಿಯಿಂದ ಯಾವುದೆ ತಂಬಾಕು ಹಾಗೂ ಮದ್ಯಪಾನ ಸೇವನೆ ಮಕ್ಕಳಿಗೆ ಮಾರಕವಾಗಿ ಜೀವನದಲ್ಲಿ ಸದಾ ಅಂಗವಿಕಲತೆಯಿಂದ, ರೋಗದಿಂದ ಬಳಲಬೇಕಾಗತ್ತದೆ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಹೆಚ್.ಡಿ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರತಿಜ್ಞಾವಿಧಿ ಬೋಧಿಸಿ ದಿನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಆರಕ್ಷಕ ಠಾಣೆ ಆರಕ್ಷಕರಾದ ವಿಜು, ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.