ಮಡಿಕೇರಿ ಜು.4 NEWS DESK : ಮಡಿಕೇರಿ ಬನ್ನಿಮಂಟಪದ ಸ್ವಸ್ತಿಕ್ ಯುವ ವೇದಿಕೆ ಯ 23ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಅಂಚೆಮನೆ ಸತೀಶ್ ಕುಟ್ಟಪ್ಪ, ಉಪಾಧ್ಯಕ್ಷರಾಗಿ ವಿಕ್ರಂ ವಿಜಯ್ ಕುಮಾರ್, ಪ್ರದಾನ ಕಾರ್ಯದರ್ಶಿಯಾಗಿ ಡಿ.ಜಯಣ್ಣ ಆಯ್ಕೆಯಾಗಿದ್ದಾರೆ ಎಂದು ಸಮಿತಿ ಯ ಸಂಸ್ಥಾಪಕ ಅಧ್ಯಕ್ಷ ಕುಲದೀಪ್ ಪೂಣಚ್ಚ ತಿಳಿಸಿದ್ದಾರೆ.
ಜಂಟಿ ಕಾರ್ಯದರ್ಶಿಯಾಗಿ ಶಿವರಾಜ್, ಸಹ ಕಾರ್ಯದರ್ಶಿಯಾಗಿ ಚರಣ್, ಖಜಾಂಚಿಯಾಗಿ ಹೊಯ್ಸಳ, ಜಂಟಿ ಖಜಾಂಚಿಯಾಗಿ ಮಿಲನ್, ಸಹ ಖಜಾಂಚಿಯಾಗಿ ಪುನೀತ್, ಅಲಂಕಾರ ಸಮಿತಿ ಗೆ ರಮೇಶ್ ಮತ್ತು ಜಗ್ಗಿ, ಮೆರವಣಿಗೆ ಸಮಿತಿ ಗೆ ಸೋನಲ್ ಪೂಜಾರಿ ಹಾಗೂ ಪ್ರಶಾಂತ್ ನೇಮಕಗೊಂಡಿದ್ದಾರೆ.
ಆಹಾರ ಸಮಿತಿ ಗೆ ಹೇಮಂತ್ ಕುಮಾರ್ ಹಾಗೂ ಜ್ಞಾನ ಕುಮಾರ್, ಧ್ವನಿವರ್ಧಕ ಸಮಿತಿ ಗೆ ಮನು ಹಾಗೂ ಬ್ರಿಜೇಶ್, ಗೌರವ ಅಧ್ಯಕ್ಷರಾಗಿ ಗಣೇಶ್ ಹಾಗೂ ಮಂಜುನಾಥ್, ನಿರ್ದೇಶಕರಾಗಿ ಎಂ.ಎಸ್.ಪ್ರಸಾದ್, ಸಲಹೆಗಾರರಾಗಿ ಸವಿತಾ ರಾಕೇಶ್, ಪ್ರೇಮ ರಾಮಯ್ಯ, ರಶ್ಮಿ ಪ್ರವೀಣ್ ನೇಮಕಗೊಂಡಿದರೆ ಎಂದು ಕುಲದೀಪ್ ಪೂಣಚ್ಚ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









