ನಾಪೋಕ್ಲು ಜು.6 NEWS DESK : ಲಯನ್ಸ್ ಮತ್ತು ಲಿಯೋ ಕ್ಲಬ್ ನ 2024- 25ರ ಸಾಲಿನ ನೂತನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ಬಿನ ನೂತನ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಕಾರ್ಯದರ್ಶಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಖಜಾಂಚಿ ಕಾಂಡಂಡ ರೇಖಾ ಪೊನ್ನಣ್ಣ, ಲಿಯೋ ನೂತನ ಅಧ್ಯಕ್ಷ ಅಂಕುರ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಉಮ್ಮು ಹಬೀಬ, ಕಾರ್ಯದರ್ಶಿ ಬಿ.ಸಿ.ನವಲ್ ನಾಚಪ್ಪ ಹಾಗೂ ಖಜಾಂಚಿ ದ್ರುವ್ ದೇವಯ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕನ್ನಂಬಿರ ಸುಧಿ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಡ್ಡೀರ ನಳಿನಿ ಪೂವಯ್ಯ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಕುಡುಪಿ ಅರವಿಂದ್ ಶೆಣೈ PMJF (VPG 1) ಮಂಗಳೂರು ಲಯನ್ಸ್ ಜಿಲ್ಲೆ ಉಪರಾಜ್ಯಪಾಲ ಪದಗ್ರಹಣ ಅಧಿಕಾರಿಗಳಾಗಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಲೈನ್ಸ್ ಸಂಸ್ಥೆಯ ಧ್ಯೇಯ ಉದ್ದೇಶಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಖಜಾಂಚಿ ಅಪ್ಪುಮಣಿಯoಡ ಬನ್ಸಿ ಭೀಮಯ್ಯ, ನಿರ್ಗಮಿತ ಕಾರ್ಯದರ್ಶಿ ಮಾದೆಯoಡ ಬಿ ಕುಟ್ಟಪ್ಪ, ಪ್ರಾಂತಿಯ ಅಧ್ಯಕ್ಷರಾದ ಕುಟ್ಟಂಡ ಕನ್ನಿಕಾ ಅಯ್ಯಪ್ಪ, ವಲಯ ಅಧ್ಯಕ್ಷ ಕನ್ನ0ಡ ಬೊಳ್ಳಪ್ಪ, ನಾಪೋಕ್ಲು ಲಿಯೋ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಕೆಟೋಳಿರ ಗಾಯನ ಗೌರಮ್ಮ, ಲೈನ್ಸ್ನ ಕೆಟೋಳಿರ ಎಸ್ ಕುಟ್ಟಪ್ಪ, ಕೋಟೆರ ಡಾ.ಪಂಚಮ್ ತಿಮ್ಮಯ್ಯ ,ಕುಡಿಯೋಳಂಡ ರಮೇಶ್ ಮುದ್ದಯ್ಯ, ಪಿ.ಆರ್.ಒ ಮುಕ್ಕಾಟಿರ ವಿನಯ್, ಕೆಟೋಳಿರ ರತ್ನ ಚರ್ಮಣ, ಕುಡಿಯೋಳಂಡ ಗಣೇಶ್ ಮುತ್ತಪ್ಪ, ಅಪ್ಪರಂಡ ಸುಭಾಷ್ ತಿಮ್ಮಯ್ಯ ,ಶಿಚಾಳಿಯಂಡ ಲವ ಕಾಳಪ್ಪ, ಕಾಡಾoಡ ಪೊನ್ನಣ್ಣ, ಕುಂಚೆಟ್ಟಿರ ಸುದ್ದಿ, ಅಪ್ಪಚೆಟ್ಟೋಳoಡ ನವೀನ್, ವಸಂತ, ಮಂದಪಂಡ ಪುಷ್ಪ ಅಪ್ಪಚ್ಚು, ತಿಮ್ಮಯ್ಯ, ಅಪ್ಪಚ್ಚು, ಮಂದಪ್ಪ ಹಾಜರಿದ್ದರು.
ಇದಕ್ಕೂ ಮುನ್ನ ಅಂಕುರ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ವರದಿ : ದುಗ್ಗಳ ಸದಾನಂದ