ಮಡಿಕೇರಿ ಜು.9 NEWS DESK : ಚಿರತೆ ದಾಳಿಗೆ ಒಂದೂವರೆ ವರ್ಷದ ಕರು ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮದ ಹಾಡಿಯೊಂದರ ಬಳಿ ನಡೆದಿದೆ. ಹಾಡಿಯ ನಿವಾಸಿ ಜಯ ಎಂಬುವವರಿಗೆ ಸೇರಿದ ಕರು ಮನೆಯ ಸಮೀಪ ಮೇಯುತ್ತಿದ್ದಾಗ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಇದರಿಂದ ಹಾಡಿಯ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ವಿಷಯವರಿತ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆರ್‌ಆರ್‌ಟಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆಯ ಚಲನವಲನ ಪತ್ತೆ ಮಾಡಲು ಕ್ಯಾಮರಾಗಳನ್ನು ಅಳವಡಿಸಲಾಗಿದೆ.









