ನಾಪೋಕ್ಲು ಜು.10 NEWS DESK : ಹಳೆತಾಲೂಕಿನ ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಕೊಡಗು ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡ ತಡೆಯುವಿಕೆಯ ಬಗ್ಗೆ ಕಾರ್ಯಾಗಾರ ನಡೆಯಿತು.
ಅಗ್ನಿ ಅವಘಡದ ತುರ್ತು ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕ್ರಮಗಳ ಬಗ್ಗೆ ಅಗ್ನಿ ಶಾಮಕ ದಳದ ಸಿಬ್ಬಂಧಿಗಳು ಪ್ರತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಈ ಸಂದರ್ಭ ಅಗ್ನಿಶಾಮಕ ದಳದ ಅಧಿಕಾರಿ ಶೋಬಿತ್ ಕುಮಾರ್, ಸಿಬ್ಬಂದಿವರ್ಗ, ಶಾಲೆಯ ಅಧ್ಯಕ್ಷೆ ಕೆಟೋಳಿರ ರಾಜ ಚರ್ಮಣ್ಣ, ಕಾರ್ಯದರ್ಶಿ ರತ್ನಾ ಚರ್ಮಣ್ಣ, ಪ್ರಾಂಶುಪಾಲರಾದ ಮಮತ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ