ಸುಂಟಿಕೊಪ್ಪ ಜು.19 NEWS DESK : ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ವತಿಯಿಂದ “ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ ಫಾರ್ ಅಪ್ಸೈಕ್ಲಿಂಗ್”ತರಬೇತಿ ನೀಡಲಾಯಿತು.
ಹರದೂರು ಗ್ರಾ.ಪಂ ಯ ಡಿಜಿಟಲ್ ಗ್ರಂಥಾಲಯದಲ್ಲಿ ಆಯೋಜಿಸಲಾದ ತರಬೇತಿ ಶಿಬಿರವನ್ನು ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಉದ್ಘಾಟಿಸಿದರು.
“ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ ಫಾರ್ ಅಪ್ಸೆಕಿಲಿಂಗ್” ತರಬೇತಿಯ ಬಗ್ಗೆ ಗ್ರಾಮ ಡಿಜಿ ವಿಕಸನದ ಜಿಲ್ಲಾ ಸಂಯೋಜಕರಾದ ರಕ್ಷಿತ್ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ದಿಲೀಫ್ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಸರಕಾರದ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.
ಈ ತರಬೇತಿ ಶಿಬಿರದಲ್ಲಿ 20 ಕ್ಕೂ ಮಿಕ್ಕಿ ಪಲಾನುಭವಿಗಳು ಭಾಗವಹಿಸಿದರು. ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮೇಲ್ವಿಚಾರಕಿ ಸಾನ ಸ್ವಾಗತಿಸಿ, ನಿರೂಪಿಸಿದರು.