ಮಡಿಕೇರಿ ಜು.19 NEWS DESK : ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾ.ಪಂ ವ್ಯಾಪ್ತಿಯ ಜನತಾ ಕಾಲೋನಿ ನಿವಾಸಿ ಬಿ.ಬಿ.ಸುಜಾತ (58) ಎಂಬುವವರಿಗೆ ಸೇರಿದ ಮನೆ ನೆಲಸಮವಾಗಿದೆ. ಮನೆಯ ಸಾಮಾಗ್ರಿಗಳೆಲ್ಲವು ಅವಶೇಷಗಳಡಿ ಸಿಲುಕಿ ನಾಶವಾಗಿದೆ. ಅನಾರೋಗ್ಯಪೀಡಿತರಾಗಿರುವ ಸುಜಾತ ಅವರು ತಮ್ಮ ಪುತ್ರಿಯ ಮನೆಯಲ್ಲಿ ವಾಸವಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ, ಗ್ರಾ.ಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರ ಬಿ.ಬಿ.ಸುಜಾತ ಅವರಿಗೆ ನೂತನ ಮನೆ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.