ಸುಂಟಿಕೊಪ್ಪ ಜು.20 NEWS DESK : ಗಾಳಿ ಮಳೆಯಿಂದಾಗಿ ಮನೆಯ ಮೇಲೆ ತಡೆಗೋಡೆ ಕುಸಿದು ಅಪಾರ ಪ್ರಾಮಾಣದಲ್ಲಿ ಹಾನಿಯಾಗಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ಸುಂಟಿಕೊಪ್ಪ ಕಂದಾಯ ಕಚೇರಿ ಸಮೀಪದ ನಿವಾಸಿ ಡಿ.ಎಂ.ಮಂಜುನಾಥ್ ಎಂಬವರ ಮನೆಯ ಮೇಲೆ ತಡೆಗೋಡೆ ಕುಸಿದುಬಿದ್ದಿದ್ದು, ಮನೆಯಗೋಡೆ, ಗೃಹಉಪಯೋಗಿ ವಸ್ತುಗಳು ಹಾನಿಯಾಗಿ ಅಂದಾಜು ರೂ 1.50 ಲಕ್ಷ ಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದು ಡಿ.ಎಂ.ಮಂಜುನಾಥ್ ಕಂದಾಯ ಇಲಾಖೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ನಾಗೇಂದ್ರ, ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಸದಸ್ಯ ಬಿ.ಎಂ.ಸುರೇಶ್ ಭೇಟಿ ನೀಡಿ ಪರಿಶೀಲಿಸಿದರು.