ಸುಂಟಿಕೊಪ್ಪ ಜು.20 NEWS DESK : ಬ್ಯಾಂಕ್ ಆಫ್ ಬರೋಡ ಗದ್ದೆಹಳ್ಳ ಶಾಖೆಯ ವತಿಯಿಂದ ಬ್ಯಾಂಕಿನ 117ನೇ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.
ಸುಂಟಿಕೊಪ್ಪ ಶಾಖಾ ಕಚೇರಿಯಲ್ಲಿ ಗ್ರಾಹಕರಿಗೆ ಸಿಹಿ ಹಂಚಿ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ಸೀಲಂ ಸ್ವರೂಪ್, ಬ್ಯಾಂಕ್‍ಆಫ್ ಬರೋಡವು ದೇಶ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಅಲ್ಲದೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಗ್ರಾಹಕರ ಸಹಕಾರದಿಂದ 100 ಕೋಟಿಗೂ ಅಧಿಕ ವ್ಯವಹಾರವನ್ನು ನಡೆಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್‍ಕುಮಾರ್ ಮಾತನಾಡಿ, ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಬ್ಯಾಂಕ್‍ಆಪ್ ಬರೋಡ ಉತ್ತಮವಾಗಿ ಕಾರ್ಯನಿರ್ವಹಿಸಿ ಅಧಿಕ ವ್ಯವಹಾರವನ್ನು ನಡೆಸಿ ಸಾರ್ವಜನಿಕರಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಯತ್ತ ಸಾಗಲಿ ಎಂದರು.
ಈ ಸಂದರ್ಭ ಬ್ಯಾಂಕಿನ ಅಧಿಕಾರಿಗಳಾದ ಚಂದ್ರಶೇಖರ್ ರೆಡ್ಡಿ , ಚಿನ್ನಬಾಬು, ಸಿಬ್ಬಂದಿಗಳಾದ ಸಂತೋಷ್, ಎ.ಚೆನ್ನಮ್ಮ, ಪುಷ್ಪಾವತಿ ಶಾಂತಪ್ಪ, ಹಾಗೂ ಕಾಫಿ ಬೆಳೆಗಾರರಾದ ಎಸ್.ಬಿ. ಜಯರಾಜ್, ಜೆ.ಸಂಜಯ್, ವ್ಯಾಪಾರಸ್ಥರಾದ ಮುರಳಿಧರ್ ಕಾಮತ್, ರವಿ, ಜೋಸೆಫ್, ಗ್ರಾಹಕರು ಹಾಜರಿದ್ದರು.










