
ಚೆಟ್ಟಳ್ಳಿ ಜು.20 NEWS DESK : ಚೆಟ್ಟಳ್ಳಿ- ಮಡಿಕೇರಿ ಮುಖ್ಯ ರಸ್ತೆಯಲ್ಲಿ ಭೂಕುಸಿತಗೊಂಡ ಪ್ರದೇಶಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಬೇಟಿ ನೀಡಿ ಪರಿಶೀಲಿಸಿದರು. ಭೂಕುಸಿತದ ಮಣ್ಣನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಆದೇಶಿಸಿದರು. ಚೆಟ್ಟಳ್ಳಿ- ಮಡಿಕೇರಿ ಮುಖ್ಯರಸ್ತೆ ಅಪಾಯದಿಂದ ಕೂಡಿದೆ, ಅಡಚಣೆ ಉಂಟು ಮಾಡುತ್ತಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಸ್ಥಳೀಯರು ಹಾಗೂ ವಕೀಲ ಕಾಡೇಮಾಡ ವಿನ್ಸಿ ಅಪ್ಪಯ್ಯ ಅವರು ಶಾಸಕರ ಗಮನ ಸೆಳೆದರು. ಪ್ರಮುಖರಾ ಸುನಿತ ಮಂಜುನಾಥ್, ಚೆಟ್ಟಳ್ಳಿ ಪಂಚಾಯಿತಿ ಅಧ್ಯಕ್ಷರಾದ ಸಿಂಧು, ಸದಸ್ಯ ತೀರ್ಥಕುಮಾರ್, ಕಾಂಗ್ರೆಸ್ ವಲಯಾಧ್ಯಕ್ಷ ಮಹಮದ್ ರಫಿ, ಕಾರ್ಯದರ್ಶಿ ಜುಬೇರ್ ಮತ್ತಿತರರು ಹಾಜರಿದ್ದರು.










