ಮಡಿಕೇರಿ ಜು.27 NEWS DESK : ಕಾಗಿ೯ಲ್ ಕದನದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 527 ಹಣತೆಗಳನ್ನು ಬೆಳಗಿಸುವ ಮೂಲಕ ವಿನೂತನವಾಗಿ ಕಾಗಿ೯ಲ್ ವಿಜಯ ದಿನವನ್ನು ಭಾವನಾತ್ಮಕಾಗಿ ಆಚರಿಸಲಾಯಿತು.
ನಗರದ ಗಾಂಧಿ ಭವನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಸಾವ೯ಜನಿಕರೂ ಸೇರಿದಂತೆ ರೋಟರಿ ಸದಸ್ಯರು 527 ಹಣತೆಗಳನ್ನು ಬೆಳಗಿಸಿದರು, ಕಾಗಿ೯ಲ್ ಸಮರದಲ್ಲಿ ಭಾರತದ ಹೆಮ್ಮೆಯ 527 ಯೋಧರು 25 ವಷ೯ಗಳ ಹಿಂದೆ ಪ್ರಾಣತ್ಯಾಗ ಮಾಡಿದ್ದರು, ಈ ಯೋಧರ ತ್ಯಾಗಬಲಿದಾನದ ಸ್ಮರಣೆಯಲ್ಲಿ 527 ಹಣತೆಗಳನ್ನು ಬೆಳಗಿಸಿ ಅವರನ್ನು ಸ್ಮರಿಸುವ ಪ್ರಯತ್ನ ಇದಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಹೇಳಿದರು.
ಕಾಗಿ೯ಲ್ ವಿಜಯ್ ದಿವಸ್ ಅಂಗವಾಗಿ ಮಡಿಕೇರಿಯ ಮದ್ರಾಸ್ ರೆಜಿಮೆಂಟ್ ನಲ್ಲಿ 22 ವಷ೯ಗಳ ಕಾಲ ಸೇವೆ ಸಲ್ಲಿಸಿ ಅನೇಕ ಸೇವಾ ಮೆಡಲ್ ಗಳನ್ನು ಪಡೆದು ಸೇನೆಯಿಂದ ನಿವೖತ್ತರಾದ ಸೇನಾಧಿಕಾರಿ ಬಿ,ಕೆ, ಲೋಕೇಶ್ ಮತ್ತು ಪತ್ನಿ ಕಲ್ಪನ ಲೋಕೇಶ್ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಗೌರವಿಸಲಾಯಿತು.
ಸನ್ಮಾನಿತರಾದ ಲೋಕೇಶ್ ಮಾತನಾಡಿ, ನಿವೖತ್ತಿ ನಂತರವೂ ಸಮಾಜದಲ್ಲಿ ಗೌರವವನ್ನು ಸದಾ ಕಾಲ ಪಡೆಯುವ ಸ್ಥಾನ ಎಂದರೆ ಅದು ಯೋಧನದ್ದಾಗಿದೆ, ಸೈನ್ಯದಲ್ಲಿ ಅನೇಕ ವಷ೯ಗಳ ಕಾಲ ದೇಶರಕ್ಷಣೆಯ ಕತ೯ವ್ಯ ನಿವ೯ಹಿಸಿ ನಿವೖತ್ತರಾಗಿ ತವರು ನೆಲಕ್ಕೆ ಬಂದು ನೆಲಸಿದ ಸಂದಭ೯ ಸಂಘಸಂಸ್ಥೆಗಳು ಅಂಥ ಯೋಧರನ್ನು ಗುರುತಿಸಿ ಗೌರವಿಸುವ ಪರಂಪರೆ ಶ್ಲಾಘನೀಯ, ಯೋಧನ ಮನತೃಪ್ತಿಗೂ ಇಂಥ ಸನ್ಮಾನ ಕಾರಣವಾಗುತ್ತದೆ ಎಂದರು. ಮುಂದಿನ ಜನ್ಮಗಳಲ್ಲಿಯೂ ತನ್ನನ್ನು ಸೈನಿಕನನ್ನಾಗಿ ಮಾಡು ಎಂದು ದೇವರಲ್ಲಿ ಕೋರುವುದಾಗಿ ಹೇಳಿದ ಲೋಕೇಶ್, ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ದೇಶಸೇವೆಯ ಸ್ಮರಣೆಯಲ್ಲಿ ತನ್ನ ಮಕ್ಕಳಿಗೂ ಕಾಯ೯ಪ್ಪ, ತಿಮ್ಮಯ್ಯ ಎಂದೇ ಹೆಸರಿಟ್ಟಿರುವುದಾಗಿ ಹೇಳಿದರು.
ಯೋಧರನ್ನು ಗೌರವಿಸಿ :: ಕಾಗಿ೯ಲ್ ಕದನದಲ್ಲಿ ವೀರಮರಣವನ್ನಪ್ಪಿದ ಮನೋಜ್ ಕುಮಾರ್ ಭಾಟಿಯಾ ಬಗ್ಗೆ ಮನಸೆಳೆಯುವಂತೆ ಮಾತನಾಡಿದ ಸುಂಟಿಕೊಪ್ಪದ 9ನೇ ತರಗತಿ ವಿದ್ಯಾಥಿ೯ನಿ ಶ್ರೀಷ, ಭಾರತೀಯ ಯೋಧರ ತ್ಯಾಗಬಲಿದಾನಕ್ಕೆ ಮೌಲ್ಯ ಕಟ್ಟಲಾಗದು, ಅವರ ಹೋರಾಟ, ಕತ೯ವ್ಯ ನಿಷ್ಟೆ ಊಹೆಗೂ ನಿಲುಕದ್ದು ಎಂದರಲ್ಲದೇ, ಸೈನಿಕರು ಅಥವಾ ಮಾಜಿ ಸೈನಿಕರನ್ನು ಕಂಡಾಗ ಅವರಿಗೆ ನಮಸ್ಕರಿಸುವ ಮೂಲಕ ದೇಶಸೇವೆ ನಿಟ್ಟಿನಲ್ಲಿ ಅವರ ಕತ೯ವ್ಯ ಸ್ಮರಿಸುವಂತೆ ಮಾಡುವುದೇ ಯೋಧರಿಗೆ ನಾವು ಸಲ್ಲಿಸುವ ಮನಪೂವ೯ಕ ಕೖತಜ್ಞತೆಯಾಗಿದೆ ಎಂದರು.
ಮನಸೆಳೆದ ದೇಶಭಕ್ತಿಗೀತೆಗಳು :: ಕಾಗಿ೯ಲ್ ವಿಜಯ ದಿನದ ಅಂಗವಾಗಿ ಹಿರಿಯ ಪತ್ರಕತ೯ ಜಿ.ಚಿದ್ವಿಲಾಸ್ , ಸಂಧ್ಯಾ ಚಿದ್ವಿಲಾಸ್ ಅವರು ಕಾಯ೯ಕ್ರಮದಲ್ಲಿ ಹಾಡಿದ ರಾಷ್ಟ್ರದೇವಗೆ, ಪ್ರಾಣದೀವಿಗೆ, ಸೇವೆಯಾಗಲಿ ನಾಡಿಗೆ ಎಂಬ ದೇಶ ಭಕ್ತಿಗೀತೆ ಮನಸೆಳೆಯಿತು. ಭಾರತೀಯ ಯೋಧರ ತ್ಯಾಗಬಲಿದಾನ, ಶೌಯ೯ದ ಪ್ರತೀಕವಾಗಿದ್ದ ಈ ಹಾಡಿಗೆ ಪ್ರೇಕ್ಷಕರು ತಲೆದೂಗಿದರು, ಇದೇ ಕಾಯ೯ಕ್ರಮದಲ್ಲಿ ಮಡಿಕೇರಿಯ ಸಂತ ಜೋಸೇಫರ ಕಾಲೇಜಿನ ವಿದ್ಯಾಥಿ೯, ವಿದ್ಯಾಥಿ೯ನಿಯರು ಅನೇಕ ದೇಶಭಕ್ತಿಗೀತೆಗಳನ್ನು ಉಪನ್ಯಾಸಕಿ ಕೆ.ಜಯಲಕ್ಷ್ಮಿ ಮಾಗ೯ದಶ೯ನದಲ್ಲಿ ಹಾಡಿ ಗಮನ ಸೆಳೆದರು. 5 ವಷ೯ದ ಮಿನುಗು ಭಾರತದ ತಿರಂಗದ ಮಹತ್ವದ ಬಗ್ಗೆ ತೊದಲು ನುಡಿಯಲ್ಲಿಯೇ ಹಾಡಿ ಮೆಚ್ಚುಗೆ ಗಳಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧು, ಕಾಯ೯ದಶಿ೯ ಕಟ್ಟೆಮನೆ ಸೋನಜಿತ್, ವಲಯ ಸೇನಾನಿ ಅನಿತಾಪೂವಯ್ಯ, ಕಾಯ೯ಕ್ರಮ ಸಂಚಾಲಕ ಅನಿಲ್ ಹೆಚ್.ಟಿ.,ಪ್ರಮುಖರಾದ ಬಿ.ಜಿ.ಅನಂತಶಯನ, ಕೇಶವಪ್ರಸಾದ್ ಮುಳಿಯ, ಡಾ.ಚೆರಿಯಮನೆ ಪ್ರಶಾಂತ್, ಕೆ.ಕೆ.ವಿಶ್ವನಾಥ್, ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ಇಲಾಖೆಯ ಅಧಿಕಾರಿ ಚಿನ್ನಸ್ವಾಮಿ, ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಮುರಳೀಧರ್, ಯೋಗ ಗುರು ಕೆ.ಕೆ.ಮಹೇಶ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ಸದಸ್ಯೆ ಸಬಿತಾ, ಸ್ಕೌಟ್ ಮತ್ತು ಗೌಡ್ಸ್ ನ ಸಂಚಾಲಕ ರಂಜಿತ್, ರಮೇಶ್ ಹೊಳ್ಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ಕಾಯ೯ಕ್ರಮದಲ್ಲಿ ಪಾಲ್ಗೊಂಡವರು ಕಾಗಿ೯ಲ್ ಸಮರದ ಹುತಾತ್ಮರ ಸ್ಮರಣೆಯಲ್ಲಿ 527 ಹಣತೆಗಳನ್ನು ಬೆಳಗಿಸುವ ಮೂಲಕ ಭಾವನಾತ್ಮಕವಾಗಿ ಯೋಧಪರಿವಾರಕ್ಕೆ ಗೌರವ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.