ಕುಶಾಲನಗರ ಜು.27 NEWS DESK : ಪತ್ರಿಕಾರಂಗ ನೈಜ ಸಮಸ್ಯೆಗಳ ವಸ್ತು ಸ್ಥಿತಿ ವಿಚಾರಗಳನ್ನು ಪ್ರಕಟಿಸುವ ಮೂಲಕ ಕಾರ್ಯಾಂಗದ ಕಿವಿ ಹಿಂಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಸಮಗ್ರ ಪಾತ್ರ ವಹಿಸುತ್ತಿವೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅಭಿಪ್ರಾಯಪಟ್ಟಿದ್ದಾರೆ. ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಸ್ಯೆಗಳನ್ನು ಮತ್ತು ವಸ್ತುಸ್ಥಿತಿ ವಿಚಾರಗಳನ್ನು ಅರಿತು ನೈಜ ಸುದ್ಧಿಯಾಗಿ ಪ್ರಕಟಿಸಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಾಣುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅನುವು ಮಾಡಿದಂತಾಗುತ್ತದೆ ಎಂದರು. ಈ ಸಂದರ್ಭ ಮಾತನಾಡಿದ ಅವರು ಕುಶಾಲನಗರ ತಾಲೂಕು ಪತ್ರಕರ್ತರ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ ನಾಲ್ಕನೇ ಅಂಗವಾದ ಪತ್ರಿಕಾ ರಂಗ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುದ್ದಿ ಮಾಡುವ ಭರಾಟೆಯ ನಡುವೆ ಸತ್ಯಾಸತ್ಯತೆ ಬಗ್ಗೆ ಕೂಡ ಅವಲೋಕನ ಮಾಡಬೇಕಾಗಿದೆ ಎಂದರು. ಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಪತ್ರಿಕಾ ದಿನಾಚರಣೆಯ ಮಹತ್ವ ಮತ್ತು ಇತಿಹಾಸದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಪ್ರತಿಯೊಬ್ಬರೂ ಪತ್ರಿಕೆ ಓದುವ ಹವ್ಯಾಸ ಇಟ್ಟುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳ ನಿಖರತೆ ಬಗ್ಗೆ ಎಚ್ಚರವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳ ಭರಾಟೆ ಏರಿಕೆಯಾಗುತ್ತಿದೆ. ನಕಾರಾತ್ಮಕ ವಿಚಾರದ ವೇಗ ತಡೆಯಬೇಕಾಗಿದೆ ಎಂದರು. ಪತ್ರಕರ್ತರು ಪರಿಣಾಮಕಾರಿ ವರದಿಗಳನ್ನು ಬರೆಯುವ ದೃಷ್ಟಿಕೋನ ಇಟ್ಟುಕೊಳ್ಳಬೇಕು. ಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕು ಎಂದರು. ಸಂಘದ ಕೊಡಗು ಜಿಲ್ಲಾಧ್ಯಕ್ಷೆ ಬಿ. ಆರ್ ಸವಿತಾ ರೈ ಅವರು ಮಾತನಾಡಿ ಯಾವುದೇ ಸುದ್ದಿಗಳು ಅಭಾಸ ಉಂಟು ಮಾಡಬಾರದು. ಬ್ರೇಕಿಂಗ್ ಸುದ್ದಿಯ ಧಾವಂತದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವಂತಾಗಿದೆ. ಸುದ್ದಿ ಮಾಡುವ ಸಂದರ್ಭ ವಿಮರ್ಶೆ ಮಾಡುವ ಕೆಲಸ ಪತ್ರಕರ್ತನದಲ್ಲ ಎಂದು ಕಿವಿಮಾತು ಹೇಳಿದರು. ಸುದ್ದಿಗೋಷ್ಠಿ ನಡೆಯುವ ಸಂದರ್ಭ ಪತ್ರಕರ್ತರು ಸ್ಥಳದಲ್ಲೇ ಹಾಜರಾಗಿ ಸುದ್ದಿ ಪ್ರಕಟಿಸಬೇಕೆ ಹೊರತು ನಕಲು ಸುದ್ದಿ ಮಾಡುವುದು ಒಳಿತಲ್ಲ ಎಂದರು. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ವರದಿ ಆಯ್ಕೆ ಹಿನ್ನಲೆಯಲ್ಲಿ ತಾಲೂಕಿನ ಎಂಟು ಮಂದಿ ಪತ್ರಕರ್ತರಾದ ಎಂ ಎನ್ ಚಂದ್ರಮೋಹನ್ , ಹೆಚ್ ವಿ ವಿನೋದ್, ರಘು ಹೆಬ್ಬಾಲೆ, ವನಿತಾ ಚಂದ್ರಮೋಹನ್, ನಾಗರಾಜ ಶೆಟ್ಟಿ, ಕೆ ಜೆ ಶಿವರಾಜ್, ಇಸ್ಮಾಯಿಲ್ ಕಂಡಕೆರೆ, ಸಂಶುದ್ದೀನ್ , ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರ ಸಂಘದ ಕಚೇರಿಯಲ್ಲಿ ಕಳೆದ ಸಾಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅತಿ ಹೆಚ್ಚಿನ ಹಾಜರಾತಿ ಪಡೆದ ಪತ್ರಕರ್ತರಾದ ಎಂ ಎನ್ ಚಂದ್ರಮೋಹನ್, ವಿನೋದ್ ,ನಾಗರಾಜ ಶೆಟ್ಟಿ ಅವರುಗಳನ್ನು ನಗದು ಬಹುಮಾನ ನೀಡುವ ಮೂಲಕ ಗುರುತಿಸಲಾಯಿತು. ಸಂಘದ ವತಿಯಿಂದ ತಾಲೂಕು ತಹಸಿಲ್ದಾರ್ ಕಿರಣ್ ಗೌರಯ್ಯ ಮತ್ತು ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಅವರುಗಳನ್ನು ಸನ್ಮಾನಿಸಲಾಯಿತು. ಸಂಘದ ಖಜಾಂಚಿ ಕುಡೆಕಲ್ ಗಣೇಶ್ ಪ್ರಾರ್ಥಿಸಿದರು. ಜಿಲ್ಲಾ ನಿರ್ದೇಶಕರುಗಳಾದ ಸಂಶುದ್ದೀನ್ ಸ್ವಾಗತ, ಟಿ ಆರ್ ಪ್ರಭುದೇವ್ ನಿರೂಪಣೆ, ರಘು ಹೆಬ್ಬಾಲೆ ವಂದಿಸಿದರು. ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಮುನ್ನ ತಾಲೂಕು ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
Breaking News
- *ಕೊಡಗಿನ ಬಸವೇಶ್ವರ, ಪೇಟೆ ರಾಮ ಮಂದಿರ, ವಿಜಯ ವಿನಾಯಕ ದೇವಾಲಯಗಳಲ್ಲಿ ಕಳ್ಳತನ : ಅಂತರ್ ಜಿಲ್ಲಾ ಆರೋಪಿಯ ಬಂಧನ*
- *ಕನಕದಾಸರು ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು : ಶಾಸಕ ಡಾ.ಮಂತರ್ ಗೌಡ*
- *ಜೋಡುಬೀಟಿ- ಕುಂದ ಸಂಪರ್ಕ ರಸ್ತೆಗೆ ನಾಯಕ್ ಕೂಕಂಡ ಎನ್.ಪೊನ್ನಪ್ಪ ನಾಮಕರಣ : ಎಲ್ಲೆಡೆ ವೀರಯೋಧರಿಗೆ ಗೌರವಸಲ್ಲಿಸುವ ಕಾರ್ಯವಾಗಬೇಕು : ಕೊಟ್ಟುಕತ್ತಿರ ಸೋಮಣ್ಣ*
- *ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳಕ್ಕೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ*
- *ನ.19 ರಂದು ಮಡಿಕೇರಿ ತಲುಪಲಿದೆ ಮದ್ರಾಸ್ ಎಂಜಿನಿಯರಿಂಗ್ ಆರ್ಮಿ ಗ್ರೂಪ್ನ ಬೈಕ್ ರ್ಯಾಲಿ*
- *ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕನಕದಾಸ ಜಯಂತಿಯ ಅರ್ಥಪೂರ್ಣ ಆಚರಣೆ : ದಾಸ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಕನಕದಾಸರು : ಮೇಜರ್ ಡಾ.ರಾಘವ ಶ್ಲಾಘನೆ*
- *ನ.21 ರಂದು ಮಡಿಕೇರಿಯಲ್ಲಿ ರಕ್ತದಾನ ಮತ್ತು ಕಣ್ಣು ತಪಾಸಣಾ ಶಿಬಿರ*
- *ಮಡಿಕೇರಿಯಲ್ಲಿ ವಕೀಲರ ಕ್ರೀಡಾಕೂಟ : ಕ್ರೀಡಾ ಸ್ಫೂರ್ತಿ ಜೀವನಕ್ಕೂ ಸ್ಫೂರ್ತಿಯಾಗಲಿ : ಶಾಸಕ ಡಾ.ಮಂತರ್ ಗೌಡ*
- ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ನ ವಾಷಿ೯ಕ ಸಮ್ಮೇಳನ : ಕಾಫಿ ಕೃಷಿಕರ ನೆರವಿಗೆ ಸಕಾ೯ರ ಧಾವಿಸಬೇಕು : ಮ್ಯಾಥ್ಯು ಅಬ್ರಾಹಂ*
- *ಡಾ.ಸೂರ್ಯ ಕುಮಾರ್ ಅವರ “ಮಂಗಳಿ” ಪುಸ್ತಕ ಬಿಡುಗಡೆ*