Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ದೇಶದ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಂಶೋಧನೆಗಳು ಪೂರಕವಾಗಬೇಕು: ಡಾ. ಅಶೋಕ್ ಎಸ್. ಅಲೂರ*
  • *ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕೊಡಗು ವಿದ್ಯಾಲಯದ ಬಾಲಕಿಯರ ತಂಡ*
  • *ಸಂಪಾಜೆ: ಪ್ರಪಂಚಕ್ಕೆ ತಾಯಿ, ಮಗುವಿಗೆ ತಾಯಿಯೇ ಪ್ರಪಂಚ : ಜಯಲಕ್ಷ್ಮಿ ಅಭಿಮತ*
  • *ಸುಂಟಿಕೊಪ್ಪದಲ್ಲಿ ಕರವೇ ಸ್ವಾಭಿಮಾನಿ ಸೇನೆ ಹೋಬಳಿ ಘಟಕ ಉದ್ಘಾಟನೆ; ಹೊಸ ಸದಸ್ಯರ ಸೇರ್ಪಡೆ ಬಳಿಕ ಮಾದಾಪುರ ರಸ್ತೆಯ ಗುಂಡಿ ಮುಚ್ಚಿ ಸಮಾಜಮುಖಿ ಕಾರ್ಯ*
  • *ಕ.ಸಾ.ಪ. ವತಿಯಿಂದ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮ; ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರ: ಉ.ರಾ. ನಾಗೇಶ್*
  • *ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಕೊಡಗು : ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಮಡಿಕೇರಿಯಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗಣ್ಯರಿಂದ ಗೌರವ ನಮನ*
  • *ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ :  ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾಧಿಕಾರಿ ಸೋಮಖಶೇಖರ್*
  • *ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲೆಯ ತ್ರೋಬಾಲ್ ತಂಡ ರನ್ನರ್ಸ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಷಡ್ಯಂತ್ರ : ಅಹಿಂದ ಒಕ್ಕೂಟ ಅಸಮಾಧಾನ : ಆ.8 ರಂದು ಕುಶಾಲನಗರದಲ್ಲಿ ಪ್ರತಿಭಟನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಷಡ್ಯಂತ್ರ : ಅಹಿಂದ ಒಕ್ಕೂಟ ಅಸಮಾಧಾನ : ಆ.8 ರಂದು ಕುಶಾಲನಗರದಲ್ಲಿ ಪ್ರತಿಭಟನೆ*

ಆಗಷ್ಟ್ 6, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.6 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಧಾರ ರಹಿತ ಆಪಾದನೆ ಮಾಡಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಷಡ್ಯಂತ್ರ ಮಾಡುತ್ತಿರುವ ಶಕ್ತಿಗಳ ವಿರುದ್ಧ ಆ.8 ರಂದು ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅಹಿಂದ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕುರುಬ ಸಮಾಜದ ರಾಜ್ಯ ನಿರ್ದೇಶಕ ಕೆ.ಬಿ.ಶಾಂತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಪ್ರತಿಭಟನೆ ನಡೆಸುವ ಮೂಲಕ ಅವರನ್ನು ತೇಜೋವಧೆ ಮಾಡಲು ಹೋರಟಿರುವ ಪ್ರತಿಪಕ್ಷಗಳ ಕುತಂತ್ರವನ್ನು ಜನರಿಗೆ ಮನವರಿಕೆ ಮಾಡಲಾಗುವುದು, ಸತ್ಯವನ್ನು ಜನರ ಮುಂದೆ ಇಡುವ ಉದ್ದೇಶದಿಂದ ಕೊಡಗು ಜಿಲ್ಲಾ ಅಹಿಂದ ಒಕ್ಕೂಟ, ಕುರುಬ ಸಮಾಜ ಹಾಗೂ ಪ್ರಗತಿಪರ ಸಂಘಟನೆಗಳಿಂದ ಆ.8 ರಂದು ಕುಶಾಲನಗರದ ಕಾರ್ಯಪ್ಪ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ರಾಜಕೀಯ ರಹಿತವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಮೂಡ ಹಗರಣದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ವಿನಾಕಾರಣ ಆರೋಪ ಹೊರಿಸಿ ಸುಳ್ಳನ್ನು ಸತ್ಯ ಎಂಬಂತೆ ಮಾಡಲಾಗುತ್ತಿದೆ. ಸಾಮಾಜಿಕ ನ್ಯಾಯದ ತತ್ವವನ್ನು ಆಡಳಿತದಲ್ಲಿ ಅಳವಡಿಸಿಕೊಂಡು ಮುನ್ನಡೆದು ಎಲ್ಲ ವರ್ಗಗಳ ಪ್ರಗತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರಮಿಸುತ್ತಿದ್ದಾರೆ. ಇದನ್ನ ಸಹಿಸಿದ ಪ್ರತಿಪಕ್ಷಗಳು ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರು. ಶೋಷಿತ ಸಮುದಾಯದ ಧ್ವನಿಯನ್ನು ಅಡಗಿಸುವ ಕೆಲಸ ಮಾಡಬಾರದು, ಸಮಾಜದ ರಕ್ಷಣೆ ಮಾಡಬೇಕು ಎಂದರು. ಅಹಿಂದ ಒಕ್ಕೂಟದ ಜಿಲ್ಲಾ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸಿ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡುವ ಮೂಲಕ ಶೋಷಿತ ಸಮುದಾಯಕ್ಕೆ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೂಡ ಹಗಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುವವರೆಗೆ ಮೌನ ವಹಿಸಿರುವುದನ್ನು ವಿರೋಧ ಪಕ್ಷಗಳು ದುರುಪಯೋಗ ಪಡಿಸಿಕೊಂಡು ನೀಡುತ್ತಿರುವ ಹೇಳಿಕೆ ಖಂಡನೀಯ ಎಂದರು. ದೇಶದ ಎಲ್ಲಾ ಜನತೆಗೆ ಸಾಮಾಜಿಕ ನ್ಯಾಯ ದೊರಕಬೇಕು, ಸಂವಿಧಾನ ದತ್ತವಾಗಿ ನೀಡಲಾದ ಉದ್ಯೋಗ ದೊರಕಬೇಕು, ಜಾತಿವಾರು ಜನಗಣತಿ ಹೊರಬರಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ಅರಸು ಜನ್ಮದಿನಾಚರಣೆ : ಸಾಮಾಜಿಕ ನ್ಯಾಯದ ಹರಿಕಾರ ದಿ.ದೇವರಾಜು ಅರಸು ಅವರ ಜನ್ಮದಿನಾಚರಣೆಯ ಹಿನ್ನೆಲೆ ಆ.20 ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಪಕ್ಷತೀತವಾಗಿ, ರಾಜಕೀಯ ರಹಿತವಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ರಾಜ್ಯ ನಿರ್ದೇಶಕರಾದ ಹೇಮಲತಾ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಧರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ನಗರಸಭಾ ಮಾಜಿ ಸದಸ್ಯ ಕೆ.ಜಿ.ಪೀಟರ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ದೇಶದ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಂಶೋಧನೆಗಳು ಪೂರಕವಾಗಬೇಕು: ಡಾ. ಅಶೋಕ್ ಎಸ್. ಅಲೂರ*

ಸೆಪ್ಟೆಂಬರ್ 12, 2026

*ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕೊಡಗು ವಿದ್ಯಾಲಯದ ಬಾಲಕಿಯರ ತಂಡ*

ಸೆಪ್ಟೆಂಬರ್ 12, 2026

*ಸಂಪಾಜೆ: ಪ್ರಪಂಚಕ್ಕೆ ತಾಯಿ, ಮಗುವಿಗೆ ತಾಯಿಯೇ ಪ್ರಪಂಚ : ಜಯಲಕ್ಷ್ಮಿ ಅಭಿಮತ*

ಸೆಪ್ಟೆಂಬರ್ 11, 2026

*ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕೊಡಗು ವಿದ್ಯಾಲಯದ ಬಾಲಕಿಯರ ತಂಡ*

ಸೆಪ್ಟೆಂಬರ್ 12, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ. 12: ಮಹಾರಾಷ್ಟ್ರದ ಕೊಲ್ಹಾಪುರದ ಸಂಜೀವನ್ ಶಾಲೆಯಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ…

*ಸಂಪಾಜೆ: ಪ್ರಪಂಚಕ್ಕೆ ತಾಯಿ, ಮಗುವಿಗೆ ತಾಯಿಯೇ ಪ್ರಪಂಚ : ಜಯಲಕ್ಷ್ಮಿ ಅಭಿಮತ*

ಸೆಪ್ಟೆಂಬರ್ 11, 2026

*ಸುಂಟಿಕೊಪ್ಪದಲ್ಲಿ ಕರವೇ ಸ್ವಾಭಿಮಾನಿ ಸೇನೆ ಹೋಬಳಿ ಘಟಕ ಉದ್ಘಾಟನೆ; ಹೊಸ ಸದಸ್ಯರ ಸೇರ್ಪಡೆ ಬಳಿಕ ಮಾದಾಪುರ ರಸ್ತೆಯ ಗುಂಡಿ ಮುಚ್ಚಿ ಸಮಾಜಮುಖಿ ಕಾರ್ಯ*

ಸೆಪ್ಟೆಂಬರ್ 11, 2026

*ಕ.ಸಾ.ಪ. ವತಿಯಿಂದ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮ; ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರ: ಉ.ರಾ. ನಾಗೇಶ್*

ಸೆಪ್ಟೆಂಬರ್ 11, 2026

*ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಸೆಪ್ಟೆಂಬರ್ 11, 2026

*ಕೊಡಗು : ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಸೆಪ್ಟೆಂಬರ್ 11, 2026

*ಮಡಿಕೇರಿಯಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗಣ್ಯರಿಂದ ಗೌರವ ನಮನ*

ಸೆಪ್ಟೆಂಬರ್ 11, 2026

*ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ :  ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾಧಿಕಾರಿ ಸೋಮಖಶೇಖರ್*

ಸೆಪ್ಟೆಂಬರ್ 11, 2026

*ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲೆಯ ತ್ರೋಬಾಲ್ ತಂಡ ರನ್ನರ್ಸ್*

ಸೆಪ್ಟೆಂಬರ್ 11, 2026

ಸೋಮವಾರಪೇಟೆ ಹೋಮ್‌ಸ್ಟೇ ಅಸೋಸಿಯೇಷನ್‌ನಿಂದ ಕಾಸರಗೋಡು–ಕಣ್ಣೂರು ಅಧ್ಯಯನ ಪ್ರವಾಸ*

ಸೆಪ್ಟೆಂಬರ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.