ಮಡಿಕೇರಿ ಆ.7 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ಕಾಲೇಜಿನ ಆವರಣದಲ್ಲಿ ನಡೆಯತು. ಸಂಘದ ಅಧ್ಯಕ್ಷರಾದ ಡಾ. ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ಹಲವು ಸಮಸ್ಯೆ, ಸಂಘವನ್ನು ಬಲಪಡಿಸುವ ಕುರಿತು ಹಾಗೂ ಇತರ ಅಭಿವೃದ್ಧಿ ಕಾರ್ಯ ಕುರಿತು ಚರ್ಚಿಸಲಾಯಿತು. ಅಲ್ಲದೇ ಹೊಸ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಮೊದಲ ರ್ಯಾಂಕ್ ಪಡೆದ ವೈ.ಆರ್.ಶಶಿಕಿರಣ್ (PG Diploma in Yogic science), ಬಿ.ಎನ್.ಹೇಮಾವತಿ (ಕೊಡವಎಂ.ಎ), ಸೂಕ್ಷ್ಮಾಣುಜೀವ ವಿಜ್ಞಾನ (Microbilology) ವಿಷಯದಲ್ಲಿ ವಿಶ್ವವಿದ್ಯಾನಿಲಯಕ್ಕೆ ಹೆಚ್ಚು ಅಂಕಗಳಿಸಿದ ಹಿಬಾತುಲ್, ಸೆಸ್ಟೋಬಾಲ್ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗಳಿಸಿದ ಮೊಹಮ್ಮದ್ ಕೆ.ಯು.ಶಾಹಿಲ್ ಹಾಗೂ ಹಾಕಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಗದೇಲ ಗಾಯತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿ ಸಂಘ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಿರ್ದೇಶಕರಾದ ವಿಜು ನಂಜಪ್ಪ ಸ್ವಾಗತಿಸಿದರು. ನಂತರ 2023-24ನೇ ಸಾಲಿನ ಸಂಘದ ಕಾರ್ಯ ಚಟುವಟಿಕೆಗಳು ಹಾಗೂ ಲೆಕ್ಕ ಪತ್ರದ ವರದಿಯನ್ನು ಸಂಘದ ಕಾರ್ಯದರ್ಶಿ ಎಂ.ಎನ್.ನಿಖಿಲ್ ಮಂಡಿಸಿದರು. ಸಂಘದ ಕಾರ್ಯದರ್ಶಿ ನಿಖಿಲ್ ನಾಚಪ್ಪ ನಿರೂಪಿಸಿದರು. ಇದನ್ನು ಸರ್ವಸದಸ್ಯರು ಅನುಮೋದಿಸಿದರು. ಸಂಘದ ಕಾರ್ಯದರ್ಶಿ ನಿಖಿಲ್ ನಾಚಪ್ಪ ನಿರೂಪಿಸಿದರು. ವಿಠಲ್‍ತಿಮ್ಮಯ್ಯ ಹಾಗೂ ಪಿ.ಎ.ದೇವಯ್ಯ ಸಾಧನೆ ಮಾಡಿದ ವಿದ್ಯಾರ್ಥಿಗಳ ದಾಖಲೆಗಳನ್ನು ವಾಚಿಸಿದರು. ನಿರ್ದೇಶಕರಾದ ಶಶಿಕಿರಣ್ ವಂದಿಸಿದರು.










