ಸಿದ್ದಾಪುರ ಆ.7 NEWS DESK : ಮಾನಸಿಕ ಒತ್ತಡಗಳಿಂದ ದೂರವಿದ್ದು, ಗುಣಮಟ್ಟದ ಆಹಾರ ಸೇವನೆಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಅಮ್ಮತ್ತಿ ಆರ್.ಐ.ಹೆಚ್.ಪಿ ಆಸ್ಪತ್ರೆ ವೈದ್ಯರಾದ ಡಾ.ಚಂದ್ರು ಕರೆ ನೀಡಿದರು .
ಮಾಲ್ದಾರೆ ವಿಎಸ್ಎಸ್ಎನ್ ಸಭಾಂಗಣದಲ್ಲಿ ಆರ್ಗನೈಸೇಷನ್ ಫಾರ್ ದ ಡೆವಲಪ್ಮೆಂಟ್ ಆಫ್ ಪೀಪಲ್ (ಓ.ಡಿ.ಪಿ) ಸಂಘಟನೆಯ ನೇತೃತ್ವದಲ್ಲಿ ಅಮ್ಮತ್ತಿ ಆರ್ ಐ ಹೆಚ್ ಪಿ ಆಸ್ಪತ್ರೆ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ಆರೋಗ್ಯಕ್ಕೆ ವ್ಯಾಯಾಮ, ಕ್ರೀಡಾ ಚಟುವಟಿಕೆ ಸೇರಿದಂತೆ ಗ್ರಾಮಗಳಲ್ಲಿ ಬೆಳೆಯುವ ಗುಣಮಟ್ಟದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವುದರ ಮೂಲಕ ಮಾನಸಿಕ ಒತ್ತಡಗಳಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಇದೇ ಸಂದರ್ಭ ಮಾಲ್ದಾರೆ ಸುತ್ತಮುತ್ತಲ ನೂರಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.
ಓಡಿಪಿ ಜಿಲ್ಲಾ ಸಂಯೋಜಕಿ ಜಾಯ್ ಮೆನೇಜಸ್, ವೈದ್ಯರುಗಳಾದ ಡಾ.ಕೃಷ್ಣ ಪ್ರಸಾದ್, ಡಾ.ಶರತ್, ಡಾ.ನಿಶ್ಚಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಞಂಣ್ಣ, ಜನಪರ ಸಂಘದ ಅಧ್ಯಕ್ಷ ಬಾವ ಮಾಲ್ದಾರೆ ಓಡಿಪಿ ಸಂಘಟನೆಯ ಧನು ಕುಮಾರ್, ಅಕ್ಷಯ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.