ಮಡಿಕೇರಿ ಆ.13
NEWS DESK : ವಿರಾಜಪೇಟೆ ತಾಲೂಕಿನ, ಬೊಳ್ಳುಮಾಡು ಗ್ರಾಮದ ಮಾತಂಡ ಶಕು ಅಕ್ಕಮ್ಮ ಹಾಗೂ ಮನು ಇವರ ಗದ್ದೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ “ಬೇಲ್ ನಮ್ಮೆ” (ಪೈಪೋಟಿ) ಕಾರ್ಯಕ್ರಮ ನಡೆಯಲಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ರಾಜ್ಯ ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಶಾಸಕರಾದ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೃಷಿ ನಿರ್ದೇಶಕರಾದ ಡಾ.ಸೋಮಶೇಖರ್, ವಿರಾಜಪೇಟೆ ತಹಶೀಲ್ದಾರ್ ಎಚ್.ಎನ್.ರಾಮಚಂದ್ರ, ಕಾಕೋಟು ಪರಂಬು ಗ್ರಾ.ಪಂ.ಅಧ್ಯಕ್ಷರಾದ ಬಟ್ಟಕಾಳಂಡ ಕಾಮುಣಿ ಸುರೇಶ್, ಬೊಳ್ಳುಮಾಡು ಮಹಿಳಾ ಕೃಷಿಕರಾದ ಮಾತಂಡ ಶಕುಅಕ್ಕಮ್ಮ ಇತರರು ಪಾಲ್ಗೊಳ್ಳಲಿದ್ದಾರೆ. ಕೊಡಗು ವಿಜ್ಞಾನ ವೇದಿಕೆಯಧ್ಯಕ್ಷರಾದ ನಿ.ಡೀನ್ ಡಾ.ಚೆಪ್ಪುಡಿರ ಜಿ.ಕುಶಾಲಪ್ಪನವರು “ಬೇಲ್‍ಪಣಿ: ಕಷ್ಟ-ಸುಖ-ಪರಿಹಾರ” ಎಂಬ ವಿಷಯದ ಬಗ್ಗೆ ವಿಚಾರ ಮಂಡನೆಯನ್ನು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ (ನಾಟಿ ಓಟ-ಪುರುಷರಿಗೆ, ಮಹಿಳೆಯರಿಗೆ, ಬಾಲಕರಿಗೆ ಮತ್ತು ಬಾಲಕಿಯರಿಗೆ ಹೈಸ್ಕೂಲ್‍ನಿಂದ 2ನೇ ಪಿಯುಸಿ ತನಕ ಎಲ್ಲಾ ವಿಭಾಗದಲ್ಲಿ 1, 2 ಮತ್ತು 3 ನೇ ಬಹುಮಾನ ಇರುತ್ತದೆ. ನಾಟಿ ಓಟದ 4 ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನಗದು ಹಣದ ಜೊತೆಗೆ ಕೋರಿಕೊಡೆ ಕೊಡಲಾಗುವುದು. ಹಗ್ಗ ಜಗ್ಗಾಟದಲ್ಲಿ (ಪುರುಷರು ಹಾಗೂ ಮಹಿಳೆಯರಿಗೆ) 1 ಮತ್ತು 2ನೇ ಬಹುಮಾನ ಇರುತ್ತದೆ. ಮಧ್ಯಾಹ್ನ 2 ಗಂಟೆಯ ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಮಂಡೇಪಂಡ ಸುಜಾ ಕುಶಾಲಪ್ಪ, ಸರ್ಕಾರಿ ಅನುಷ್ಠಾನ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಬೊಳ್ಳುಮಾಡು ವಿ.ಎಸ್.ಎಸ್.ಎನ್ ಅಧ್ಯಕ್ಷರಾದ ಮಾತಂಡ ಬೇಬಿ ಪೂವಯ್ಯ, ಬೊಳ್ಳುಮಾಡು ಗ್ರಾಮ ಪಂಚಾಯಿತಿಯ ಸದಸ್ಯರಾದ ಕುಯ್ಮಂಡ ಸಂಜು ಕಾಳಯ್ಯ ಹಾಗೂ ಅಕಾಡೆಮಿಯ ಎಲ್ಲಾ ಸದಸ್ಯರುಗಳು ಭಾಗವಹಿಸಲಿದ್ದಾರೆ. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗೆ ಚೇನಂಡ ಸುರೇಶ್, ಮಾತಂಡ ಕಂಬು ಉತ್ತಯ್ಯ, ಅಲ್ಲಪ್ಪಿರ ಶ್ವೇತ ನಾಣಯ್ಯ, ಮಾತಂಡ ಯಶ್ಮ ಉತ್ತಯ್ಯ, ಮಾತಂಡ ಕು|| ಶಕು ಅಕ್ಕಮ್ಮ, ಬಡಕಡ ದೀನ ಪೂವಯ್ಯ, ಮಾತಂಡ ಸೋಮಣ್ಣ, ಕುಯ್ಮಂಡ ಸಂಜು ಕಾಳಯ್ಯ, ಮಾತಂಡ ಮನು ದೇವಯ್ಯ, ಪೊನ್ನಚಂಡ ಸುರೇಂದ್ರ, ಪಂದ್ಯಂಡ ರವಿ, ಮಾತಂಡ ಮಧು ಪೂವಯ್ಯ, ಕುಳಿಯಕಂಡ ಪೊನ್ನಣ್ಣ, ಕೂತಂಡ ಕುಶಾಲಪ್ಪ, ಪಾಲಚಂಡ ಸುರೇಶ್, ಮಾತಂಡ ಪಂಚು, ಮಾತಂಡ ಪಿ. ಧೀರಜ್ ಚಂಗಪ್ಪ, ಮಾತಂಡ ರನ್ನ, ಮೇಚುವಂಡ ಎ. ಮಂಜು, ಕಳ್ಳಿರ ವಿನು ಕರುಂಬಯ್ಯ, ಪಟ್ಟಂಡ ಅರುಣ್, ಮುಂಡಂಡ ನವೀನ್, ಮುಕ್ಕಾಟಿರ ಬಿನ್ನು, ಮಾತಂಡ ಅರುಣ, ಮಾತಂಡ ಸುಶೀಲ, ಮಾತಂಡ ಮನು ದೇವಯ್ಯ, ಮಾತಂಡ ಪವಿ, ಮಾತಂಡ ಪ್ರಕಾಶ್ ಹಾಗೂ ಊರು, ನಾಡು, ಗ್ರಾಮ ಪಂಚಾಯಿತಿಯ ಸಹಕಾರವನ್ನು ಕೊಡುವುದಾಗಿ ಭರವಸೆ ಇಟ್ಟಿದ್ದಾರೆ.