ಮಡಿಕೇರಿ NEWS DESK ಆ.16 : “ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ “157ನೇ ರಾಜ್ಯ ಮಟ್ಟದ “ಬ್ರೈನೋಬ್ರೈನ್ ಸ್ಪರ್ಧೆ-2024”ರಲ್ಲಿ ಮಡಿಕೇರಿಯ “ಬ್ರೈನೋಬ್ರೈನ್” ಕೇಂದ್ರದ 69 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಪದಕ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕದ ಒಟ್ಟು 80 “ಬ್ರೈನೋಬ್ರೈನ್” ಕೇಂದ್ರಗಳಿಂದ ಸುಮಾರು 2200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕೇವಲ 3 ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೇ.100ರಷ್ಟು ಫಲಿತಾಂಶದೊಂದಿಗೆ 39 ಚಾಂಪಿಯನ್ ಟ್ರೋಫಿ, 24 ಚಿನ್ನದ ಪದಕ ಮತ್ತು 6 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. “157ನೇ ರಾಜ್ಯ ಮಟ್ಟದ “ಬ್ರೈನೋಬ್ರೈನ್ ಸ್ಪರ್ಧೆ-2024”ರಲ್ಲಿ ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರಕ್ಕೆ “ಬೆಸ್ಟ್ ಪ್ರಾಂಚೈಸಿ” ಮತ್ತು “ಬೆಸ್ಟ್ ಫ್ಯಾಕಲ್ಟಿ” ಪ್ರಶಸ್ತಿ ಲಭಿಸಿದ್ದು, ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಸಾಧನೆಯ ಹೆಗ್ಗಳಿಕೆಯು ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲ್ಲಬೇಕು. ಈ ಅದ್ಭುತ ಯಶಸ್ಸಿಗೆ ಕಾರಣಕರ್ತರಾದ ಮಕ್ಕಳಿಗೆ ಹಾಗೂ ಮುತುವರ್ಜಿ ವಹಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ತಿಳಿಸಿದ್ದಾರೆ. “157ನೇ ರಾಜ್ಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ ಸಂದರ್ಭ “ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಣ್ ಸುಬ್ರಮಣ್ಯಂ ಹಾಗೂ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕ ನೀಲ್ ಕಮಾಲ್ ಸ್ವರ್ಣಾಕರ್ ಉಪಸ್ಥಿತರಿದ್ದು, ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರದ ಮಕ್ಕಳ ಅತ್ಯುತ್ತಮ ಸಾಧನೆಯನ್ನು ಶ್ಲಾಘಿಸಿದರು.
::: ಚಾಂಪಿಯನ್ ಟ್ರೋಫಿ ವಿಜೇತರು ::: ಅಲುಫ್.ಎ.ಆರ್, ದಿಗಂತ್ ಎಸ್.ಅಣ್ವೇಕರ್, ಜಾರ್ಜ್ ಮ್ಯಾಥಿವ್, ಕೋಸಗಿ ಸಾತ್ವಿಕ್ ಸಾಮ್ರಾಟ್, ನಮನ್ ಎಂ.ಗೌಡ, ಪ್ರಧಾನ್ ಶತಾಯುಷ್, ರೋನಿತ್ ತಮ್ಮಯ್ಯ.ಪಿ.ಕೆ, ಕೋಸಗಿ ಸಮರ್ಥ್ ಸಾಮ್ರಾಟ್, ಸಮರ್ಥ್ ಆರ್, ಯಶಸ್.ಕೆ.ಯು, ಧೃತಿ ಜೆ.ಪೂಜಾರಿ, ಧೃತಿ.ಎ.ಎಂ, ಕೃಪಾ.ಆರ್, ಪುನೀತ.ಪಿ.ಎಂ, ಎನ್.ನಿರಣ್ ಪೂವಣ್ಣ, ನಾಪಂಡ ನಿಶಾ ಪೂವಣ್ಣ, ಮೊಹಮ್ಮದ್ ಶಯಾನ್.ಎಂ.ಎಸ್., ಸಿಮ್ರಾ ಕುಲ್‌ಸುಮ್, ಕಟಿಯ ಕಿಶೋರ್, ಆರಾಧ್ಯ.ಎ.ಅಣ್ವೇಕರ್, ಐಡೆನ್.ಜೆ.ತಾರಕನ್, ಚಾರ್ವಿ ದೇಚಮ್ಮ.ಎಸ್.ಎ, ಧನ್ವಿ ಪೂವಮ್ಮ.ಬಿ.ಎಂ., ಜೋನ್ನಾ ಮಡ್ತಾ, ಲಿಬಾ ರ‍್ಜೀನ್, ಲಿವ್ಯ ಸುನಿತ್ ಕುಮಾರ್, ನಿಧಿ ಆರ್. ಅಣ್ವೇಕರ್, ನಿಲ್ಹಾ ಜೆ ತಾರಕನ್, ಪರೀಕ್ಷ.ಎ.ಎಲ್, ಪಾವನಿ.ಕೆ.ಕುಂದರ್, ರಿಯಾಂಕ.ಎಂ., ಶಿಜ್ಹಾ ಫಾತೀಮಾ.ಎಂ.ಎಸ್, ಶೌರ್ಯ.ಎಸ್.ವಿ. ಕುಡ್ತೇಕರ್, ವಿಕಾಸ್.ಹೆಚ್.ಹೆಚ್., ಯಾನ್ವಿ ಬೋಜಮ್ಮ ಎಂ.ಪಿ., ದ್ರುಪದ್.ಪಿ ಮಣಿಕೋಥ್, ಲಾಂಚನ್.ಕೆ.ಟಿ, ರೈವತ್ ಪಟೇಲ್ ಎನ್.ಆರ್, ಮಾನ್ವಿ ಜಿ.ವರ್ಣೇಕರ್.
::: ಚಿನ್ನದ ಪದಕ ವಿಜೇತರು ::: ಗಾನವಿ ಗಂಗಮ್ಮ.ಸಿ.ವಿ, ಶಿಶಿರ್.ಆರ್, ಸುಬ್ಬಯ್ಯ.ಕೆ.ಸಿ., ಆದಿತ್ ಗೌತಮ್.ಕೆ., ಕಿಶಿ ಕಾವೇರಮ್ಮ ಎ.ಎಲ್, ಲಿಖಿತ್ ಸೋಮಣ್ಣ.ಕೆ.ಎಲ್., ಮಿಯ ಅರುಣ್, ಯಜತ್ ಗಣಪತಿ.ಪಿ.ಕೆ., ಜಿ.ಪ್ರಣಿತ, ಲಾಸ್ಯ.ಕೆ.ಸಿ, ಪ್ರತ್ಯುಷ ಎಂ ಸುವರ್ಣ, ತನ್ಮಯ್.ಬಿ.ಎಸ್., ಕನಿಷಾ ಸುನಿತ್ ಕುಮಾರ್, ಕುಶನ್ ದೇವಪ್ಪ.ವೈ.ಡಿ, ಧನ್ವಿನ್ ಪೂವಣ್ಣ.ಬಿ.ಎಂ., ಹರ್ಷಿಣಿ.ಎಂ.ಕೆ., ರಿಹಾಬ್, ರೋನಿತ್ ಗಣಪತಿ.ಎ.ಎಸ್., ವರುಣಿಕ.ಜಿ., ಆಧ್ಯ ಜಿ ವರ್ಣೇಕರ್, ಆರಾಧ್ಯ.ಕೆ.ಸಿ, ಮಾಯಂಕ್ ಎಂ., ತನಿಷ್ಕ.ಕೆ.ಎ ಮತ್ತು ಭುವನ್.ಕೆ.ಟಿ.
::: ಬೆಳ್ಳಿ ಪದಕ ವಿಜೇತರು ::: ಲಿನಿತ್.ಬಿ.ಎಲ್, ರೂಪಲ್ ಮುತ್ತಮ್ಮ.ಎಂ.ಎಲ್, ಚಾರ್ವಿ.ಕೆ.ಟಿ, ಅಮೂಲ್ಯ.ಎಲ್, ಆರೋನ್ ಅಲ್ಬರ್ಟ್ ಮತ್ತು ಯಶ್‌ರಾಜ್.ಆರ್.ಅಣ್ವೇಕರ್.