ಮಡಿಕೇರಿ ಆ.19 NEWS DESK : ಕೊಡಗು ದೇಶ, 12 ಕೊಂಬು 35 ನಾಡು ಎಂಬ ಉಲ್ಲೇಖ ಪಟ್ಟೋಲೆ ಪಳಮೆ ಅದಿಯಾಗಿ ಹಲವಾರು ದಾಖಲೆಗಳಲ್ಲಿ ಕಂಡು ಬರುತ್ತದೆ. ಇಂತಿರುವಾಗ ಈ 12 ಕೊಂಬುಗಳ ವಿಂಗಡಣೆಯೊಂದಿಗೆ 35 ನಾಡುಗಳು ಬೆರೆತುಕೊಂಡಿವೆ. ಇಷ್ಟು ನಾಡುಗಳಲ್ಲಿ ಕೊಡವರು ಹಾಗೂ ಕೊಡವ ಭಾಷಿಕರು ಅನಾದಿಕಾಲದಿಂದಲೂ ವಾಸಿಸುತ್ತಿದ್ದಾರೆ. ಆದರೆ ಯಾವ ಯಾವ ನಾಡುಗಳಲ್ಲಿ ಯಾವ ಯಾವ ಕುಟುಂಬಸ್ಥರು ಇದ್ದರು ಹಾಗೂ ವರ್ತಮಾನದಲ್ಲಿ ವಾಸಿಸುತ್ತಿದ್ದಾರೆ. ಯಾರ್ಯಾರಿಗೆ ಐನ್‍ಮನೆ, ಬಲ್ಯಮನೆ, ಮುಂದ್‍ಮನೆ, ಗುರುಮನೆ, ಕೈಮಡ, ಮೂರ್ತಿಸ್ಥಾನ, ಅಂಬಲಗಳಿವೆ ಎಂಬುವುದು ದಾಖಲಾಗಬೇಕಾಗಿದೆ. ಅಂತೆಯೆ ಪ್ರಸ್ತುತ ಎಲ್ಲೆಲ್ಲಿ ಕೊಡವರು, ಕೊಡವ ಭಾಷಿಕರು ಸ್ವಂತಮನೆ, ಆಸ್ತಿ-ಪಾಸ್ತಿ, ತೋಟ-ಭೂಮಿ ಹೊಂದಿದ್ದಾರೆ ಎಂಬುವುದರ ವಿವರ ಬೇಕಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಈ ದಿಸೆಯಲ್ಲಿ ಸಮಗ್ರ ಮಾಹಿತಿ ಪುಸ್ತಕವೊಂದನ್ನು ಹೊರತರಲು ಮುಂದಾಗಿದ್ದು, ಅದದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ‘ಕೊಡವ-ಕೊಡಗು: ಸಮಗ್ರ ಚಿತ್ರಣ’ಕ್ಕೆ ಮಾಹಿತಿ ಒದಗಿಸಿಕೊಡಬೇಕಾಗಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಕೋರಿದ್ದಾರೆ.









