ನಾಪೋಕ್ಲು ಆ.24 NEWS DESK : ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿಗೆ ಸರಿದು ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕರು ಪಾರಾದ ಘಟನೆ ಮರಂದೋಡ ಗ್ರಾಮದಲ್ಲಿ ನಡೆದಿದೆ. ಕುಂಜಿಲ ಗ್ರಾಮದ ಸಂಬಂಧಿಕರ ಮನೆಗೆ ಕೇರಳದಿಂದ ಬಂದ ಕುಟುಂಬ ಒಂದು ಭೇಟಿ ನೀಡಿ ಹಿಂತಿರುಗುವ ಸಂದರ್ಭ ಕಕ್ಕಬ್ಬೆಯ ಮರಂದೋಡ ಗ್ರಾಮದ ಕಬ್ಬಿನ ಕಾಡು ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ಗ್ರಾಮಸ್ಥರ ಸಹಕಾರದಿಂದ ಕಾರನ್ನು ಮೇಲಕ್ಕೆತ್ತಲಾಯಿತು.
ವರದಿ : ದುಗ್ಗಳ ಸದಾನಂದ.









