ನಾಪೋಕ್ಲು ಆ.24 NEWS DESK : ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ 17ನೇ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಕ್ಕಬೆ-ಕುಂಜಿಲದ ಕೆ.ಎಸ್.ಆಯಿಷಾ ಚಿನ್ನ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದಾಳೆ. ಕೊಯಂಬತ್ತೂರಿನ ಶ್ರೀ ಕೃಷ್ಣ ಗೌಂಡರ್ ಮಂಟಪದಲ್ಲಿ ನಡೆದ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನ ಕತಾ, ಕುಮಿತೆ ಮತ್ತು ಟೀಮ್ ಕತಾ ವಿಭಾಗದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾಳೆ. ಈಕೆ ಕುಂಜಿಲ ಗ್ರಾಮದ ಕೆ.ಎಂ.ಸಮೀರ್ ಮತ್ತು ಖೈರುನ್ನಿಸ ದಂಪತಿ ಪುತ್ರಿ. ನಾಪೋಕ್ಲುವಿನ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿರಾಜಪೇಟೆಯ ಕರಾಟೆ ಮಾಸ್ಟರ್ ಸೆನ್ ಸಾಯಿ ಎಂ.ಬಿ ಚಂದ್ರನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ವರದಿ : ದುಗ್ಗಳ ಸದಾನಂದ.









