ನಾಪೋಕ್ಲು ಸೆ.4 NEWS DESK : ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023 -24 ಸಾಲಿನಲ್ಲಿ ರೂ.36.29 ಲಕ್ಷ ಲಾಭ ಗಳಿಸಿದೆ ಎಂದು ಸಂಘಧ ಅಧ್ಯಕ್ಷ ಮಾಳೆಯಂಡ ಎಂ.ಅಪ್ಪಚ್ಚ ಹೇಳಿದರು. ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 1192 ಜನ ಸದಸ್ಯರಿದ್ದು 1 ಕೋಟಿ 71 ಲಕ್ಷ ರೂ ಶೇರು ಹಣ ಇರುತ್ತದೆ. ಸಂಘದಲ್ಲಿ ಒಟ್ಟು ದುಡಿಯುವ ಬಂಡವಾಳ 20 ಕೋಟಿ ಇರುತ್ತದೆ, ಸಂಘವು ಕೃಷಿ ಸಾಲವನ್ನು 480 ಜನ ರೈತರಿಗೆ 10 ಕೋಟಿ ೪೪ ಲಕ್ಷ ಸಾಲ ವಿತರಿಸಿದ್ದು, ಜಾಮೀನು ಸಾಲ ಮತ್ತು ಗೊಬ್ಬರ ಸಾಲ 90 ಲಕ್ಷ ರೂ ವಿತರಿಸಿದ್ದೇವೆ, ಸಂಘವು ಆಅಅ ಬ್ಯಾಂಕ್ ನಿಂದ 10 ಕೋಟಿ 40 ಲಕ್ಷ ರೂ ಸಾಲ ಪಡೆದುಕೊಂಡು¸ಸಂಘವು ಪರ್ತಿಯಾಗಿ ಹಣವನ್ನು ಪಾವತಿಸಿದೆ, ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡುವಂತೆ ಸಭೆಯಲ್ಲಿ ನರ್ಣಯಿಸಲಾಯಿತು. ಸಂಘದಲ್ಲಿ ಗ್ರಾಹಕರಿಗೆ ಗೊಬ್ಬರ ಸೌಲಭ್ಯ ಹಾಗೂ ಕೃಷಿಉತ್ಪನ್ನಕ್ಕೆ ಬೇಕಾದ ಸಾಮಾಗ್ರಿಗಳು ದೊರೆಯುತ್ತದೆ ಹಾಗೂ ವಾಣಿಜ್ಯ ಮಳಿಗೆಗಳು ಬಾಡಿಗೆಗೆ ಲಭ್ಯವಿರುತ್ತದೆ ಎಂದು ಹೇಳಿದರು.ಮತ್ತು ಸಂಘದ ಸದಸ್ಯರುಗಳ ಮಕ್ಕಳು 10ನೇ ತರಗತಿ ಮತ್ತು 2ನೇ ಪಿ.ಯು.ಸಿ.ಎಲ್ಲಾ ಅಂತಿಮ ಪದವಿ ಹಾಗೂ ಪೋಸ್ಟ್ ಪದವಿಗಳ ಜೋತೆಗೆ ಮೆಡಿಕಲ್,ಇಂಜಿನಿಯರಿಂಗ್, ಡೆಂಟಲ್ಗಳಲ್ಲಿ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸಂಪಾದಿಸಿ ತೇರ್ಗಡೆಯಾದ ಮೊದಲ ಮೂರು ವಿದ್ಯಾರ್ಥಿಗಳಗೆ ಬಹುಮಾನ ನೀಡುತ್ತೇವೆ. ದಿನಾಂಕ: 15.09.2024 ಒಳಗೆ ಸಂಘಕ್ಕೆ ಅಂಕಪಟ್ಟಿಯನ್ನು ತಲುಪಿಸ ಬೇಕಾಗಿ ಈ ಮೂಲಕಸಭೆಯಲ್ಲಿ ಹೇಳಿದರು. ಸಂಘದ ಮಹಾಸಭೆ ದಿನಾಂಕ 22 -09 -2024 ರಂದು ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರು ಚೀಯಕಪೂವಂಡ ವಿ ರೀನಾ, ನರ್ದೇಶಕರುಗಳಾದ ಬದ್ದಂಜೆಟ್ಟಿರ ಎ.ತಿಮ್ಮಯ್ಯ , ಎ.ಜಿ.ಟಿಂಶ, ಚೀಯಕಪೂವಂಡ ಡಿ.ನಾಚಪ್ಪ, ಕರವಂಡ ಜಿ.ಅಪ್ಪಣ್ಣ, ಮಚ್ಚುರ ಎಂ.ರವೀಂದ್ರ, ಮಣವಟ್ಟೀರ ಬಿ.ದೀಪಕ್ ಪೊನ್ನಪ್ಪ, ಮಣವಟ್ಟೀರ ಕೆ.ದಯಾ ಚಿಣ್ಣಪ್ಪ, ಚೀಯಕಪೂವಂಡ ಎ.ಸುನಿಲ್, ಅಪ್ಪುಮಣಿಯಂಡ ಬಿ.ಕಾವೇರಮ್ಮ, ಪಿ.ಎಂ.ವಿಜು ಹಾಗೂ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮತ್ತು ಕೊಡಗು ಡಿಸಿಸಿ ಬ್ಯಾಂಕ್ ನ ಮೇಲ್ವಿಚಾರಕರು ಎಂ.ಬಿ.ಅಯ್ಯಪ್ಪ ಹಾಗೂ ಸಂಘದ ಸಿಬ್ಬಂದಿಗಳು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.