ಮಡಿಕೇರಿ ಸೆ.4 NEWS DESK : ಶಿವಮೊಗ್ಗದಲ್ಲಿ ನಡೆದ ಶಿವಮೊಗ್ಗ ಓಪನ್ 5ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಹೋಲಿ ಮೌಂಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಸಕ್ಲೇನ್ ಸಾಧನೆ ಮಾಡಿದ್ದಾನೆ. ಕುಮಟಿ ಹಾಗೂ ಕಟಾ ಎರಡೂ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಗಳನ್ನು ಗೆಲ್ಲುವುದರ ಮೂಲಕ ಜಿಲ್ಲೆಗೆ ಹಾಗೂ ಭಾರತ ದೇಶಕ್ಕೆ ಕೀರ್ತಿ ತಂದಿದ್ದಾನೆ. ಕೊಡ್ಲಿಪೇಟೆಯ ಆಯೀಷಾ ಹಾಗೂ ಅಫ್ಸರ್ ದಂಪತಿ ಪುತ್ರನಾಗಿರುವ ಮೊಹಮ್ಮದ್ ಸಕ್ಲೇನ್ ಹಾಸನದ ಖ್ಯಾತ ಕರಾಟೆ ತರಬೇತುದಾರರಾಗಿರುವ ಆರೀಫ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ. ಶಿವಮೊಗ್ಗದ ಪಿಇಎಸ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಶ್ರೀ ಲಂಕಾ, ನೇಪಾಳ ಸೇರಿದಂತೆ ದೇಶದ 13 ರಾಜ್ಯಗಳಿಂದ ಸುಮಾರು ಎರಡೂವರೆ ಸಾವಿರ ಕ್ರೀಡಾಪಟುಗಳು ಭಾಗವಹಿಸಿದ್ದು, ಅಮೆರಿಕದಿಂದ ಗ್ರಾಂಡ್ ಮಾಸ್ಟರ್ ಚೆರಿ ಎಫ್.ಮೌಲೆ, ಚಿತ್ರ ನಟ ಸುಮನ್ ತಲ್ವಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಗೆ ಏಷ್ಯನ್ ತೀರ್ಪುಗಾರರು ಸೇರಿದಂತೆ ರಾಷ್ಟ್ರೀಯ ತೀರ್ಪುಗಾರರು ಆಗಮಿಸಿದ್ದರು.
Breaking News
- *ನ.22 ರಂದು ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ*
- *ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ*
- *ನ.23 ರಂದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಬಹುಮಾನ ದಿನ*
- *ಬ್ರೆಜಿಲ್ನಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ*
- *ಸೋಮವಾರಪೇಟೆ : ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಅಂಗಾರಕ ಸಂಕಷ್ಟಿ ಪೂಜೆ*
- *ಕರಿಕೆಯಲ್ಲಿ ಇನ್ನೂ ಸೆರೆಯಾಗದ ಚಿರತೆ : ಮತ್ತೆ ಸಾಕುನಾಯಿ ಮೇಲೆ ದಾಳಿ : ಬೋನ್ ಅಳವಡಿಸುವ ಭರವಸೆ*
- *ಸೋಮವಾರಪೇಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ*
- *ವಿರಾಪೇಟೆ : ಕಾವೇರಿ ಶಾಲೆಯಲ್ಲಿ ಸಂಸ್ಥಾಪಕರ ದಿನ ಆಚರಣೆ*
- *ವಿರಾಜಪೇಟೆ : ನ.21 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ನ.21 ರಂದು ಮಡಿಕೇರಿಯ ವಿದ್ಯುತ್ ವ್ಯತ್ಯಯ*