ಮಡಿಕೇರಿ ಸೆ.6 NEWS DESK : ಕಾಫಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ಕಾಫಿ ತೋಟ ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿವಿಧ ಕಾರ್ಯಚಟುವಟಿಗೆ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಫಿ ಮರುನಾಟಿ, ನೀರಾವರಿ ಯೋಜನೆಯಡಿ-ಕೆರೆ/ ತೆರೆದಬಾವಿ/ ರಿಂಗ್ ಬಾವಿ/ ತುಂತುರು/ ಹನಿ ನೀರಾವರಿ, ಕಾಫಿ ಗೋಡೌನ್/ ಕಾಫಿ ಕಣ/ ಪಲ್ಪರ್ ಯುನಿಟ್/ ಮೆಕಾನಿಕಲ್ ಡ್ರೈಯರ್/ ಸೋಲಾರ್ ಟನೆಲ್ ಡ್ರೈಯರ್, ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಮತ್ತಿತರಕ್ಕೆಸಹಾಯಧನ ಕಲ್ಪಿಸಲಾಗುತ್ತದೆ. ಈ ಎಲ್ಲಾ ಚಟುವಟಿಕೆಗಳನ್ನು ತಮ್ಮ ತೋಟದಲ್ಲಿ ಅಬಿವೃದ್ಧಿ ಪಡಿಸಲು ಇಚ್ಚಿಸುವ ಅರ್ಹ ಕಾಫಿ ಬೆಳೆಗಾರರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. 25 ಹೆಕ್ಟೇರ್ (62 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಬಹುದು.
ದಾಖಲಾತಿಗಳ ವಿವರ: ಅರ್ಜಿದಾರರ ಫೋಟೋ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್. 2024-25 ನೇ ಸಾಲಿನ ಪಹಣಿಗಳು/ ಆರ್‍ಟಿಸಿ, ತೋಟದ ಅಂದಾಜು ನಕ್ಷೆ, ಕ್ವೇಟೇಷನ್/ ಪ್ಲಾನ್ ಮತ್ತು ಎಸ್ಟಿಮೇಷನ್. ಜಾತಿ ಪ್ರಮಾಣ ಪತ್ರ (ಎಸ್‍ಸಿ/ಎಸ್‍ಟಿ ಕಾಫಿ ಬೆಳೆಗಾರರಿಗೆ). ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿ ಸಂಪರ್ಕಿಸಬಹುದು ಎಂದು ಗೋಣಿಕೊಪ್ಪ ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಶ್ರೀದೇವಿತಿಳಿಸಿದ್ದಾರೆ.