ಸುಂಟಿಕೊಪ್ಪ ಸೆ.9 NEWS DESK : ಸುಂಟಿಕೊಪ್ಪದ ವಿವಿಧೆಡೆ ಗೌರಿ-ಗಣೇಶೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಶ್ರೀರಾಮ ಮಂದಿರದಲ್ಲಿ 60ನೇ ವರ್ಷದ ಸ್ವರ್ಣ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿತು. ಹಿರಿಯ ಅರ್ಚಕರಾದ ದರ್ಶನ್ ಭಟ್, ಮನೋಜ್ ಭಟ್ ಅವರ ನೇತೃತ್ವದಲ್ಲಿ ಗಣಹೋಮ ಸೇರಿದಂತೆ ಮಹಾಪೂಜೆ, ಮಂಗಳಾರತಿ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀ ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಸ್.ವಿಘ್ನೇಶ್, ಉಪಾಧ್ಯಕ್ಷ ಬಿ.ಕೆ.ಪ್ರಶಾಂತ್, ಎಂ.ಗಣೇಶ್, ಸಿ.ಸುನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಹೆಚ್.ನಿಖಿಲ್, ಖಜಾಂಜಿ ಬಿ.ಡಿ.ಪದ್ಮನಾಭ, ಕಾರ್ಯದರ್ಶಿಗಳಾದ ಎಂ.ಪಾಂಡ್ಯನ್,ಹೃತೀಕ್, ನವೀನ್ ಸಹಕಾರ್ಯದರ್ಶಿಗಳಾದರ್.ಮಣಿ, ಪಿ.ಕೆ.ಸೂರ್ಯ ಆರ್.ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ಎಸ್.ರಾಜೇಶ್, ಬಿ.ಡಿ.ಅಶ್ವತ್, ಹೆಚ್.ಸಿ.ಯೋಗೇಶ್, ಮಧು, ಚೇತನ್, ಶಿವು, ಪುನಿತ್, ಗುಣಶೇಖರ್, ತ್ರಿಜಲ್ ಮಹೇಶ, ಸಮಿತಿ ಸದಸ್ಯರುಗಳಾದ ಎಂ.ಮಹೇಂದ್ರ, ಎಸ್.ಶ್ರೀನಿವಾಸ್, ಹೆಚ್.ಎ.ಶಶಿ, ಆರ್.ವಿಶ್ವ, ಆರ್.ಪ್ರಜ್ವಲ್, ಹೆಚ್.ಎನ್.ಗಣೇಶ್, ವಿ.ದರಣೇಶ್, ಜೀವ, ಸಿ.ರಾಜೇಶ್, ಹೆಚ್.ಎ.ಚಂದ್ರ, ಹೆಚ್.ಎ.ದಿವಾಕರ,ಹೆಚ್.ಸಿ.ದಿನೇಶ್, ಎಸ್.ಗಣೇಶ್, ಆರ್.ಧರ್ಮೇಂದ್ರ, ಸಿದ್ದು, ಕೆ.ಕಾರ್ತಿಕ್, ಪವನ್, ಜೀವನ್, ವಿನೀತ್, ದರ್ಶನ್, ಎಂ.ಪ್ರಶಾಂತ್, ಮಿಥುನ, ಎಂ.ಪ್ರಶಾಂತ್, ಹೆಚ್.ಎಂ.ರವಿ, ಹಿರಿಯರಾದ ಡಿ.ನರಸಿಂಹ, ಈಶ್ವರ, ಆಶೋಕ್‍ಶೆಟ್, ಸುರೇಶ್‍ಗೋಪಿ, ಧನುಕಾವೇರಪ್ಪ, ಪಿ.ಆರ್.ಸುನಿಲ್‍ಕುಮಾರ್, ಎಂ.ಎಸ್.ಸುನಿಲ್, ಪಟ್ಟೆಮನೆ ಉದಯಕುಮಾರ್, ಬಿ.ಕೆ.ಇಂದಿರಾ, ಕುಸುಮ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇದ್ದರು.
ನಾರ್ಗಾಣೆ :: ಶ್ರೀ ದೇವಿ ನಾರ್ಗಾಣೆ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿಯ 11ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಗೌರಿ-ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆ ಗಿರಿಯಪ್ಪ ಅವರ ಮನೆಯ ಗೌರಮ್ಮ ಬಾವಿಯಿಂದ ಗಂಗಾ ಜಲದೊಂದಿಗೆ ಕೇರಳದ ಚಂಡೆ ಮೇಳದೊಂದಿಗೆ ಮೆರವಣಿಗೆ ಮೂಲಕ ದೇವಾಲಯದಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮುಂಜಾನೆ ಗಣಹೋಮದೊಂದಿಗೆ ಆರಂಭಗೊಂಡು ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಅಧ್ಯಕ್ಷ ಪುನೀತ್ ಕುಮಾರ್, ಉಪಾಧ್ಯಕ್ಷ ಮನುಕುಮಾರ್, ಪ್ರಧಾನ ಕಾರ್ಯದರ್ಶಿ ಆಕಾಶ್, ಖಜಾಂಜಿ ಮೋಹನ, ಸಹಕಾರ್ಯದರ್ಶಿಗಳಾಗಿ ಶಿವಪ್ರಸಾದ್, ಅನಿ, ಸಂಘಟನಾ ಕಾರ್ಯದರ್ಶಿ ಶ್ರೀನಿ, ಮುರುಗ, ಬಿಂದು, ಮಣಿ, ವಸಂತ, ದಯಾನಂದ, ಕಿರಣ್, ಸುಧಿ, ಸಂಜು ಗೌರವ ಅಧ್ಯಕ್ಷರುಗಳಾಗಿ ಶಿವಪ್ಪ, ರಾಜ, ಆನಂದ, ರಾಜುರೈ, ಶರತ್, ವಿವೇಕ್‍ರೈ, ಕುಶಾಲಪ್ಪ, ಪಿ.ಆರ್.ಸುನಿಲ್‍ಕುಮಾರ್ ಮತ್ತಿತರರು ಇದ್ದರು.
ಕೊಡಗರಹಳ್ಳಿ : ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ 6ನೇ ಗೌರಿ-ಗಣೇಶೋತ್ಸವನ್ನು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಆಚರಿಸಲಾಯಿತು. ಮುಂಜಾನೆಯಿಂದ ವಿವಿಧ ಪೂಜೆಗಳನ್ನು ಸಲ್ಲಿಸಿ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ಕೊಡಗರಹಳ್ಳಿ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆದ ನೇರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.