ಮಡಿಕೇರಿ ಸೆ.12 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೇಂಗ್‍ನಾಡ್ ಕೊಡವ ಸಮಾಜದ ಸಹಯೋಗದಲ್ಲಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳ 157ನೇ ಜನ್ಮದಿನಾಚರಣೆಯ ಪ್ರಯುಕ್ತ ಸೆ.28 ರಂದು ಚೇರಂಬಾಣೆಯಲ್ಲಿ “ಕೊಡವ ಸಾಹಿತ್ಯ ನಾಳ್” ಕಾರ್ಯಕ್ರಮ ನಡೆಯಲಿದೆ. ಚೇರಂಬಾಣೆಯ ಕೊಡವ ಸಮಾಜದಲ್ಲಿ ಶಾಸಕರುಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ವಿಧಾನ್ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಸಾಹಿತ್ಯ ನಾಳ್, ಕೊಡವ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಹಿಸಲಿದ್ದಾರೆ. ಬೇಂಗ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ಉಸ್ತುವಾರಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬೇಂಗ್‍ನಾಡ್ ಭಾಗದ ಕಾರುಗುಂದ, ಐವತ್ತೋಕ್ಲು, ಕಡಿಯತ್ತೂರು, ಬೇಂಗೂರು, ಬಾಡಗ, ಕೊಳಗದಾಳು, ಕೋಪಟ್ಟಿ, ಚೆಟ್ಟಿಮಾನಿ ಹಾಗೂ ಬೆಟ್ಟತ್ತೂರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವು ಬೆಳಗ್ಗೆ 9 ಗಂಟೆಗೆ ಚೇರಂಬಾಣೆ ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಶುಭಾರಂಭಗೊಳ್ಳಲಿದ್ದು, ಕೊಂಬ್-ಕೊಟ್ಟ್, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್‍ಚ, ವೀರ ಕೊಡವರ ಸಾಂಪ್ರದಾಯಿಕ ಉಡುಗೆಯೊಂದಿಗೆ ಬೀಕಚಂಡ ಪುಟ್ಟ ಬೆಳ್ಯಪ್ಪ ತಂಡದವರಿಂದ ಅಜ್ಜಪ್ಪ-ತಾಯವ್ವ ತೆರೆ ಮೇಳೈಸಲಿದೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬೇಂಗ್‍ನಾಡ್ ಭಾಗದ ಹಿರಿಯ ಸಾಹಿತಿಗಳಾದ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷÀ ಬಾಚರಣಿಯಂಡ ಪಿ.ಅಪ್ಪಣ್ಣ, ಕೊಡವ ಅಕಾಡೆಮಿಯ ಮಾಜಿ ಸದಸ್ಯರಾದ ಚೀರಮ್ಮನ ವಾಣಿ ಚಂಗುಮ್ಮಯ್ಯ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಗುವುದು. ಸಾಹಿತ್ಯ ನಾಳ್‍ಗೆ ಅತಿಥಿಗಳಾಗಿ ಆಗಮಿಸಲಿರುವ ಡಾ. ಕಾಳಿಮಾಡ ಕೆ. ಶಿವಪ್ಪ ಅವರು ಅಪ್ಪಚ್ಚಕವಿಗಳ ನಾಲ್ ನಾಟಕದ ಮೇಲೆ ಬೆಳಕು ಚೆಲ್ಲಲಿದ್ದಾರೆ. ಜಾನಪದ ಕಲಾವಿದ ಡಾ. ಚೇನಂಡ ರಘು ಉತ್ತಪ್ಪನವರು ಸಾವಿತ್ರಿ ನಾಟಕದ ಬಗ್ಗೆ ಸಂಕ್ಷಿಪ್ತವಾದ ಹಾಡು-ವಿವರಣೆ ನೀಡಲಿದ್ದಾರೆ. ದಿನದ ಮಹತ್ವವನ್ನು ಎತ್ತಿ ಹಿಡಿಯುವಲ್ಲಿ ಸಾರ್ವಜನಿಕರಿಗೆ ಚೋದ್ಯ-ಚೋದ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರುಗುಂದ ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆಯ ಮಕ್ಕಳಿಂದ ಹಲವು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಕೈಕೇರಿ ಸವಿತ ಸಮಾಜದ ಸ್ತ್ರೀಯರಿಂದ ಉಮ್ಮತ್ತಾಟ್, ಚೇರಂಬಾಣೆ ವಿಭಾಗದ ಪುರುಷರಿಂದ ಬೊಳಕಾಟ್ ಸೇರಿದಂತೆ ಹತ್ತು ಹಲವು ಬಗೆಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಕೊಡವ ಸಾಹಿತ್ಯ ನಾಳ್ ಹಾಗೂ ಅಪ್ಪಚ್ಚಕವಿಯ 157ನೇ ಜನ್ಮ ದಿನೋತ್ಸವದ ನನಪಿಗೆ 157 ಕವಿಗಳ ಕವನಗಳಿರುವ ‘ಕೊಡವ ಕವನ ಮೊತ್ತೆ’ಯನ್ನು ಬಿಡುಗಡೆ ಮಾಡಲಾಗುವುದು. ಬೇಂಗ್‍ನಾಡ್ ವಿಭಾಗದ ಸರ್ವ ಜನಾಂಗದವರು ಕೊಡವ ಸಾಹಿತ್ಯ ನಾಳ್‍ನಲ್ಲಿ ಬೆರೆಯುವಂತೆ ಪ್ರಚಾರ ಸಮಿತಿಯ ಉಸ್ತುವಾರಿಯನ್ನು ಮಡಿಕೇರಿ ನಗರ ಸಭೆ ಮಾಜಿ ಅಧ್ಯಕ್ಷರಾದ ಪಟ್ಟಮಾಡ ಡಿ. ಪೊನ್ನಪ್ಪ ನಿರ್ವಹಿಸುತ್ತಿದ್ದಾರೆ. ಮೆರವಣಿಗೆ ಸಮಿತಿ ಅಧ್ಯಕ್ಷರಾದ ಕಲ್ಮಾಡಂಡ ಎ. ಉತ್ತಯ್ಯ, ಸ್ವಾಗತ ಸಮಿತಿ ಅಧ್ಯಕ್ಷರಾದ ತೋರೆರ ಮುದ್ದಯ್ಯ, ಬಡ್ಡಿರ ನಳಿನಿ ಪೂವಯ್ಯ, ಸಾಂಸ್ಕøತಿಕ ಸಮಿತಿಯ ತೇಲಪಂಡ ಲಕ್ಞ್ಮಿ ಪೆಮ್ಮಯ್ಯ, ಕಲ್ಮಾಡಂಡ ಪಿ. ಪೆಮ್ಮಯ್ಯ, ಊಟೋಪಚಾರ ಸಮಿತಿಯ ಕೆ. ಸಿ. ಮೊಣ್ಣಪ್ಪ, ಕೆ. ಸಿ. ಪೆಮ್ಮಯ್ಯ, ಎನ್. ಬಿ. ದೇವಯ್ಯ, ಕುಂಚೆಟ್ಟಿರ ಅಜಿತ್, ಮಂಗೇರಿರ ಕುಞ್ಞಪ್ಪ, ತೇಲಪಂಡ ಸತ್ಯ, ಕೀತಿಯಂಡ ವಿಜಯ ಕುಮಾರ್ ಸೇರಿದಂತೆ ಬೇಂಗ್‍ನಾಡ್ ಕೊಡವ ಸಮಾಜದ ಸರ್ವ ಸದಸ್ಯರು ಶ್ರಮಿಸುತ್ತಿದ್ದಾರೆ. ಬೇಂಗ್‍ನಾಡ್ ವಿಭಾಗದ ಬೆಂಗಳೂರಿನಲ್ಲಿ ನೆಲೆಸಿರುವ ಗ್ರಾಮಸ್ಥರನ್ನು ಸಾಹಿತ್ಯ ನಾಳ್‍ಗೆ ಆಗಮಿಸುವಂತೆ ಬೆಂಗಳೂರು ಕೊಡವ ಸಮಾಜದ ಜಂಟಿ ಖಜಾಂಜಿ ಪೊನ್ನಚೆಟ್ಟಿರ ರಮೇಶ್ ಗಣಪತಿ ಹಾಗೂ ಚಿತ್ರ ಕಲಾವಿದ ತೇಲಪಂಡ ಇವರುಗಳ ಮುಂದಾಳತ್ವದಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಕೊಡವ ಅಕಾಡೆಮಿಯ ಸದಸ್ಯರುಗಳಾದ ನಾಪಂಡ ಗಣೇಶ್ ಹಾಗೂ ಪಾನಿಕುಟ್ಟಿರ ಕುಟ್ಟಪ್ಪ ಇವರ ಸಂಚಾಲಕತ್ವದಲ್ಲಿ ಕೊಡವ ಸಾಹಿತ್ಯ ನಾಳ್ ಹರದಾಸರ ಕೀರ್ತನೆಯನ್ನು ಬೇಂಗ್‍ನಾಡ್ ವಿಭಾಗದ ಮನೆ-ಮನಗಳಲ್ಲಿ ಗುನುಗುನಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ತಿಳಿಸಿದ್ದಾರೆ.