ಮಡಿಕೇರಿ NEWS DESK ಸೆ.15 : ಕೊಡಗಿನ ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದವರಾದ, ಕೃಷಿ ಮತ್ತು ತಂತ್ರಾಗಮ ಹಾಗೂ ಜ್ಯೋತಿಷ್ಯ ಶಾಸ್ತ್ರ ಪ್ರವೀಣರಾದ ಹುಲಿತ್ತಾಳ ಉದಯ ಕುಮಾರ್‌ರಿಗೆ ಹಾಸನದ ಅರಸೀಕೆರೆ ತಾಲ್ಲೂಕಿನ ಕುರುವಂಕ ಗ್ರಾಮದ ಶಾನ್‌ಬೋಗ್ ಶ್ರೀ ದಾಸಪ್ಪ ದತ್ತಿ ನಿಧಿಯಿಂದ ‘ಪ್ರೊ. ಜ್ಯೋತಿಷ್ಯ ರತ್ನಾಕರ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಆಯೋಜಿತ ಸಮಾರಂಭದಲ್ಲಿ ಕೊಡಗಿನ ‘ಶಕ್ತಿ’ ಪತ್ರ‍್ರಿಕೆಯ ಸಂಪಾದಕರಾದ ಜಿ. ರಾಜೇಂದ್ರ, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಸತ್ಯ ವಾಗೀಶ್ವರ, ಡಾ.ರಾಜಾರಾಮ್ ಎ.ಆರ್., ಬಾಳಿಲದ ವಿದ್ಯಾ ಬೋಧಿನಿ ಶಾಲೆಯ ಸಂಸ್ಕೃತ ಶಿಕ್ಷಕರಾದ ವೆಂಕಟೇಶ್ ಕುಮಾರ್, ಕೊಡಗು ಹವ್ಯಕ ಸಂಘದ ವಲಯಾಧ್ಯಕ್ಷರಾದ ಸುಬ್ರಹ್ಮಣ್ಯ ಕುಮಾರ್ ಅವರು ಶಾಲು ಹೊದಿಸಿ, ಫಲ ತಾಂಬೂಲವನ್ನಿತ್ತು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸಮಾಜ ಸೇವೆಗೆ ಶಕ್ತಿ ನೀಡುವಂತದ್ದೆ ಜ್ಯೋತಿಷ್ಯ- ಸಮಾರಂಭವನ್ನು ದೀಪ ಜ್ವಲನದ ಮೂಲಕ ಉದ್ಘಾಟಿಸಿದ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಮಾತನಾಡಿ, ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪ್ರತಿಯೊಬ್ಬರ ಬದುಕು ಚೆನ್ನಾಗಿರುವುದು ಅತ್ಯವಶ್ಯ. ಬದುಕಿನಲ್ಲಿ ಎದುರಾಗುವ ದೋಷಗಳನ್ನು ನಿವಾರಿಸಿ, ಸಮಾಜ ಸೇವೆಗೆ ಶಕ್ತಿಯನ್ನು ತುಂಬಿ ಅಣಿಗೊಳಿಸುವಂತದ್ದೆ ‘ಜ್ಯೋತಿಷ್ಯ’ವೆಂದು ದೃಢವಾಗಿ ನುಡಿದರು. ಇಂದಿನ ಡಿಜಿಟಲೀಕರಣ ವ್ಯವಸ್ಥೆಯಲ್ಲಿ ಅದರಿಂದ ಇರುವ ಉಪಯೋಗದಷ್ಟೆ, ವಂಚನೆಗಳು ನಡೆಯುತ್ತವೆ. ಅದೇ ರೀತಿ ಜ್ಯೋತಿಷ್ಯವನ್ನು ನಿಜಾರ್ಥದಲ್ಲಿ ಜನರ ಒಳಿತಿಗಾಗಿ ಬಳಸುವುದು ಅತ್ಯವಶ್ಯ. ಜನರನ್ನು ಹೆದರಿಸುವುದಕ್ಕೆ ಜ್ಯೋತಿಷ್ಯ ಶಾಸ್ತç ಇರುವಂತಹದ್ದಲ್ಲವೆಂದು ಸ್ಪಷ್ಟ ಪಡಿಸಿದ ರಾಜೇಂದ್ರ ಅವರು, ಗ್ರಹ ದೋಷಗಳಿಂದ ಉಂಟಾಗುವ ಪ್ರಾರಬ್ಧ ಕರ್ಮಗಳನ್ನು ಪ್ರತಿಯೊಬ್ಬರು ಅನುಭವಿಸಿಯೇ ತೀರಬೇಕು. ಇಂತಹ ಯಾವುದೇ ದೋಷಗಳನ್ನು ಎದುರಿಸಲು, ಗಂಭೀರವಾದ ಸಂಕಷ್ಟಗಳನ್ನು ತಿಳಿಗೊಳಿಸಲು ಜ್ಯೋತಿಷ್ಯ ಶಾಸ್ತç ಪರಿಹಾರವನ್ನು ನೀಡುತ್ತದೆಂದು ಮುಕ್ತವಾಗಿ ನುಡಿದರು. ಜ್ಯೋತಿಷ್ಯ ಶಾಸ್ತçದ ಕುರಿತು ಸಮಾಜದಲ್ಲಿ ಗೌರವ ಮತ್ತು ಅವಗಣನೆಗಳೆರಡೂ ಇರುವುದನ್ನು ಪ್ರಸ್ತಾಪಿಸಿದ ಅವರು, ಜ್ಯೋತಿಷ್ಯ ಎನ್ನುವುದು ಬದುಕಿಗೆ ಉತ್ತಮ ಹಾದಿಯನ್ನು ತೋರಿಕೊಡುವ ಮಾರ್ಗವೆ ಆಗಿದೆ. ಲೋಕಕಲ್ಯಾಣಕ್ಕಾಗಿ ನಡೆಯುವ ಹೋಮ ಹವನಗಳ ಬಗ್ಗೆಯೂ ಅಪಶ್ರುತಿ ಎತ್ತುವುದು ಏತಕ್ಕೆಂದು ಪ್ರಶ್ನಿಸಿ, ಭಾರತ ಪುಣ್ಯ ಭೂಮಿಯಾಗಿದ್ದು, ಇಲ್ಲಿನ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ವೈದಿಕ ಪರಂಪರೆ ಮುಂದುವರೆಯಲೆAದು ಹಾರೈಸಿದರು. ಅಭಿನಂದನಾ ಭಾಷಣ ಮಾಡಿದ ಬಾಳಿಲ ವಿದ್ಯಾ ಬೋಧಿನಿ ಶಾಲೆಯ ಸಂಸ್ಕೃತ ಶಿಕ್ಷಕರಾದ ವೆಂಕಟೇಶ್ ಕುಮಾರ್ ಮಾತನಾಡಿ, ಸನಾತನ ಹಿಂದೂ ಧರ್ಮದ ಆಚರಣೆಗಳ ಪ್ರಮಾಣವಾಗಿ ವೇದಗಳನ್ನು ಗುರುತಿಸಲಾಗುತ್ತದೆ. ಈ ವೇದಗಳ ಪ್ರಮುಖ ಆರು ಅಂಗಗಳಲ್ಲಿ ಕಣ್ಣಿನ ಸ್ಥಾನವನ್ನು ‘ಜ್ಯೋತಿಷ್ಯ ಶಾಸ್ತç’ಕ್ಕೆ ನೀಡಲಾಗುತ್ತದೆ. ನಭೋಮಂಡಲದಲ್ಲಿರುವ ಗ್ರಹ ನಕ್ಷತ್ರಗಳು ಬೆಳಕಾಗಿ ನಮಗೆ ಗೋಚರಿಸುತ್ತದೆ. ಇದನ್ನು ಆಧರಿಸಿರುವಂತಹದ್ದೆ ಜ್ಯೋತಿಷ್ಯವಾಗಿದೆ. ಜ್ಯೋತಿಷ್ಯವೆಂದರೆ ಬೆಳಕು ಇದ್ದಂತೆ. ಕತ್ತಲಲ್ಲಿರುವ ವಸ್ತುಗಳನ್ನು ಗುರುತಿಸಲು ಬೆಳಕು ಸಹಕಾರಿಯಾಗುತ್ತದೆ. ಅದೇ ರೀತಿ ಬದುಕಿನ ಪಥವನ್ನು ತೋರಿಸಿಕೊಡುವ ಬೆಳಕೆ ಜ್ಯೋತಿಷ್ಯ. ಗ್ರಹಗತಿಗಳಿಂದ ಎದುರಾಗುವ ದೋಷಗಳ ಪರಿಹರಿಸಲಾಗುವುದಿಲ್ಲ. ಬದಲಾಗಿ ಅವುಗಳನ್ನು ಎದುರಿಸುವ ಸಹನೆಯನ್ನು ಜ್ಯೋತಿಷ್ಯ ಶಾಸ್ತç ನಮಗೆ ನೀಡುತ್ತದೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಅಖಿಲ ರವಿ ಆಯುರ್ ಶಾಲಾ ವೈದ್ಯರಾದ ಡಾ. ರಾಜಾರಾಮ್ ಎ.ಆರ್. ಅವರು ಮಾತನಾಡಿ, ಆಯುರ್ವೇದದೊಂದಿಗೆ ಜ್ಯೋತಿಷ್ಯವೂ ಸೇರಿಕೊಂಡಿರುವುದಾಗಿ ತಿಳಿಸಿ, ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಎಂದಿಗೂ ಮೌಢ್ಯವಲ್ಲ. ಆದರೆ, ಮೂಢ ನಂಬುಗೆಗಳನ್ನೆ ನಾವಿಂದು ಜ್ಯೋತಿಷ್ಯವೆಂದು ತಿಳಿದುಕೊಂಡಿದ್ದೇವೆಂದು ಅಭಿಪ್ರಾಯಿಸಿ, ಮುಂಬರುವ ದಿನಗಳನ್ನು ಎದುರಿಸಲು ಮಾನಸಿಕ ಸ್ಥೈರ್ಯ ತುಂಬಲು ನೆರವಾಗುವಂತದ್ದೆ ಜ್ಯೋತಿಷ್ಯವಾಗಿದೆ. ನಾವೆಲ್ಲರು ಭಾರತೀಯ ಪರಂಪರೆಯನ್ನು ಮೈಗೂಡಿಸಿಕೊಂಡು ಭಾರತೀಯರಾಗಿ ಬದುಕಲು ಕಲಿಯೋಣವೆಂದು ಕರೆ ನೀಡಿದರು. ಪ್ರಶಸ್ತಿ ಸ್ವೀಕರಿಸಿದ ಹುಲಿತ್ತಾಳ ಉದಯ ಕುಮಾರ್ ಮಾತನಾಡಿ, ಜ್ಯೋತಿಷ್ಯ ಶಾಸ್ತçದ ತಮ್ಮ ಕಲಿಕೆಯ ಹಾದಿ, ತಂದೆ ಹುಲಿತ್ತಾಳ ರಾಮ ಮೂರ್ತಿಯವರ ಮಾರ್ಗದರ್ಶನಗಳನ್ನು ನೆನಪಿಸಿಕೊಂಡು, ಜ್ಯೋತಿಷ್ಯದ ಹೆಸರಿನಲ್ಲಿ ಕೊಡಗು ಪ್ರಳಯದಿಂದ ನಾಶವಾಗುತ್ತದೆ ಮೊದಲಾಗಿ ಕೆಲವರ ಹೇಳಿಕೆಗಳು ಸಮರ್ಪಕವಾದುದಲ್ಲವೆಂದು ಅನಿಸಿಕೆ ವ್ಯಕ್ತಪಡಿಸಿದರು. ಮೋದಿಯವರೊಂದಿಗೆ ರಜತ ಕಿರೀಟ ಧಾರಣೆ?- ಶ್ರೀ ದಾಸಪ್ಪ ದತ್ತಿ ನಿಧಿಯ ಕೆ.ಪಿ.ವೆಂಕಟೇಶ ಮೂರ್ತಿಯವರಿಂದ ಇಂದು ಹುಲಿತ್ತಾಳ ಉದಯ ಕುಮಾರ್ ಅವರಿಗೆ 111ನೇ ವ್ಯಕ್ತಿಯಾಗಿ ರಜತ ಕಿರೀಟ ಧಾರಣೆ ನಡೆಯಬೇಕಿತ್ತು. ಆದರೆ, ವೆಂಕಟೇಶ ಮೂರ್ತಿಯವರು ಅನಿವಾರ್ಯ ಕಾರಣಗಳಿಂದ ಬಾರದ ಹಿನ್ನೆಲೆ ಕಿರೀಟ ಧಾರಣೆ ಸಾಧ್ಯವಾಗಲಿಲ್ಲ. ಆದರೆ, 112ನೇ ವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಚಿನ್ನದ ಕಿರೀಟ ಧಾರಣೆಯನ್ನು ಮಾಡಲು ವೆಂಕಟೇಶ ಮೂರ್ತಿಯವರು ಮುಂದಾಗಿದ್ದು, ಆ ಸಂದರ್ಭ ನವದೆಹಲಿಯಲ್ಲಿ ಮೋದಿಯವರೊಂದಿಗೆ ಉದಯ ಕುಮಾರ್ ಅವರಿಗೆ ರಜತ ಕಿರೀಟ ಧಾರಣೆ ಮಾಡುವ ಸಾಧ್ಯತೆಗಳಿದೆ. ವಿದುಷಿ ಸುಶಾಮ ಮತ್ತು ಪೂರ್ಣಶ್ರೀ ಪ್ರಾರ್ಥಿಸಿದರೆ, ಎಫ್‌ಎಂಕೆಎಂಸಿ ಕಾಲೇಜಿನ ಪ್ರೊ. ಡಾ. ಶ್ರೀಧರ ಹೆಗಡೆ ಸ್ವಾಗತಿಸಿದರು. ಸವಿತಾ ಭಟ್ ಕಾರ್ಯಕ್ರಮ ನಿರೂಪಿಸಿದರು.ಕವಿತಾ ರಾಮ್ ವಂದಿಸಿದರು.
Breaking News
- *ಬಾಳುಗೋಡುವಿನಲ್ಲಿ ಸಂಭ್ರಮದ ಕೊಡವ ನಮ್ಮೆ : ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸಿ : ಶಾಸಕ ಎ.ಎಸ್.ಪೊನ್ನಣ್ಣ*
- *ವಿರಾಜಪೇಟೆಯಲ್ಲಿ ಶಾಸಕರಿಂದ ಕೃಷಿ ಯಂತ್ರೋಪಕರಣ ವಿತರಣೆ*
- *ಮಡಿಕೇರಿ : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ*
- *ಕೊಡಗು : ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ*
- *ಕೊಡಗು : ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಮಡಿಕೇರಿಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ಮಾರಾಟಕ್ಕಿದೆ*
- *ನ.30 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗು ಜಿಲ್ಲಾ ಪ್ರವಾಸ*
- *ಜಾರ್ಖಂಡ್ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ*
- *ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು*
- *TO LET / ಬಾಡಿಗೆಗೆ*