ಸೋಮವಾರಪೇಟೆ ಸೆ.16
NEWS DESK : ಭಾರತದ ಸೈನ್ಯಕ್ಕೆ ಕೊಡವರ ಕೊಡುಗೆ ಅಪಾರ ಎಂದು ನಿವೃತ್ತ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್ ಹೇಳಿದರು. ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ನಡೆದ ಮಂಡೆಪಂಡ ಅಕ್ಕಮ್ಮ ಗಣಪತಿ ಸ್ಮಾರಕ ದತ್ತಿನಿಧಿ ಕಾರ್ಯಕ್ರಮದಲ್ಲಿ ಕೊಡವ ಸಂಸ್ಕೃತಿ , ಮಹಿಳೆ, ಸಾಹಿತ್ಯ, ಸಾಹಿತಿಗಳು, ಫಿ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸಾಧನೆಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಕೊಡವರು, ವೀರರು, ಶೂರರು ಎಂದು ಕರೆಯಬೇಕಾದರೆ ಕಾರಣವೂ ಇದೆ. ವಿಶ್ವ ಮಹಾಯುದ್ಧದ ಕಾಲದಲ್ಲೇ ಮನೆಗೊಬ್ಬರರಂತೆ ಸೈನ್ಯಕ್ಕೆ ಸೇರುತ್ತಿದ್ದರು. ಹುಟ್ಟಿನಿಂದಲೇ ಶೂರತ್ವ ಅವರಿಗೆ ಇದೆ. ಗಂಡು ಮಗು ಜನಿಸಿದರೆ ಗಾಳಿಯಲ್ಲಿ ಗುಂಡುಹಾರಿಸಿ ಸಂಭ್ರಮಿಸುವುದು ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಮನೆಯಲ್ಲಿ ಇಬ್ಬರು ಗಂಡು ಮಕ್ಕಳು ಜನಿಸಿದರೆ, ಒಬ್ಬರನ್ನು ಸೈನ್ಯಕ್ಕೆ ಕಳುಹಿಸುತ್ತಿದ್ದರು ಎಂದು ಹೇಳಿದರು. ಕೊಡವರು ಪ್ರಕೃತಿ ಮತ್ತು ಆಗ್ನಿ ಅರಾಧಕರು, ಇವತ್ತಿಗೂ ಮದುವೆಯಂತಹ ಶುಭಕಾರ್ಯಗಳು ವೈದಿಕ ಪದ್ದತಿಯಂತೆ ನಡೆಯುವುದಿಲ್ಲ. ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಅವಕಾಶವನ್ನು ಕಲ್ಪಿಸಿರುವ ಜನಾಂಗವಾಗಿದೆ. ಕೊಡವರ ಸಂಸ್ಕøತಿ, ಅಚಾರವಿಚಾರ, ಉಡುಗೆ ತೊಡುಗೆ, ನೃತ್ಯ, ಸಂಸ್ಕಾರ ಪ್ರಪಂಚದ ಯಾವುದೇ ಜನಾಂಗದಲ್ಲೂ ಕಂಡುಬರುವುದಿಲ್ಲ ಎಂದು ಮೆಚ್ಚುಗೆಯ ಮಾತನಾಡಿದರು. ಕೊಡಗಿನ ಆರಂಭಿಕ ಮೂಲನಿವಾಸಿಗಳಲ್ಲಿ ಕೊಡವರು ಸೇರಿದ್ದಾರೆ. ಈಗಲೂ ಕೊಡವರು ಅತೀಚಿಕ್ಕ ಸಮುದಾಯವಾಗಿದೆ. ಕೊಡಗಿನ ಅತ್ಯಂತ ದೊಡ್ಡ ಸಮುದಾಯಗಳಲ್ಲಿ ಒಂದಾಗಿದೆ. ಅನಾದಿಕಾಲದಿಂದಲೂ ಸಾಂಸ್ಕøತಿಕವಾಗಿ ಪ್ರಬಲ ಸಮುದಾಯವಾಗಿದೆ. 1924ರಲ್ಲಿ ನಡಿಕೇರಿಯಂಡ ಚಿಣ್ಣಪ್ಪ ಅವರು ಪಟ್ಟೋಲೆ ಪಾಳಮೆಯಲ್ಲಿ ಕೊಡವ ಸಂಪ್ರಾದಾಯಗಳು ಮತ್ತು ಜಾನಪದ ಗೀತೆಗಳನ್ನು ಸಂಕಲಿಸಿದ್ದಾರೆ. ಇದನ್ನು ಮೈಸೂರು ವಿಶ್ವವಿದ್ಯಾಲಯವು ಭಾರತೀಯ ಭಾಷೆಯ ಒಂದು ಸಮೂದಾಯದ ಜಾನಪದದ ಆರಂಭಿಕ ಸಂಗ್ರಹವೆಂದೇ ಗುರತಿಸಿದೆ ಎಂದು ವಿಶ್ಲೇಷಿಸಿದರು. ಮಹಿಳೆಯರ ಸಾಂಪ್ರಾದಾಯಕ ಆಭರಣಗಳು ವಿಶಿಷ್ಟವಾಗಿದೆ. ಕೊಡವನ ಕುಪ್ಯ, ಪೀಚೆಕತ್ತಿ, ಓಡಿಕತ್, ಮಂಡೆಥುನಿ(ಪೇಟ), ಥೋಡಂಗೆ, ಎಲ್ಲವೂ ವಿಶಿಷ್ಟವಾಗಿದೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹ ಕಾರ್ಯದರ್ಶಿ ಜಲಜಾ ಶೇಖರ್ ಮಾತನಾಡಿ, ವಿದೇಶಿಗರು ಕನ್ನಡದ ಬಗ್ಗೆ ಸಂಶೋಧನೆಗಳನ್ನು ಮಾಡಿದ್ದಾರೆ. ಬಿ.ಎಲ್.ರೈಸ್ ಅವರ ಕನ್ನಡದ ಬಗೆಗಿನ ಸಂಶೋಧನೆಯನ್ನು ಅಭ್ಯಸಿಸದೆ ಕನ್ನಡಿಗರ ವಿದ್ಯಾರ್ಥಿ ಡಾಕ್ಟರೇಟ್ ಪಡೆಯಲು ಸಾಧ್ಯವಿಲ್ಲ. ಕಿಟಲ್ ಅವರ ಕೊಡಗೆಯನ್ನು ನಾವು ಮರೆಯಬಾರದು. ಕರ್ನಾಟಕದಲ್ಲಿ ಬದುಕುತ್ತಿರುವವರು ಕನ್ನಡವನ್ನು ಮಾತನಾಡುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಕ.ಸಾ.ಪ.ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಮಾಜಿ ಅಧ್ಯಕ್ಷರಾದ ಜೆ.ಸಿ.ಶೇಖರ್, ಎಚ್.ಜೆ.ಜವರ, ಪದಾಧಿಕಾರಿಗಳಾದ ಎ.ಪಿ.ವೀರರಾಜು, ಜೋಕಿಂವಾಸ್, ಕಾರ್ಯದರ್ಶಿ ಜ್ಯೋತಿ ಅರುಣ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗು ನಿವೃತ್ತ ಉಪಾನ್ಯಾಸಕಿ ತಿಲೋತ್ತಮೆ ನಂದಕುಮಾರ್ ಹಾಗೂ ಉತ್ತಮ ಶಿಕ್ಷಕಿ ಜಿಲ್ಲಾ ಪ್ರಶಸ್ತಿ ಪುರಸ್ಕøತರಾದ ವಸಂತಿ ಅವರನ್ನು ಸನ್ಮಾನಿಸಲಾಯಿತು.