ಮಡಿಕೇರಿ ಸೆ.24 NEWS DESK : ಗೊಣಿಕೊಪ್ಪಲು ಕಾಫಿ ಮಂಡಳಿ ವತಿಯಿಂದ ನಿಟ್ಟೂರು ಗ್ರಾ.ಪಂ ಸಹಯೋಗದೊಂದಿಗೆ ಬೆಳೆಗಾರರಿಗೆ ಗ್ರಾಮ ಮಟ್ಟದ ಕಾಫಿ ಕಾರ್ಯಾಗಾರ ನಡೆಯಿತು. ನಿಟ್ಟೂರು ಗ್ರಾ.ಪಂ ಸಮುದಾಯ ಭವನದಲ್ಲಿ ಕಾರ್ಯಾಗಾರದಲ್ಲಿ ಕಾಫಿ ಮಂಡಳಿಯ ಉಪನಿರ್ದೇಶಕರಾದ ಡಾ.ಶ್ರೀದೇವಿ ಮತ್ತು ಗೊಣಿಕೊಪ್ಪಲು ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಮುಖಾರೀಬ್ ಮಾತನಾಡಿ, ಬೆಳೆಗಾರರಿಗೆ ಅತೀ ಹೆಚ್ಚಿನ ಮಳೆಯಿoದಾಗಿ ಕಾಫಿ ಗಿಡಗಳಲ್ಲಿ ಕೊಳೆರೋಗ ನಿರ್ವಹಣೆ ಮತ್ತು ಕಾಫಿ ಉದುರುವುದರ ಬಗ್ಗೆ ಹಾಗೂ ಮರು ನಾಟಿ, ಗೋಡೌನ್, ಕಾಫಿ ಕಣ, ಹೊಸ ಕೆರೆ, ಬಾವಿ, ಸ್ಪ್ರಿಂಕ್ಲರ್ ಉಪಕರಣ, ಮೋಟಾರ್, ಮಿನಿ ಟ್ರ್ಯಾಕ್ಟರ್ ಮುಂತಾದವುಗಳಿಗೆ ಸಬ್ಸಿಡಿಯನ್ನು ಕಾಫಿ ಮಂಡಳಿಯಿಂದ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಅಮ್ಮುಣಿ, ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಸದಸ್ಯರಾದ ಕಾಟಿ ಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಗ್ರಾ.ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಸುರೇಶ್, ಪ್ರಮುಖರಾದ ಪಾರುವಂಗಡ ಪವನ್, ಮುಕ್ಕಾಟಿರ ಪ್ರಿಸ್ಸ್ ಮುಂತಾದವರು ಹಾಜರಿದ್ದರು.