ನಾಪೋಕ್ಲು ಅ.10 NEWS DESK : ನಮ್ಮ ಕ್ರೈಸ್ತ ಜೀವನವು ಉತ್ತಮ ಗುಣಗಳನ್ನು ಒಳಗೊಂಡ ಫಲದಾಯಕ ಜೀವನವಾಗಬೇಕು ಎಂದು ಮೈಸೂರು ಧರ್ಮ ಪ್ರಾಂತ್ಯದ ಪ್ರೇಷಿತ ಆಡಳಿತ ಅಧಿಕಾರಿ ಬರ್ನಾಡ್ ಮೊರಾಸ್ ಹೇಳಿದರು. ನಾಪೋಕ್ಲು ಮೇರಿ ಮಾತೆಯ ದೇವಾಲಯದ 31ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಪ್ರವಚನ ನೀಡಿದರು. ನಾವೆಲ್ಲರೂ ದೇವರ ಮಕ್ಕಳು ದೇವರಲ್ಲಿ ವಿಶ್ವಾಸ, ನಂಬಿಕೆ ಇಟ್ಟು ಮಾಡುವ ಕೆಲಸದಲ್ಲಿ ಶ್ರದ್ಧೆ, ದ್ಯಾನ, ಬುದ್ಧಿ, ತಿಳುವಳಿಕೆ ಇರಿಸಿ ಸಂಸ್ಕಾರವಂತರಾಗಿ ಬಾಳಬೇಕು ಎಂದರು. ಕಾರ್ಯಕ್ರಮದಲ್ಲಿ 13 ಮಂದಿ ಕ್ರೈಸ್ತ ಬಾಲಕ, ಬಾಲಕಿಯರಿಗೆ ದೃಢೀಕರಣ ಸಂಸ್ಕಾರವನ್ನು ನೀಡಿ ಪ್ರವಚನ ಬೋಧಿಸಿ ಶುಭ ಹಾರೈಸಿದರು. ಈ ಸಂದರ್ಭ ಗುರುಗಳ ನೂತನ ನಿವಾಸಕ್ಕೆ ಸಂಕುಸ್ಥಾಪನೆ ಮಾಡಿ ಆಶೀರ್ವದಿಸಿದರು. ಉತ್ಸವದಲ್ಲಿ ಮೈಸೂರು ಧರ್ಮ ಗುರುಗಳಾದ ಆಬಿಲಾಸ್, ಮೇರಿ ಮಾತೆಯ ದೇವಾಲಯದ ಧರ್ಮ ಗುರುಗಳಾದ ಜ್ಞಾನ ಪ್ರಕಾಶ್, ಪಾಲನಾ ಸಮಿತಿ ಮತ್ತು ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು ಕ್ರೈಸ್ತ ಸಮುದಾಯದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.