ಸುಂಟಿಕೊಪ್ಪ ಅ.14 NEWS DESK : ಕನ್ನಡ ಭಾಷೆ ನಮ್ಮ ಉಸಿರಾಗಿರಬೇಕು, ಕನ್ನಡ ಉಳಿಸಿ ಬೆಳೆಸುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ಕ.ಸಾ.ಪ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ ಐಗೂರು ಕೇಂದ್ರದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ಕಚೇರಿ ಉದ್ಘಾಟಿಸಿದರೆ ಸಾಲದು ಪ್ರತಿದಿನ ಕಚೇರಿ ಬಾಗಿಲು ತೆರದಿಡಬೇಕು. ಹೋಬಳಿ ಕೇಂದ್ರದ ಶಾಲೆಗಳಲ್ಲಿ ಕನ್ನಡ ಭಾಷೆ ಸಾಹಿತ್ಯದ ಚಟುವಟಿಕೆಗಳನ್ನು ನಡೆಸಿಕೊಂಡು ಶಾಲಾ ಮಕ್ಕಳಲ್ಲಿ ಹಾಗೂ ಸ್ತ್ರೀಶಕ್ತಿ ಗುಂಪಿನವರಿಗೆ ಕನ್ನಡ ಜಾಗೃತಿ ಕೆಲಸ ಮಾಡಬೇಕು. ಮಹಿಳೆಯರಲ್ಲಿ ಆಡಗಿರುವ ಸಾಹಿತ್ಯ ಪ್ರತಿಭೆಗಳನ್ನು ಹೊರ ತರುವ ಕೆಲಸ ಸಾಹಿತ್ಯ ಪರಿಷತ್ ವತಿಯಿಂದ ಆಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಕನ್ನಡಭಾಷೆ ಸಾಹಿತ್ಯ ಇನ್ನಷ್ಟು ಗಟ್ಟಿಯಾಗಿ ಬೆಳೆಸುವ ಕಾರ್ಯ ಆಗಬೇಕು. ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡಬೇಕು ಕೊಡಗಿಗೆ 3 ವಿಧಾನಸಬಾ ಸದಸ್ಯರು ನೇಮಕವಾಗಬೇಕು ಆಗಿದ್ದಲ್ಲಿ ಕೊಡಗಿನ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಕನ್ನಡ ಮನಸ್ಸುವುಳ್ಳವರು ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸೋಮವಾರಪೇಟೆ ಕಸಬಾ ಹೋಬಳಿ ಘಟಕದ ಐಗೂರು ಕೇಂದ್ರದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ವಹಿಸಿ ಮಾತನಾಡಿದರು. ದಾನಿಗಳಾದ ಸಾಂದೀಪಿನಿ ಶಾಲೆಯ ಅಧ್ಯಕ್ಷ ಎಂ.ಟಿ.ದಾಮೋದರ, ಯಡವಾರೆಯ ಡಿ.ಹೆಚ್.ವಿಶ್ವನಾಥ ರಾಜ್ ಅರಸು, ಮಚ್ಚಂಡ ಆಶೋಕ, ಕೆ.ಪಿ.ರೋಷನ್, ಕೊಡಕಂಡಿ ಸೋಮಣ್ಣ ಇವರುಗಳನ್ನು ಸನ್ಮಾನಿಸಲಾಯಿತು. ಸಂಘಟನಾ ಕಾರ್ಯದರ್ಶಿ ವಿಶ್ವನಾಥ ರಾಜ್ ಅರಸು, ಪರಿಷತ್ ಖಜಾಂಚಿ ಎಸ್.ಎಂ.ಬೆಳ್ಯಪ್ಪ, ಗೌರವಕಾರ್ಯದರ್ಶಿ ಎಂ.ಟಿ.ಸರಳಕುಮಾರಿ, ಎಂ.ಬಿ.ಧರ್ಮಪ್ಪ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಕೆ.ಪಿ.ದಿನೇಶ, ವಸಂತಿ ರವೀಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕೋಶಾಧಿಕಾರಿ ವಾಸು ರೈ, ಜಿಲ್ಲಾ ಕಸಪ ಸದಸ್ಯ ವಿಲ್ಪೆಡ್ ಕ್ರಾಸ್ತಾ, ಉವೇಶ ರಾಜ್ ಅರಸು, ತಿಮ್ಮಯ್ಯ ಉಪಸ್ಥಿತರಿದ್ದರು. ತಾಲೂಕು ಕಸಾಪ ಗೌರವಕಾರ್ಯದರ್ಶಿ ಜ್ಯೋತಿ ನಿರೂಪಿಸಿ ವಂದಿಸಿದರು.