ನಾಪೋಕ್ಲು ಅ.18 : ಬಲ್ಲಮಾವಟಿಯ ನೇತಾಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಉಪಾಧ್ಯಕ್ಷರಾಗಿ ಚಂಗೇಟಿರ ಕುಮಾರ್ ಸೋಮಣ್ಣ, ಕರಾಸ್ಪಾಂಡೆಂಟಾಗಿ ತೋಲಂಡ ಅರುಣ್ ಕಾವೇರಪ್ಪ ಮತ್ತು ಗೌರವ ಕಾರ್ಯದರ್ಶಿಯಾಗಿ ಮುಕ್ಕಾಟಿರ ವಿನಯ್ ಆಯ್ಕೆಯಾದರು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬೊಟ್ಟೋಳಂಡ ಗಿರೀಶ್ ಮಾದಪ್ಪ, ತಾಪಂಡ ವರುಣ್ ಸುಬ್ಬಯ್ಯ, ಬೈರುಡ ವಸಂತ, ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ನೆರವಂಡ ಅಪ್ಪಣ್ಣ, ಅಪ್ಪಚ್ಚೀರ ಗೌತಮ್ ಕಾರ್ಯಪ್ಪ, ನಿಕಟಪೂರ್ವ ಗೌರವ ಕಾರ್ಯದರ್ಶಿ ಚಂಗೇಟಿರ ಅಚ್ಚಯ್ಯ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.