ಮಡಿಕೇರಿ ಅ.19 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಪೊನ್ನಂಪೇಟೆ ಜೇಸಿ ಸಂಸ್ಥೆ ಹಾಗೂ ಮಾಯಮುಡಿ ಶ್ರೀ ಕಾವೇರಿ ಅಸೋಸಿಯೇಷನ್ನ ಸಹಭಾಗಿತ್ವದಲ್ಲಿ ನ.24 ರಂದು ಮಾಯಮುಡಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ‘ತೋಕ್ನಮ್ಮೆ’ಯನ್ನು ಆಯೋಜಿಸುವ ಕುರಿತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು. ಮಾಯಮುಡಿ ಶ್ರೀ ಕಾವೇರಿ ಅಸೋಸಿಯೇಷನ್ ಕಟ್ಟಡದಲ್ಲಿ ಸಂಸ್ಥೆಯ ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಸಂಸ್ಕøತಿಯ ಪ್ರತೀಕವಾಗಿರುವ ತೋಕ್ ಜನಾಂಗ ಭಾಂದವರ ಆಧ್ಯಾತ್ಮಿಕ ಸಂಕೇತವಾಗಿದ್ದು ಪೂಜ್ಯನೀಯವಾಗಿರುತ್ತದೆ. ಕೊಡವ ಸಾಹಿತ್ಯ-ಸಂಸ್ಕøತಿಯಲ್ಲಿ ‘ತೋಕ್’ಗೆ ಉನ್ನತ ಸ್ಥಾನ-ಮಾನವಿದ್ದು ಅಕಾಡೆಮಿ ವತಿಯಿಂದ ತೋಕ್ನಮ್ಮೆ ನಡೆಸುವುದು ಜನಾಂಗ ಭಾಂದವರ ಒಗ್ಗೂಡುವಿಕೆ ಹಾಗೂ ತೋಕ್ನ ಮಹತ್ವದ ಬಗ್ಗೆ ಅರಿಯಲು ಸೂಕ್ತ ವೇದಿಕೆಯಾಗಿರುತ್ತದೆ. ತೋಕ್ ನಮ್ಮೆಯು ಕೇವಲ ಗುಂಡು ಹೊಡೆಯುವ ಸ್ಪರ್ಧೆ ಆಗಿರದೆ, ಇದನ್ನು ಕೊಡವ ಸಾಂಸ್ಕøತಿಕ ಮೆರುಗಿನೊಂದಿಗೆ ಧೈವೀ ಭಾವದೊಂದಿಗೆ ಬೆರೆಯುವ ಕೆಲಸವನ್ನು ಅಕಾಡೆಮಿಯಿಂದ ಮಾಡಲಾಗುವುದೆಂದರು. ‘ತೋಕ್ನಮ್ಮೆ’ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು. ತೋಕ್ನಮ್ಮೆ ಸಮಿತಿ ಸಂಚಾಲಕ ಹಾಗೂ ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ಮಾತನಾಡಿ, ‘ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಾಯಮುಡಿಯಲ್ಲಿ ನಡೆಸಲು ಉದ್ದೇಶಿಸಿರುವ ‘ತೋಕ್ನಮ್ಮೆ’ಯನ್ನು ರಾಜ್ಯಮಟ್ಟದಲ್ಲಿ ನಡೆಸುವಂತೆ ತೀರ್ಮಾನಿಸಿದ್ದು ಎರಡು ಭಾಗಗಳಲ್ಲಿ ಆಚರಿಸಲಾಗುವುದು. ಪಾಯಿಂಟ್-2 ಹಾಗೂ ಒಂಟಿ ನಳಿಕೆ ತೋಟತೋಕ್ ವಿಭಾಗದಲ್ಲಿ ನಡೆಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.30,000, ದ್ವಿತೀಯ ಬಹುಮಾನ ರೂ.20.000 ಹಾಗೂ ತೃತೀಯ ಬಹುಮಾನ ರೂ.10.000 ಸಾವಿರ ನಗದು ಹಾಗೂ ಪಾರಿತೋಷಕಗಳನ್ನು ಎರಡೂ ವಿಭಾಗಗಳಲ್ಲಿ ನೀಡಲಾಗುವುದು. ಸ್ಪರ್ಧೆಯಲ್ಲಿ ಜನಾಂಗ ಭಾಂದವರು ಲಿಂಗ-ಭೇದವಿಲ್ಲದೆ ಪಾಲ್ಗೊಳ್ಳಲು ಅವಕಾಶವಿದ್ದು ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಕಲ ಸಿದ್ದತೆಗಳನ್ನು ಮಾಡಲಾಗುವುದು. ಇದೊಂದು ಸಾಂಸ್ಕೃತಿಕ ಮೆರುಗಿನ ಸ್ಪರ್ಧೆ ಆಗಿರುವುದರಿಂದ ಸುಮಾರು 500-600 ಸ್ಪರ್ಧಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು ಒಂದು ಸಾವಿರದಷ್ಟು ಜನರು ಸೇರುವ ನಿರೀಕ್ಷೆ ಇದೆ ಎಂದರು. ಸಭೆಯಲ್ಲಿ ಅಕಾಡೆಮಿ ಸದಸ್ಯರಾದ ಚೆಪ್ಪುಡಿರ ಎಸ್.ಉತ್ತಪ್ಪ, ನಾಯಂದಿರ ಆರ್.ಶಿವಾಜಿ, ಪೊನ್ನಿರ ಯು.ಗಗನ್, ಮೊಳ್ಳೆಕುಟ್ಟಡ ದಿನು ಬೋಜಪ್ಪ ಹಾಗೂ ಅಸೋಸಿಯೇಷನ್ ಸದಸ್ಯರುಗಳಾದ ಕಾಳಪಂಡ ಸಿ.ಸುಧೀರ್, ಚೆಪ್ಪುಡಿರ ಪಿ,ಅಯ್ಯಪ್ಪ, ನಾಮೆರ ಕೆ.ದೇವಯ್ಯ, ಬಾನಂಡ ಎಸ್. ಪೃಥ್ವಿ, ಆಪಟ್ಟಿರ ಸೋಮಣ್ಣ, ಅಮ್ಮತ್ತಿರ ಎಂ. ಲೀಕ್ಷಿತ್, ರಾಯ್ ಮಾದಪ್ಪ, ಚೋನಿರ ಸೋಮಣ್ಣ, ತೀತಿಮಾಡ ದೀಕ್ಷಿತ್, ಪೆಮ್ಮಂಡ ಸಿ. ಬೋಪಣ್ಣ, ಆಪಟ್ಟಿರ ಎಂ. ದೀಕ್ಷಿತ್, ಕಾಳಪಂಡ ಯು. ತಿಮ್ಮಯ್ಯ, ಸಣ್ಣುವಂಡ ಎಂ. ವಿಶ್ವನಾಥ್ ಮತ್ತಿತರರು ಹಾಜರಿದ್ದು ಸೂಕ್ತ ಸಲಹೆಗಳನ್ನು ನೀಡಿದರು.