ಮಡಿಕೇರಿ NEWS DESK ಅ.27 : ಭಾರತದ ಗಾಲ್ಫ್ ಕ್ಲಬ್ ಗಳಲ್ಲಿಯೇ ಪ್ರಥಮ ಎಂಬ ಹಿರಿಮೆಗೆ ಕಾರಣವಾಗಿರುವ ಮಡಿಕೇರಿ ಹೊರವಲಯದಲ್ಲಿರುವ ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್ ನಲ್ಲಿ ಅಂದಾಜು 7 ಕೋಟಿ ರೂ. ವೆಚ್ಚದಲ್ಲಿ ನಿಮಿ೯ಸಲಾಗಿರುವ ಸಭಾಭವನ, ಒಳಾಂಗಣ ಗಾಲ್ಫ್ ಕ್ರೀಡಾ ಸೌಲಭ್ಯ, ನೂತನ ಬಿಲಿಯಡ್ಸ್೯ ಕ್ರೀಡಾಂಗಣವನ್ನು ದಾನಿಗಳೂ ಆದ, ಎಕ್ಸೆಲ್ ಸಂಸ್ಥೆಯ ಪಾಲುದಾರ ಮಹೀಂದ್ರನ್ ಬಾಲಚಂದ್ರನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಿಸಗ೯ದ ಮಡಿಲಲ್ಲಿರುವ ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಒಳಾಂಗಣ ಗಾಲ್ಫ್ ಮೈದಾನ ನಿಮಾ೯ಣವಾಗಿರುವುದು ಕೊಡಗಿನಲ್ಲಿ ಗಾಲ್ಫ್ ಕ್ರೀಡಾ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ, ನನ್ನ ಸಂಸ್ಥೆ ಟುವಡ್ಸ್ ಈಕ್ವಲ್ ಫೌಂಡೇಷನ್ ಮೂಲಕ ಈಗಾಗಲೇ ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್ ನ ಸಿಬ್ಬಂದಿಗಳ ಮಕ್ಕಳಿಗೆ ಸೂಕ್ತ ಶಿಕ್ಷಣ ಸೌಲಭ್ಯ ಕಲ್ಪಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಅಗತ್ಯ ನೆರವು ನೀಡುವುದಾಗಿ ಘೋಷಿಸಿದರು. ಮರ್ಕರ ಡೌನ್ಸ್ ಗಾಲ್ಪ್ ಕ್ಲಬ್ ಅಧ್ಯಕ್ಷ ಐ.ಕೆ.ಅನಿಲ್ ಮಾತನಾಡಿ, 1914 ರಲ್ಲಿ ಸ್ಥಾಪನೆಯಾದ ಮರ್ಕರ ಡೌನ್ಸ್ ಗಾಲ್ಪ್ ಕ್ಲಬ್ ಪಾಲಿಗೆ ಸ್ಮರಣೀಯ ದಿನ ಇದಾಗಿದ್ದು 7 ಕೋಟಿ ರೂ. ವೆಚ್ಚದಲ್ಲಿ ಹಲವಷ್ಟು ವಿನೂತನ ಸೌಲಭ್ಯಗಳನ್ನು ಇದೀಗ ಹೊಂದುವಂತಾಗಿದೆ ಎಂದು ಹಷ೯ ವ್ಯಕ್ತಪಡಿಸಿದರು. ಇದೇ ಸಂದಭ೯ ನೂತನ ಬಿಲಿಯಡ್ಸ್೯ ಕ್ರೀಡಾಂಗಣಕ್ಕೆ ಚಾಲನೆ ನೀಡಿ ಮಾತನಾಡಿದ ಸಕಲೇಶಪುರ ಮೂಲದ ಅಂತರರಾಷ್ಟ್ರೀಯ ಸ್ನೂಕರ್ ಚಾಂಪಿಯನ್ ನಟಾಷ ಚೇತನ್, ಗಾಲ್ಫ್ ನಂತೆಯೇ ಸ್ನೂಕರ್ ಕೂಡ ಛಲ ಮತ್ತು ಗುರಿಯನ್ನು ಪ್ರಧಾನವಾಗಿ ಹೊಂದಿರುವ ಕ್ರೀಡೆಯಾಗಿದೆ ಎಂದರು. ಐ.ಕೆ.ರಾಹುಲ್ ನಿರೂಪಿಸಿದ ಕಾಯ೯ಕ್ರಮದಲ್ಲಿ ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್ ಆಯೋಜಿಸಿದ್ದ ಟಿ.ಆರ್ ಬಾಲಚಂದ್ರನ್ ಹೆಸರಿನ 6 ನೇ ಆವೃತ್ತಿಯ ಗಾಲ್ಪ್ ಪಂದ್ಯಾವಳಿ ಸಮಿತಿ ಅಧ್ಯಕ್ಷ ಕೆ.ಪಿ.ರಂಜಿತ್ ವಂದಿಸಿದರು. ಟಿ.ಆರ್.ಬಾಲಚಂದ್ರನ್ ಗಾಲ್ಪ್ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ಲಬ್ ನ ಪ್ರಧಾನ ಕಾಯ೯ದಶಿ೯ ಕೆ.ಹರೀಶ್ ಅಪ್ಪಣ್ಣ, ಸಂಗೀತಾ ಮಹೀಂದ್ರನ್, ಚಿಕ್ಕಮಗಳೂರು ಗಾಲ್ಪ್ ಕ್ಲಬ್ ಅಧ್ಯಕ್ಷ ಸುದಶ೯ನ್, ಉಪಾಸಿ ಕ್ರೀಡಾ ಸಮಿತಿ ಅಧ್ಯಕ್ಷ ಸಿ.ಎಂ.ಅಪ್ಪಣ್ಣ, ಕೊಡಗು ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ಕೆ.ಎ.ಚಂಗಪ್ಪ, ಕನಾ೯ಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ರಾಜೀವ್, ನಿವೖತ್ತ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ಉಪಸ್ಥಿತರಿದ್ದರು.
Breaking News
- *ರಾಜ್ಯ ಸರ್ಕಾರದ ವಿರುದ್ಧ ಜನ ಜಾಗೃತರಾಗಬೇಕು : ಕೊಡಗು ಬಿಜೆಪಿ ಎಸ್ಟಿ ಮೋರ್ಚಾ ಕರೆ*
- *ನ.22 ರಂದು ವಿಶೇಷ ಚೇತನರಿಗೆ ಆಟೋಟ ಸ್ಪರ್ಧೆ*
- *“ತೋಕ್ ನಮ್ಮೆ” ಪ್ರಯುಕ್ತ ರಾಜ್ಯ ಮಟ್ಟದ “ಕೋಕನಟ್ ಶೂಟಿಂಗ್”*
- *ತೋಳೂರು ಶೆಟ್ಟಳ್ಳಿಯಲ್ಲಿ “ಶರಣ ಸಂಸ್ಕೃತಿ” ವಿಚಾರಗೋಷ್ಠಿ : ವಚನಗಳು ಸುಂದರ ಜೀವನದ ದೀವಿಗೆಗಳು : ಮೆ.ನಾ.ವೆಂಕಟನಾಯಕ್ ಅಭಿಮತ*
- *ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ : ವಿರಾಜಪೇಟೆ ರೋಟರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾವಳಿ : ಮೂರ್ನಾಡು ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಚಾಂಪಿಯನ್*
- *ಪ್ರಬಂಧ ಸ್ಪರ್ಧೆ : ಬಿಳುಗುಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ರಹಿಯಾನ ದ್ವಿತೀಯ*
- *ನಾಪೋಕ್ಲು : ಕೆನರಾ ಬ್ಯಾಂಕ್ ನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಜನ್ಮ ದಿನಾಚರಣೆ*
- *ನ.22 ರಂದು ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ*
- *ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ*