
ಮಡಿಕೇರಿ NEWS DESK ನ.1 : ನಗರದ ಕೊಡಗು ವಿದ್ಯಾಲಯದಲ್ಲಿ ದೀಪಾವಳಿ ಸಂಭ್ರಮವನ್ನು ಚಿಣ್ಣರು ನೃತ್ಯ ರೂಪಕದ ಮೂಲಕ ಪ್ರಸ್ತುತಪಡಿಸಿದರು. ಕೊಡಗು ವಿದ್ಯಾಲಯದ ಚಿಗುರು ಸಭಾಂಗಣದಲ್ಲಿ ದೀಪಾವಳಿ ಅಂಗವಾಗಿ ನಡೆದ ಸಾಂಸ್ಕೃತಿಕ ಕಾಯ೯ಕ್ರಮದಲ್ಲಿ ದೀಪಾವಳಿಯ ಮಹತ್ವ ಸಾರುವ ನೃತ್ಯ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ನೂರಾರು ಚಿಣ್ಣರು ಇತಿಹಾಸ, ಧಾಮಿ೯ಕ ಪರಂಪರೆ ಸಾರುವ ಉಡುಗೆ ಧರಿಸಿ ನೃತ್ಯದಲ್ಲಿ ಸಂಭ್ರಮಿಸಿದರು. ಸೀತಾ ಅಪಹರಣದ ಪ್ರಸಂಗ, ರಾವಣ ಸಂಹಾರ ಸೇರಿದಂತೆ ದೀಪಗಳ ಮಹತ್ವ ಸಾರುವ ನೃತ್ಯ ಗಮನ ಸೆಳೆಯಿತು. ಕಾಯ೯ಕ್ರಮದಲ್ಲಿ ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ, ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿದೇ೯ಶಕ ಸಿ.ಎಸ್ ಗುರುದತ್, ಸಲಹೆಗಾರ ಕೊಕ್ಕಲೇರ ಕುಮಾರ್ ಸುಬ್ಬಯ್ಯ, ಪ್ರಾಂಶುಪಾಲರಾದ ಕೆ.ಎಸ್ .ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ ಮತ್ತಿತರರು ಉಪಸ್ಥಿತರಿದ್ದರು.












