ವಿರಾಜಪೇಟೆ ನ.7 NEWS DESK : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಈ ಸಾಲಿನಲ್ಲಿ ನೀಡಲಾದ ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಒಟ್ಟು 29 ವಿದ್ಯಾರ್ಥಿಗಳು ಪಡೆದುಕೊಂಡರು. ವಿರಾಜಪೇಟೆಯ ಸೇಂಟ್ ಆನ್ಸ್ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2024 ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಸಂಶನಾ ಪತ್ರವನ್ನು ನೀಡಿ ಗೌರವಿಸಲಾಯಿತು. ಕೆ.ಎಂ.ಎ. ಪ್ರತಿಭಾ ಪುರಸ್ಕಾರ- 2024ರ ಮದರಸ 5ನೇ ತರಗತಿ ವಿಭಾಗದಲ್ಲಿ ಪುದಿಯಾಣೆರ ಎನ್. ತಮ್ಮನ್ನ, ಪ್ರಥಮ (ತಂಝಿದುಲ್ ಇಸ್ಲಾಂ ಮದರಸ, ಚಾಮಿಯಾಲ), 7ನೇ ತರಗತಿ ವಿಭಾಗದಲ್ಲಿ ದುದ್ದಿಯಂಡ ಎಂ. ಹರ್ಷಾನ (ಬುಸ್ತಾನುಲ್ ಉಲೂಮ್ ಮದರಸ, ನಲ್ವತ್ತೋಕ್ಲು) ಪ್ರಥಮ, ಕುಪ್ಪೋಡಂಡ ಎ.ಶಾಕಿರಲಿ (ನಜ್ಮುಲ್ ಹುದ ಮದರಸ, ಎಡಪಾಲ) ದ್ವಿತೀಯ, ಕೋಳುಮಂಡ ಎ. ಮೊಹಮ್ಮದ್ ಸಿನಾನ್ (ನುಶ್ರತುಲ್ ಇಸ್ಲಾಂ ಮದರಸ, ಕೊಮ್ಮತೋಡು) ತೃತೀಯ ಸ್ಥಾನ ಪಡೆದರೆ, 10ನೇ ತರಗತಿ ವಿಭಾಗದಲ್ಲಿ ಕಿಕ್ಕರೆ ಯು. ಮೊಹಮ್ಮದ್ ಇಲ್ಯಾಸ್ (ಇರ್ಷಾದುಲ್ ಇಸ್ಲಾಂ ಮದರಸ, ಕಿಕ್ಕರೆ) ಪ್ರಥಮ, ಚೆರುಮಾನಿಕಾರಂಡ ಎ. ರಿಫಾನ ಫಾತಿಮಾ (ಮರ್ಕಝುಲ್ ಹಿದಾಯ ಎಜುಕೇಷನಲ್ ಸೆಂಟರ್, ಕೊಟ್ಟಮುಡಿ) ದ್ವಿತೀಯ ಮತ್ತು ಕುಪ್ಪೋಡಂಡ ಎ. ರಮೀಜ್ (ನಜ್ಮುಲ್ ಹುದ ಮದರಸ, ಎಡಪಾಲ) ತೃತೀಯ ಸ್ಥಾನ ಗಳಿಸಿದರು. ಎಸ್.ಎಸ್. ಎಲ್. ಸಿ. ವಿಭಾಗದಲ್ಲಿ ಆಲೀರ ಎಸ್. ಮೊಹಮ್ಮದ್ ಆದಿಲ್ (ಅಪ್ಪಚ್ಚ ಕವಿ ವಿದ್ಯಾಲಯ, ಪೊನ್ನಂಪೇಟೆ) ಪ್ರಥಮ, ಆಲೀರ ಎ. ಮೊಹಮ್ಮದ್ ನಹೀಮ್ (ಸಂತ ಅಂತೋಣಿ ಪ್ರೌಢ ಶಾಲೆ, ಪೊನ್ನಂಪೇಟೆ) ದ್ವಿತೀಯ, ಹರಿಶ್ಚಂದ್ರ ಎ. ಮೊಹಮ್ಮದ್ ಫೌಜಾನ್ (ಬಿಲ್ವಾ ಇಂಡಿಯನ್ ಸ್ಕೂಲ್, ದುಬೈ) ತೃತೀಯ ಸ್ಥಾನದ ಪುರಸ್ಕಾರ ಪಡೆದರೆ, ಕುಪ್ಪೋಡಂಡ ಯು. ಸುಹೈರ (ಪಾರಣೆ ಪ್ರೌಢಶಾಲೆ, ಪಾರಾಣೆ), ಆಲೀರ ಆರ್. ಫಾತಿಮಾತ್ ತಸ್ಫಿಯಾ (ನಿನಾದ ಪ್ರೌಢ ಶಾಲೆ, ಹಳ್ಳಿಗಟ್ಟು), ಕುರಿಕಡೆ ಐ. ಸುಹಾನ (ಪಾರಣೆ ಪ್ರೌಢಶಾಲೆ, ಪಾರಾಣೆ), ಚೆರುಮಾನಿಕಾರಂಡ ಎ. ರಿಫಾನ ಫಾತಿಮಾ (ಮರ್ಕಜ್ ಪಬ್ಲಿಕ್ ಸ್ಕೂಲ್, ಕೊಟ್ಟಮಡಿ) ಮತ್ತು ಮೀತಲತಂಡ ಐ. ಸಮ್ನತ್ (ಸ.ಪ. ಪೂ. ಕಾಲೇಜು, ವಿರಾಜಪೇಟೆ) ಅವರು ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಕ್ರಮವಾಗಿ ಪಡೆದುಕೊಂಡರು. ದ್ವಿತೀಯ ಪಿ.ಯು.ಸಿ. ವಿಭಾಗದಲ್ಲಿ ಆಲೀರ ಎ. ಗೌಸಿಯ ಐನ್ (ಹಿಲ್ಸಿನಯಿ ಫಿನಿಶಿಂಗ್ ಸ್ಕೂಲ್, ನಾಲೆಡ್ಜ್ ಸಿಟಿ, ಕಲ್ಲಿಕೋಟೆ) ಪ್ರಥಮ, ಪೆನತಂಡ ಐ. ಝರೀನ (ಮರ್ಕಝುಲ್ ಹಿದಾಯ, ಕೊಟ್ಟಮುಡಿ) ದ್ವಿತೀಯ, ಕುಪ್ಪೋಡಂಡ ಯು. ಸಾನಿಯಾ (ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕೊಡುವಲ್ಲಿ) ತೃತೀಯ ಸ್ಥಾನ ಪಡೆದರೆ, ಕೂವಲೆರ ಹೆಚ್. ಝುಲ್ಫಾ ತಸ್ನೀಮ್ (ವಿವೇಕಾನಂದ ಪ. ಪೂ. ಕಾಲೇಜು, ಕುಶಾಲನಗರ), ಆಲೀರ ಎಸ್. ಮೊಹಮ್ಮದ್ ಶಾಯಿಲ್ (ಸಂತ ಅಂತೋನಿ ಸಂಯುಕ್ತ ಪ. ಪೂ. ಕಾಲೇಜು, ಪೊನ್ನಂಪೇಟೆ), ಕೆಂಗೋಟಂಡ ಹೆಚ್. ರಾಹೀನ (ಎಸ್.ಇ. ಎ. ಮಹಿಳೆಯರ ಪ. ಪೂ. ಕಾಲೇಜು ಪೆರುಮಾಡಿ) ಆಯಿರಂಬೀಡ್ ಯು. ನಾಫಿಲಾ (ರೆಫಲ್ಸ್ ಪ. ಪೂ.ಕಾಲೇಜು, ಹೊದವಾಡ) ಮತ್ತು ಮುಟ್ಟಲ್ ಎನ್. ಶೆಹನಾ (ಮರ್ಕಝುಲ್ ಹುದಾ ಮಹಿಳಾ ಪ. ಪೂ. ಕಾಲೇಜು, ಕುಂಬ್ರ, ಪುತ್ತೂರು) ಅವರಿಗೆ ಕ್ರಮವಾಗಿ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಈ ಸಾಲಿನ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರವನ್ನು ಕೊಡಗಿನ 6 ಸಾಧಕ ವಿದ್ಯಾರ್ಥಿಗಳು ಪಡೆದುಕೊಂಡರು. ಮುಂಬೈನ ಎನ್.ಸಿ.ಟಿ. ಗ್ರೂಪ್ ಮಾಲೀಕರಾದ ಅಕ್ಕಳತಂಡ ಎಸ್. ಮೊಯ್ದು ಅವರು ದಿ.ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದ ರೂ. ಹತ್ತು ಸಾವಿರ ಮೊತ್ತದ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಸಂಶನಾ ಪತ್ರವನ್ನು ಒಳಗೊಂಡ ಈ ‘ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ-2024’ ಅನ್ನು 2023-24ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್. ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಗೋಣಿಕೊಪ್ಪಲು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ. ಡಿ. ಭಾಷಿತಾ (ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ ಪಡೆದ ವಿದ್ಯಾರ್ಥಿನಿ) ಮತ್ತು ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಡಿಯಾನ ನವೀನ್ ಅವರಿಗೆ ಕ್ರಮವಾಗಿ ವಿತರಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಎಂ.ಎ. ಮಹಮ್ಮದ್ (ಶಶಿಪ್ರಿಯ) ಅವರು ಪ್ರಾಯೋಜಿಸಿದ್ದ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ-2024 ಕ್ಕೆ ಎಸ್. ಎಸ್. ಎಲ್. ಸಿ. ವಿಭಾಗದಲ್ಲಿ ಆಯ್ಕೆಗೊಂಡ ಪೊನ್ನಂಪೇಟೆಯ ಎ.ಎಸ್. ಮೊಹಮ್ಮದ್ ಆದಿಲ್ (598 ಅಂಕ), ಮೂರ್ನಾಡು ಸಮೀಪದ ಹೊದ್ದೂರಿನ ಎಂ. ಎ. ಅಫ್ಸ (579 ಅಂಕ), ದ್ವಿತೀಯ ಪಿಯುಸಿ ವಿಭಾಗದಲ್ಲಿ ಆಯ್ಕೆಗೊಂಡ ಮೂರ್ನಾಡು ಸಮೀಪದ ಐಕೊಳದ ಜುವೈರಿಯಾ (588 ಅಂಕ ) ಹಾಗೂ ಪೊನ್ನಂಪೇಟೆಯ ಎ.ಎಸ್. ಮೊಹಮ್ಮದ್ ಶಾಹಿಲ್ (547 ಅಂಕ ) ಅವರಿಗೆ ತಲಾ ರೂ 5,000 ನಗದು ಬಹುಮಾನ ಸೇರಿದಂತೆ ಪಾರಿತೋಷಕ ಹಾಗೂ ಪ್ರಶಂಸನಾ ಪತ್ರವನ್ನು ಸಮಾರಂಭದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕೃತರ ಪರವಾಗಿ ಆಲೀರ ಗೌಸಿಯ ಐನ್ ಮತ್ತು ಕೂವಲೆರ ಹೆಚ್. ಝುಲ್ಫಾ ತಸ್ನೀಮ್ ಮಾತನಾಡಿ ತಮ್ಮ ಶೈಕ್ಷಣಿಕ ಸಾಧನೆಯ ಅನುಭವ ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ, ಈ ಸಾಲಿನಲ್ಲಿ ಕೆ.ಎಂ.ಎ. ಪ್ರತಿಭಾ ಪುರಸ್ಕಾರಕ್ಕಾಗಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿತ್ತು. ಇದನ್ನು ಪರಿಶೀಲಿಸಿದ ಕೆ.ಎಂ.ಎ. ಕಾರ್ಯಕಾರಿ ಸಮಿತಿಯು ಮೆರಿಟ್ ಆಧಾರದಲ್ಲಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿದೆ ಎಂದು ತಿಳಿಸಿದರಲ್ಲದೆ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸಲು ಕೆ. ಎಂ. ಎ. ವತಿಯಿಂದ ಪ್ರತಿ ವರ್ಷ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆ.ಎಂ.ಎ. ಮಾಜಿ ಅಧ್ಯಕ್ಷರಾದ ದುದ್ದಿಯಂಡ ಎಸ್. ಆಲಿ, ಬೆಂಗಳೂರು ಕೆ.ಎಂ.ಎ. ಘಟಕದ ಅಧ್ಯಕ್ಷರಾದ ಕೂವಲೆರ ಬಿ. ಆಲಿ, ಹಿರಿಯ ಧಾರ್ಮಿಕ ವಿದ್ವಾಂಸರಾದ ಪಾಯಡತಂಡ ಹುಸೈನ್ ಮುಸ್ಲಿಯಾರ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಕಿಕ್ಕರೆ ಉಮ್ಮರ್ ಮಾಸ್ಟರ್, ಪ್ರಮುಖರಾದ ಮುಲ್ಲೆಂಗಡ ಶಂಕರಿ ಪೊನ್ನಪ್ಪ, ಸಾಮಾಜಿಕ ಕಾರ್ಯಕರ್ತ ನೆರಪಂಡ ಪ್ರತೀಕ್ ಪೊನ್ನಣ್ಣ ಸೇರಿದಂತೆ ವಿವಿಧ ಜಮಾಅತ್ ಗಳ ಅಧ್ಯಕ್ಷರು, ವಿವಿಧ ರಾಜಕೀಯ ಪಕ್ಷದ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಕೆ.ಎಂ.ಎ. ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.