ವಿರಾಜಪೇಟೆ ನ.9 NEWS DESK : ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ 50 ವರ್ಷಗಳು ಸಂದಿರುವ ಹಿನ್ನಲೆಯಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಪತ್ನಿ ಕಾಂಚನ್ ಪೊನ್ನಣ್ಣ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು. ಸುವರ್ಣ ಕರ್ನಾಟಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಒಂದು ವರ್ಷಗಳ ಕಾಲ ಆಚರಣೆ ಮಾಡುವಂತೆ ರಾಜ್ಯ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರ ಅನುಪಸ್ಥಿತಿಯಲ್ಲಿ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ ನಗರದ ಚಿಕ್ಕಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು. ನಂತರ ಮಾತನಾಡಿ ಅವರು, ಕನ್ನಡ ನಾಡು, ನುಡಿ, ಜಲ ಸಂರಕ್ಷರಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ರಾಜರ ಆಳ್ವಿಕೆಯಿಂದ ಕೊನೆಯಾಗಿ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಸಂದಿವೆ. ಕರ್ನಾಟಕ ರಾಜ್ಯವು ಮೆನೆಯಂತಾದರೆ ಕನ್ನಡ ಭಾಷೆ ಮನಸ್ಸಿನಂತಾಗಬೇಕು. ಮಾತೃ ಭಾಷೆಗೆ ಮಹತ್ವ ನೀಡಿ ಪರಭಾಷೆಯನ್ನು ಗೌರವಿಸುವಂತಹ ಗುಣ ನಮ್ಮದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಕ್ಷದ ಪ್ರಮುಖರಾದ ಜೋಕಿಂ ರೋಡ್ರಿಗಸ್, ಅಯ್ಯಮಂಡ ಪ್ರವೀಣ್, ಕುಂಡಚ್ಚರ ಮಂಜು ದೇವಯ್ಯ, ಸಯೈದ್ ಶಭೀರ್, ಶಭರೀಶ್ ಮತು ರಕ್ಷೀತ್ ಚಂಗಪ್ಪ, ಶಾಲೆಯ ಮುಖ್ಯ ಶೀಕ್ಷಕಿ ಪಿ.ಡಿ.ಅನ್ನಮ್ಮ, ಸಹಶಿಕ್ಷಕರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ