ಮಡಿಕೇರಿ ನ.11 NEWS DESK : ಮಡಿಕೇರಿ ಗ್ರಾಮಾಂತರ ಪ್ರಖಂಡದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಮಾತೃಶಕ್ತಿ ದುರ್ಗಾವಾಹಿನಿ ವತಿಯಿಂದ ಹೊದ್ದೂರಿನ ಕಬ್ಬಡಕೇರಿಯ ಶ್ರೀಮುತ್ತಪ್ಪ ದೇವಾಲಯದಲ್ಲಿ ಗೋಪೂಜೆ ಹಾಗೂ ಶ್ರೀಲಕ್ಷ್ಮೀ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಗೋವುಗಳಿಗೆ ಫಲಹಾರ ನೀಡಿ, ವಿಶೇಷ ಪೂಜೆ ಸಲ್ಲಿಸಿ ಗೋಸಂತತಿಯ ಉದ್ಧಾರಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು. ಜಿಲ್ಲಾ ಮಠಮಂದಿರ ಅರ್ಚಕರ ಪ್ರಮುಖ್ ಡಾ.ಮಹಾಬಲೇಶ್ವರ ಭಟ್ ಗೋವಿನ ಮಹತ್ವದ ಕುರಿತು ತಿಳಿಸಿದರು. ದೇವಾಲಯದ ಅಧ್ಯಕ್ಷ ಬಾಲಕೃಷ್ಣ, ಪೂಜಾರಿ ಮಣಿ ಅವರ ಸಹಕಾರದಲ್ಲಿ ನಡೆದ ಪೂಜೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ರಮೇಶ್ ಪುದಿಯೊಕ್ಕಡ, ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಪೂರ್ಣಿಮಾ ಸುರೇಶ್, ಮಡಿಕೇರಿ ತಾಲ್ಲೂಕು ಸಂಯೋಜಕಿ ಮಮತ, ಭಜರಂಗದಳ ಪ್ರಮುಖರಾದ ಪ್ರವೀಣ್, ಸಜೀನ ಸೂರಜ್, ಪುರುಷೋತ್ತಮ, ಮಾತೃಶಕ್ತಿಯ ರುಕ್ಮಿಣಿ, ಜಾನಕಿ ಚಂಗಪ್ಪ, ಹೊದ್ದೂರು ಘಟಕದ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು.