ಮಡಿಕೇರಿ ನ.23 NEWS DESK : ಹೊಸ್ಕೇರಿಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ ಪಿಡಿಒ ಎ.ಎ.ಅಬ್ದುಲ, ಜವಾಹರ್ ಲಾಲ್ ನೆಹರು ಅವರ ಜೀವನ ಚರಿತ್ರೆ, ಮಕ್ಕಳ ಮೇಲೆ ಇಟ್ಟ ಪ್ರೀತಿ ಹೇಗೆ ಎಂಬುದನ್ನು ವಿವರಿಸಿದರು. ಗ್ರಾ.ಪಂ ಅಧ್ಯಕ್ಷೆ ಬಡುವಂಡ್ರ ಕವಿತಾ, ಆರೋಗ್ಯ ಕಾರ್ಯಕರ್ತೆಯರಾದ ಬಿ.ಎಂ.ಕುಸುಮ ಮಾತನಾಡಿ ಮಕ್ಕಳ ಚಟುವಟಿಕೆ ಬಗ್ಗೆ ನೆಹರು ಬಗ್ಗೆ ಸ್ವಚ್ಛತೆ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಗ್ರಾ. ಪಂ ಉಪಾಧ್ಯಕ್ಷರಾದ ಎಂ.ಬಿ.ಚಿದಂಭರ, ಸದಸ್ಯರಾದ ಬಿ.ವೈ.ಪ್ರಭುಶೇಖರ್, ಉಷಾ ತಂಗಮ್ಮ, ಜೆ.ಪಾರ್ವತಿ, ಆರೋಗ್ಯ ಕಾರ್ಯಕರ್ತೆಯರಾದ ಬಿ.ಎಂ.ಕುಸುಮ, ಸಮುದಾಯ ಆರೋಗ್ಯ ಕೇಂದ್ರದ ಶ್ರೀಜ, ಆಶಾ ಕಾರ್ಯಕರ್ತೆ ಜಯ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಯತಿಕುಮಾರಿ, ಸದಸ್ಯರು ಪೊನ್ನಮ್ಮ,ವನಿತ, ಮಮತ ಬೋಜಿ, ರಮೇಶ, ನೇತ್ರ, ಮಕ್ಕಳ ಪೋಷಕರು ಹಾಜರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗೆ ಕಪ್ಪೆ ಹಾರುವುದು, ಕಾಳು ಹೆಕ್ಕುವುದು ಮತ್ತು ಓಟದ ಸ್ಪರ್ಧೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ನಂತರ ಪುಟಾಣಿಗಳಿಂದ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮ ಗಮನ ಸೆಳೆಯಿತು. ಮೇಲ್ವಿಚಾರಕಿ ಪ್ರಭಾರ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾರ್ಗದರ್ಶನದಂತೆ ಅಂಗನವಾಡಿ ಕಾರ್ಯಕರ್ತೆಯಾದ ಲತಾ, ಸಹಾಯಕಿ ಸುಮಿತ್ರ ಪೋಷಕರಲ್ಲಿ ತರಕಾರಿ ಪಾಟ್ ನೀಡಿ ಸಹಕರಿಸಲು ಕೋರಿಕೊಂಡಿದ್ದರ ಫಲವಾಗಿ ಕೇಂದ್ರದ 15 ಮಕ್ಕಳ ಹೆಸರಿನಲ್ಲಿ ತರಕಾರಿ ಕುಂಡವನ್ನು ಪೋಷಕರು ನೀಡಿದರು.