ಮಡಿಕೇರಿ NEWS DESK ಡಿ.1 : ಪರಿಶುದ್ಧ ಗಾಳಿ, ಉತ್ತಮ ವಾತಾವರಣ ಸೂಚ್ಯಂಕದಲ್ಲಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನದಲ್ಲಿದೆ. ಈ ಹೆಗ್ಗಳಿಕೆಯ ಹಿಂದಿರುವ ಪೌರ ಕಾರ್ಮಿಕರ ಪರಿಶ್ರಮವನ್ನು ಹ್ಯುಮಾನಿಟಿ ಫಸ್ಟ್ ಇಂಡಿಯಾ ಮಡಿಕೇರಿ ಅಹಮದಿಯ ಮುಸ್ಲಿಂ ಜಮಾತಿನ (ಲಜ್ನಾಯಿಮಾ ಇಲ್ಲಹ್) ಮಹಿಳಾ ವಿಭಾಗ ಗುರುತಿಸಿ, ಅವರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಿ ತನ್ನ ಗೌರವವನ್ನು ಸೂಚಿಸಿತು. ಈ ಸಂದರ್ಭ ಹ್ಯುಮಾನಿಟಿ ಫಸ್ಟ್ ಇಂಡಿಯಾದ ಸೌತ್ ಕರ್ನಾಟಕದ ಮುಖ್ಯಸ್ಥರಾದ ಮೊಹಮ್ಮದ್ ಶರೀಫ್ ಮಾತನಾಡಿ, ಪೌರಕಾರ್ಮಿಕರು ಮಡಿಕೇರಿಯ ಸ್ವಚ್ಛತೆಗಾಗಿ ಮಾಡುತ್ತಿರುವ ಕೆಲಸ ಶಾಘನೀಯ. ಪೌರಕಾರ್ಮಿಕರ ಅಹರ್ನಿಶಿ ದುಡಿಮೆ, ಪರಿಶ್ರಮದಿಂದ ಮಡಿಕೇರಿ ನಗರ ಸ್ವಚ್ಛವಾಗಿದೆ ಎಂದು ಮನದುಂಬಿ ನುಡಿದರು. ಮಡಿಕೇರಿ ನಗರ ಶುದ್ಧ ಗಾಳಿ, ಪರಿಸರವನ್ನು ಹೊಂದಲು ಪೌರಕಾರ್ಮಿಕರ ಪರಿಶ್ರಮ ಕಾರಣ.ಅದಕ್ಕಾಗಿ ಅವರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭ ಪೌರಾಯುಕ್ತರಾದ ರಮೇಶ್ ಮಾತನಾಡಿ, ಹ್ಯುಮಾನಿಟಿ ಫಸ್ಟ್ ಇಂಡಿಯಾದ ಕಾರ್ಯ ಮೆಚ್ಚತಕ್ಕಂತದ್ದು. ಪೌರಕಾರ್ಮಿಕರನ್ನು ಈ ರೀತಿ ನೆನೆಸಿಕೊಂಡಿರುವುದು ಅಪರೂಪದ್ದೆಂದು ನುಡಿದರು.ಈ ಸಂದರ್ಭ ಅಹಮದಿಯ ಮುಸ್ಲಿಂ ಜಮಾತಿನ ಉಪಾಧ್ಯಕ್ಷರಾದ ಎಂ.ಬಿ. ಜಹೀರ್ ಅಹ್ಮದ್, ಹೆಲ್ತ್ ಇನ್ಸ್ಪೆಕ್ಟರ್ ರಂಗಪ್ಪ, ಹ್ಯುಮಾನಿಟಿ ಫಸ್ಟ್ನ ಬಶೀರ್ ಅಹಮದ್, ಎಂ.ಯು.ಉಸ್ಮಾನ್, ಅಬ್ದುಲ್ ಸಾಜಿದ್, ನಾಸಿರ್ ಜೆ.ಎಂ., ತಾಹಿರ್ ಎಂ.ಎಂ, ಗೌತಮ್, ಖದೀರ್, ಸಫಲ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.











