ಮಡಿಕೇರಿ NEWS DESK ಡಿ.1 : ಶ್ರೀರಾಮಾಂಜನೇಯ ಭಜನಾ ಮಂಡಳಿಯ 34ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ‘ಅಖಂಡ ಏಕಾಹ ಭಜನಾ’ ಕಾರ್ಯಕ್ರಮ ವಿಶೇಷವಾಗಿ ನಡೆಯಿತು. ಅಖಂಡ ಏಕಾಹ ಭಜನಾ ಕಾರ್ಯಕ್ರಮ ಇಂದು ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರವಾಗಿ ನಡೆದು, ಸಂಜೆ 7.30ಕ್ಕೆ ಹನಮಾನ್ ಚಾಲೀಸ್, ಮಂಗಳಾಚರಣೆ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ಸಮಾಪನಗೊಂಡಿತು. ಅಖಂಡ ಏಕಾಹ ಭಜನಾ ಕಾರ್ಯಕ್ರಮದಲ್ಲಿ ಶ್ರೀ ರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಮಂಡಳಿ, ಮೋದೂರಿನ ಶ್ರೀಮತಿ ಮೇಘಾ ಭಟ್ ಮತ್ತು ತಂಡ, ಶ್ರೀ ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿ, ಶ್ರೀ ವಿಜಯ ವಿನಾಯಕ ಭಜನಾ ಮಂಡಳಿ, ಕಗ್ಗೋಡ್ಲುವಿನ ಶ್ರೀ ಸನಾತನ ಭಜನಾ ಮಂಡಳಿ, ಜೋಡುಪಾಲದ ಶ್ರೀ ದೇವಿ ಭಜನಾ ಮಂಡಳಿ, 2ನೇ ಮೊಣ್ಣಂಗೇರಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್, ಭೂತನಕಾಡುವಿನ ಶ್ರೀ ಓಂಶಕ್ತಿ ಭಜನಾ ಮಂಡಳಿ, ತೊಂಬತ್ತುಮನೆಯ ಶ್ರೀ ವಿನಾಯಕ ಸೇವಾ ಸಮಿತಿ, ಶ್ರೀ ಕೋದಂಡರಾಮ ಭಜನಾ ಮಂಡಳಿ, ಇಸ್ಕಾನ್ ತಂಡ, ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಶ್ರೀ ಶೃತಿಲಯ ಭಜನಾ ಮಂಡಳಿ ಮತ್ತು ಶ್ರೀ ರಾಮಾಂಜನೇಯ ಭಜನಾ ಮಂಡಳಿ ತಂಡಗಳು ಪಾಲ್ಗೊಂಡು ಭಜನೆಗಳನ್ನು ಹಾಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದವು.









