ಮಡಿಕೇರಿ NEWS DESK ಡಿ.2 : ಕುಶಾಲನಗರದಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಎಸ್‌ಎಂ ಫಿಟ್‌ನೆಸ್ ಜಿಮ್ ತರಗತಿಯ ಐವರು ಪಾಲ್ಗೊಂಡು ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರಲ್ಲಿ 14ವರ್ಷದ ವಿದ್ಯಾರ್ಥಿ ಕೂಡ ಪಾಲ್ಗೊಂಡಿರುವುದು ವಿಶೇಷ. ವಿಜೇತರಾದ ಸುರೇಶ್ ಎಂ.ಡಿ, ಹರ್ಷಿತ್ ಬಿ.ಡಿ, ಅಪ್ಪುಂಗ್, ವಿಘ್ನೇಶ್ ಎಂ. ಹಾಗೂ ಜನಾರ್ಧನ್ ಹೆಚ್.ಟಿ ಅವರುಗಳಿಗೆ ಎಸ್‌ಎಂ ಫಿಟ್‌ನೆಸ್ ಜಿಮ್ ನ ತರಬೇತುದಾರರಾದ ಶೇಖರ್ ಆರ್. ಹಾಗೂ ಅರುಣ್ ಆರ್. ತರಬೇತಿ ನೀಡಿದ್ದಾರೆ. ಕರ್ನಾಟಕ ಅಮೆಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ನ್ಯೂಜೆನ್ ಫಿಟ್ರಿಸ್ ಕುಶಾಲನಗರ ಮತ್ತು ಟೀಮ್ ಕಾವೇರಿ ಕ್ಲಾಸಿಕ್ ಸಹಯೋಗದೊಂದಿಗೆ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಸ್ಪರ್ಧೆ ನಡೆಯಿತು.
(SM FITNESS, TOLLGATE, MADIKERI. 8217872661, 9845206770)