ಮಡಿಕೇರಿ ಡಿ.2 NEWS DESK : ದೇವರ ಆರಾಧನೆಯ ಪ್ರಮುಖ ಅಂಗವಾಗಿ ಕಂಗೊಳಿಸಿರುವ ಭಜನಾ ಪದ್ಧತಿಯು ಸಮುದಾಯದ ಒಗ್ಗಟ್ಟಿಗೆ ಸಹಕಾರಿ ಎಂದು ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಹೆಚ್.ಟಿ.ಅನಿಲ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 34ನೇ ವಾಷಿ೯ಕೋತ್ಸವ ಅಂಗವಾಗಿ ಆಯೋಜಿತ ಸೂಯೋ೯ದಯದಿಂದ ಸೂಯ೯ಸ್ತಮಾನದವರೆಗಿನ ಅಖಂಡ ಏಕಾಹ ಭಜನಾ ಕಾಯ೯ಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದೂ ಸಂಸ್ಕೖತಿಯ ಅತೀ ಮುಖ್ಯ ಪ್ರಾಥ೯ನಾ ವಿಧಾನವಾಗಿರುವ ಭಜನೆ, ದೇವರ ಮೇಲಿನ ಭಕ್ತಿ, ನಂಬಿಕೆಗಳ ಅಭಿವ್ಯಕ್ತಿಯ ಧ್ಯೋತಕವಾಗಿ ಪರಿಗಣಿಸಲ್ಪಟ್ಟಿದೆ, ಭಜನೆಯ ಮೂಲಕ ದೇವರಿಗೆ ನಮ್ಮ ಧಾಮಿ೯ಕ ಶೖದ್ದೆಯನ್ನು ಸಮಪಿ೯ಸಬಹುದಾಗಿದೆ ಎಂದೂ ಅನಿಲ್ ಹೇಳಿದರು. ಶ್ರೀ ರಾಮಾಂಜನೇಯ ಭಜನಾ ಮಂಡಳಿಯು 1990 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಂದಿರ ನಿಮಾ೯ಣದ ಸಂಕಲ್ಪ ಸಂದಭ೯ ಪ್ರಾರಂಭವಾಗಿ ಅಂದಿನಿಂದ 34 ವಷ೯ಗಳ ಕಾಲವೂ ಪ್ರತೀ ಸೋಮವಾರ ಶ್ರೀ ಆಂಜನೇಯ ದೇವಾಲಯದಲ್ಲಿ ಭಜನಾ ಕಾಯ೯ಕ್ರಮ ಆಯೋಜಿಸುತ್ತಾ ಬಂದಿದೆ, ಈ ಮೂಲಕ ಶ್ರೀರಾಮಾಂಜನೇಯ ಭಜನಾ ಮಂಡಳಿಯು ಕೊಡಗಿನ ಧಾಮಿ೯ಕ, ಸಾಂಸ್ಕೖತಿಕ ರಾಯಭಾರಿಯಾಗಿ ಕಂಗೊಳಿಸಿದೆ ಎಂದೂ ಅನಿಲ್ ಶ್ಲಾಘಿಸಿದರು, 2018 ರಲ್ಲಿ ಪ್ರಾಕೖತ್ತಿಕ ವಿಕೋಪ ಸಂಭವಿಸಿದ ಎರಡನೇ ಮೊಣ್ಣಂಗೇರಿಯಲ್ಲಿ ಕುಸಿದಿದ್ದ ಭಜನಾಮಂದಿರಕ್ಕೆ ಕಾಯಕಲ್ಪ ನೀಡುವ ಸಂದಭ೯ ಶ್ರೀರಾಮಾಂಜನೇಯ ಭಜನಾ ಮಂಡಳಿಯ ಸದಸ್ಯರೂ 2,25 ಲಕ್ಷ ರು, ಕೊಡುಗೆ ಮೂಲಕ ಧಾಮಿ೯ಕ ಬದ್ದತೆಯೊಂದಿಗೆ ತಮ್ಮ ಸಾಮಾಜಿಕ ಬದ್ದತೆಯನ್ನು ತೋರಿದ್ದಾರೆ ಎಂದೂ ಅನಿಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಪ್ರಮುಖ ಬೇಡಿಕೆಯಾಗಿರುವ ಶ್ರೀ ಆಂಜನೇಯ ದೇವಾಲಯದ ಆವರಣಧಲ್ಲಿಯೇ ಭಜನಾ ಮಂದಿರದ ಅಗತ್ಯತೆಯ ಬಗ್ಗೆ ಭಕ್ತ ಸಮುದಾಯ ಒಂದಾಗಿ ಸಕಾ೯ರದ ಮುಂದೆ ಬೇಡಿಕೆ ಸಲ್ಲಿಸಬೇಕಾದ ಅಗತ್ಯವಿದೆ ಎಂದೂ ಅನಿಲ್ ಹೆಚ್.ಟಿ.ಸಲಹೆ ನೀಡಿದರು. ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ಮತ್ತು ಇಸ್ಕಾನ್ ಧಾಮಿ೯ಕ ಮುಖಂಡರ ಮೇಲಿನ ಧಾಳಿಯನ್ನು ಜಗತ್ತಿನಾದ್ಯಂತಲಿನ ಹಿಂದೂ ಸಮುದಾಯದವರು ಪ್ರಬಲವಾಗಿ ಖಂಡಿಸಲೇಬೇಕಾಗಿದೆ ಎಂದೂ ಅನಿಲ್ ಈ ಸಂದಭ೯ ಹೇಳಿದರು. ಕಾಯ೯ಕ್ರಮದಲ್ಲಿ ಶ್ರೀರಾಮಾಂಜನೇಯ ಭಜನಾ ಮಂಡಳಿಯ ಸ್ಥಾಪಕರಲ್ಲೊಬ್ಬರಾದ ಡಾ.ಎಂ.ಜಿ.ಪಾಟ್ಕರ್, ಡಾ.ಜಯಲಕ್ಷ್ಮಿ ಪಾಟ್ಕರ್ ಅವರನ್ನು ಗೌರವಿಸಲಾಯಿತು. ಇದೇ ಸಂದಭ೯ ಭಜನಾಕಾರರಾದ ವಿಠಲ್ ಭಟ್, ಕುಮಾರಸುಬ್ರಹ್ಮಣ್ಯ, ರಂಜಿತ್ ಜಯರಾಮ್, ರವಿ ಭೂತನಕಾಡು, ಓಂಕಾರ ಯುವ ವೇದಿಕೆಯ ಹೇಮರಾಜ್ ಅವರನ್ನು ಗೌರವಿಸಲಾಯಿತು. 34ನೇ ವಾಷಿ೯ಕೋತ್ಸವ ಸಮಾರಭದಲ್ಲಿಅಮೖತ್ ರಾಜ್ ವಾಷಿ೯ಕ ವರದಿ, ವಾಚಿಸಿ, ಅನಿತಾ ಸುಧಾಕರ್ ನಿರೂಪಿಸಿ, ಚಂದ್ರಾವತಿ ವಂದಿಸಿದರು. ಕೆ.ಕೆ.ಮಹೇಶ್ ಕುಮಾರ್, ಪವನ್ ವಸಿಷ್ಯ, ಕೆ.ಕೆ.ದಾಮೋದರ್, ಸುನಿತಾ ಮಲ್ಲಿನಾಥ, ಸಂಧ್ಯಾ ನವೀನ್ , ಸುಧಾಕರ್, ಡಿ.ಕೆ.ಬಾಬೂಜಿ, ಗೌರಮ್ಮ ಮಾದಮ್ಮಯ್ಯ, ಕಾಯ೯ಕ್ರಮ ನಿವ೯ಹಿಸಿದರು. ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 34ನೇ ವಾಷಿ೯ಕೋತ್ಸವದ ಹಿನ್ನಲೆಯಲ್ಲಿ ಸೂಯೋ೯ದಯದಿಂದ ಸೂಯ೯ಸ್ತಮಾನದವರೆಗೆ 16 ತಂಡಗಳಿಂದ ಅಖಂಡ ಏಕಾಹ ಭಜನೆ ಆಯೋಜಿಸಲ್ಪಟ್ಟಿತ್ತು. ರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಸಮಿತಿ, ಮಡಿಕೇರಿ ಮೇಘಾ ಭಟ್ ಮತ್ತು ತಂಡ, ಮಡಿಕೇರಿ ಶ್ರೀ ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿ, ಮಡಿಕೇರಿ . ಶ್ರೀ ವಿಜಯ ವಿನಾಯಕ ಭಜನಾ ಮಂಡಳಿ, ಮಡಿಕೇರಿ ಶ್ರೀಸನಾತನ ಭಜನಾ ಮಂಡಳಿ ಕಗ್ಗೋಡ್ಲು, ಶ್ರೀದೇವಿ ಭಜನಾ ಮಂಡಳಿ ಜೋಡುಪಾಲ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, 2 ನೇ ಮೊಣ್ಣಂಗೇರಿ ಶ್ರೀ ವಿನಾಯಕ ಸೇವಾ ಸಮಿತಿ, ಟ್ರಸ್ಟ್, ಕತ್ತಲೆಕಾಡು, ಶ್ರೀಓಂಶಕ್ತಿ ಭಜನಾ ಮಂಡಳಿ, ಭೂತನಕಾಡು ಶ್ರೀ ವಿನಾಯಕ ಸೇವಾ ಸಮಿತಿ, ತೊಂಬತ್ತುಮನೆ . ಶ್ರೀಕೋದಂಡ ರಾಮ ಭಜನಾ ಮಂಡಳಿ, ಮಡಿಕೇರಿ . ಇಸ್ಕಾನ್ ತಂಡ ಮಡಿಕೇರಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ದೇವರಕೊಲ್ಲಿ . ಶ್ರೀ ಶೃತಿಲಯ ಭಜನಾ ಮಂಡಳಿ, ಮಡಿಕೇರಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಮಡಿಕೇರಿಯ ಭಜನಾ ತಂಡಗಳು ಪಾಲ್ಗೊಂಡಿದ್ದವು.