ಗೋಣಿಕೊಪ್ಪ ಡಿ.5 NEWS DESK : ಗೋಣಿಕೊಪ್ಪ ಕ್ರಿಕೆಟ್ ಪ್ರೀಮಿಯರ್ ಲೀಗ್ (ಜಿ.ಪಿ.ಎಲ್) ಎಂಟನೇ ಆವೃತ್ತಿಗೆ ಸಂಭ್ರಮದ ಚಾಲನೆ ದೊರೆಯಿತು. ಗೋಣಿಕೊಪ್ಪ ಪ್ರಾಥಮಿಕ ಶಾಲಾ ದಸರಾ ಮೈದಾನದಲ್ಲಿ ನಾಲ್ಕು ದಿನ ನಡೆಯುವ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಗೆ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ಉದ್ಯಮಿ ಮಾಚ್ಚಮಾಡ ಅನೀಶ್ ಮಾದಪ್ಪ, ಜಿಪಿಲ್ ಅಸೋಶಿಯೇಷನ್ ಅಧ್ಯಕ್ಷ ಸಿಂಗಿ ಸತೀಶ್ ಕ್ರಿಕೆಟ್ ಉತ್ಸವಕ್ಕೆ ಚಾಲನೆ ನೀಡಿದರು. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ “ಚೆನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವನ್ ಪಂಜಾಬ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವನ್ ಪಂಜಾಬ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್, ಲಕ್ನೋ ಹೆಸರಿನ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ. ತಂಡಗಳ ಹೆಸರನ್ನು ಜಿ.ಪಿ.ಎಲ್‍ನಲ್ಲಿ ಪಾಲ್ಗೊಳ್ಳುವ ತಂಡಗಳಿಗೂ ಇಡಲಾಗಿದೆ. ಪಂದ್ಯಾವಳಿಯಲ್ಲಿ ಪ್ರಥಮ ವಿಜೇತ ತಂಡಕ್ಕೆ ರೂ.1,1,111 ನಗದು, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 50,555 ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ತೃತೀಯ ಹಾಗೂ 4ನೇ ಸ್ಥಾನ ಪಡೆಯುವ ತಂಡಗಳಿಗೆ ಸಮಾಧಾನಕಾರ ಬಹುಮಾನವಾಗಿ ರೂ. 5 ಸಾವಿರ ನಗದು ನೀಡಲಾಗುತ್ತಿದೆ. ಪಂದ್ಯಾವಳಿಯಲ್ಲಿ ವೈಯಕ್ತಿಕವಾಗಿ ಅತ್ಯುತ್ತಮ ಆಟದ ಪ್ರದರ್ಶನ ನೀಡುವ ಆಟಗಾರರಿಗೂ ವೈಯಕ್ತಿಕ ಬಹುಮಾನ ನೀಡಲಾಗುತ್ತಿದೆ. ಪ್ರಿಮಿಯರ್ ಲೀಗ್ ಕ್ಲಬ್ ಆರೋಗ್ಯ ಸಲಹೆಗಾರ ಡಾ.ಅಮೃತ್ ನಾಣಯ್ಯ, ಕಾನೂನು ಸಲಹೆಗಾರ ಕಶ್ಯಪ್, ಮಾಧ್ಯಮ ಸಲಹೆಗಾರ ಜಗದೀಶ್ ಜೋಡುಬೀಟಿ, ಸ್ಥಾಪಕಾಧ್ಯಕ್ಷ ಸರ್ಫುದ್ದೀನ್, ಗೌರವ ಅಧ್ಯಕ್ಷ ಹಕೀಂ, ಕ್ರೀಡಾ ಸಂಚಾಲಕ ಶಾಜಿ, ಪ್ರಧಾನ ಕಾರ್ಯದರ್ಶಿ ಶಮ್ಮು, ನಿರ್ದೇಶಕರುಗಳಾದ ಅವಿನಾಶ್, ಮುನೀರ್, ರಂಶದ್, ಚಿದು, ಹಮೀದ್, ಅಫ್ಸಲ್, ಉಮೇಶ್, ಶಿಜು, ರಮೇಶ್, ಸಿರಾಜ್, ಲಾಲು ಸ್ಟ್ಯಾನ್ಲಿ, ಶ್ರೀಕುಮಾರ್ ಸರಿದಂತೆ ತಂಡದ ಮಾಲೀಕರು, ವ್ಯವಸ್ಥಾಪಕರು, ತರಬೇತುದಾರರು, ಕ್ರೀಡಾಪಟುಗಳು ಇದ್ದರು.