ಮಡಿಕೇರಿ ಡಿ.6 NEWS DESK : ನಗರದ ಕೋಟೆ ಮಾರಿಯಮ್ಮ ದೇವಾಲಯದ ನಾಗಬನದಲ್ಲಿ ಸುಬ್ರಹ್ಮಣ್ಯ ಷಷ್ಟಿ ಪ್ರಯುಕ್ತ ವಿಶೇಷ ಪೂಜೆ ಪೂಜೆ ನಡೆಯಿತು. ನಾಗದೇವರಿಗೆ ಎಳನೀರು ಅಭಿಷೇಕ, ಹಾಲಿನ ಅಭಿಷೇಕ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.











