ಕುಶಾಲನಗರ, ಡಿ.7 NEWS DESK : ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕೊಡಗು ಜಿಲ್ಲಾ ಘಟಕ ಹಾಗೂ ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್, ಕುಶಾಲನಗರ ಸಂಗಮ ಟಿ.ವಿ. ಹಾಗೂ ವಂಶಿ ನ್ಯೂಸ್ ಸಹಯೋಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕುಶಾಲನಗರ ತಾಲ್ಲೂಕು ತಾಹಶೀಲ್ದಾರ್ ಕಿರಣ್ ಜಿ ಗೌರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷರು ಸಂಗಮ ಟಿವಿ ಮತ್ತು ವಂಶಿನ್ಯೂಸ್ ಪ್ರಧಾನ ಸಂಪಾದಕ ಹೆಚ್.ಎಂ.ರಘುಕೋಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಸದಾಶೀವ ಪಲ್ಲೇದ್, ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರ ಬಾಬು, ಉದ್ಯಮಿ ಬಿ.ಎಸ್. ಸದಾಶಿವಶೆಟ್ಟಿ, ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಶ, ಜಿಲ್ಲಾ ಪದವಿಪೂರ್ವ ಉಪನ್ಯಸಂಘದ ಅಧ್ಯಕ್ಷ ಫಿಲಿಫ್ ವಾಸ್, ಜಾನಪದ ಕಲಾವಿದ ಭರಮಣ್ಣ ಟಿ.ಬೆಟಗೇರಿ ಇದ್ದರು.
ಪ್ರಶಸ್ತಿ ಪ್ರದಾನ :: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆದ ಇತಿಹಾಸ ಉಪನ್ಯಾಸಕಿ ಬಿ.ಜಿ.ಶಾಂತಿ, ಮುಂಬೈನ ಉದ್ಯಮಿ ಬಿ.ಎಸ್. ಸದಾಶಿವಶೆಟ್ಟಿ, ಕೊಡಗು ಜಿಲ್ಲಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ್, ಸಂಘದ ನಿರ್ದೇಶಕಿ ಶಾಂತ ಬಿ.ಬೆಟಗೇರಿ, ಕೊಡಗರಹಳ್ಳಿ ಗ್ರಾ.ಪಂ ಸದಸ್ಯೆ ಹಾಗೂ ಸಮಾಜ ಸೇವಕಿ ಆರ್.ಕಲಾಮಣಿ, ಹರದೂರು ಗ್ರಾ.ಪಂ ಸದಸ್ಯ ಸಮಾಜ ಸೇವಕ ಎಂ.ಎ.ಮುಸ್ತಫ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ, ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಎ.ಎಸ್. ತಮ್ಮಯ್ಯ, ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯ ಹಿರಿಯ ಶಿಕ್ಷಕಿ ಸಿ.ಎಸ್.ಜಾನಕಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಹೆಚ್. ಜೆ. ಮಧು, ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎ. ದಿನೇಶ್, ಹೋಟೆಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್. ನಾಗೇಂದ್ರ, ನೆಲ್ಯಹುದಿಕೇರಿಯ ಆಟೋರಿಕ್ಷಾ ಚಾಲಕಿ ಎಸ್. ಸುಜಾತ, ಅಂತಾರಾಷ್ಟ್ರೀಯ ಟೇಕ್ವಾಂಡೋ ಕ್ರೀಡಾಪಟು , ಚಿನ್ನ ಹಾಗೂ ಬೆಳ್ಳಿ ಪದಕ ಪುರಸ್ಕೃತರಾದ ಎ.ಪಿ. ರಿಮೋನ್ ಪೊನ್ನಣ್ಣ , ಕೊಡಗು ಜಿಲ್ಲಾ ಕೈಸ್ತರ ಸೇವಾ ಸಂಘದ ಅಧ್ಯಕ್ಷ ಎಸ್.ಟಿ. ಜೋಸೆಫ್ ಅವರನ್ನು ಕೊಡಗು ಜಿ.ಪಂ ಮಾಜಿ ಅಧ್ಯಕ್ಷ, ಕರ್ನಾಟಕ ರಾಜ್ಯ ಒಳಚರಂಡಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷರಾದ ಕೆ.ಪಿ. ಚಂದ್ರಕಲಾ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.











