ಸೋಮವಾರಪೇಟೆ ಡಿ.7 NEWS DESK : ಸೋಮವಾರಪೇಟೆಯ ವಿವಿದ ದೇವಾಲಯಗಳಲ್ಲಿ ವಿವಿಧ ದೇವಾಲಯಗಳಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ನಡೆಯಿತು. ಕರ್ಕಳ್ಳಿಯ ಕಟ್ಟೆ ಬಸವೇಶ್ವರ ದೇವಾಲಯ ಹಾಗೂ ದೇವಾಲಯದ ಸಮೀಪವಿರುವ ನಾಗಬನದಲ್ಲಿ ಅರ್ಚಕರಾದ ವಿರುಪಾಕ್ಷ ಪುರೋಹಿತ್ವದಲ್ಲಿ ಅರ್ಚನೆ, ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಗದೇವರಿಗೆ ಹಾಲು, ಎಳನೀರು, ಅರಿಶಿನ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಸೋಮೇಶ್ವರ ದೇವಾಲಯ, ಅಯ್ಯಪ್ಪಸ್ವಾಮಿ ದೇವಾಲಯ, ಮಸಗೂಡು ಗ್ರಾಮದ ದೇವಾಲಯಗಳಲ್ಲಿ ಷಷ್ಟಿಯ ವಿಶೇಷ ಪೂಜೆ ನೆರವೇರಿತು.











